
ವಾಷಿಂಗ್ ಟನ್ ಡಿ.ಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ಈಗ ಟ್ರಂಪ್ ಸರ್ಕಾರದಿಂದ ಹೊರಬಂದಿದ್ದು, ಇಂದು ಅವರಿಗೆ ಶ್ವೇತ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ black& black ನಲ್ಲಿ ಮಿಂಚುತ್ತಿದ್ದ ಎಲಾನ್ ಮಸ್ಕ್ ಅವರ Black Eye ಅರ್ಥಾತ್ (ನೀಲಿಗಟ್ಟಿದ ಕಣ್ಣು). ಮಸ್ಕ್ ಅವರ ಕಪ್ಪಾದ ಕಂಗಳು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಕಣ್ಣುಗಳ ಸುತ್ತ ಕಪ್ಪು ಕಲೆ ಮೂಡುವುದಕ್ಕೆ ನಿಶ್ಚಿತವಾಗಿಯೂ ಯಾರೋ ಪಂಚ್ ಮಾಡಿರುವುದೇ ಕಾರಣ, ಆದರೆ ಅದ್ಯಾರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಕುಸ್ತಿ ಫೆಡರೇಷನ್ WWE ನಲ್ಲಿಯೂ ಗುರುತಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಟ್ರಂಪ್ ಜೊತೆ ಅತ್ಯುತ್ತಮ ಸ್ನೇಹ ಹೊಂದಿದ್ದ ಮಸ್ಕ್ ಟ್ರಂಪ್ ಸರ್ಕಾರದ one beautiful bill ನ್ನು ವಿರೋಧಿಸಿ ತಮಗೆ ನೀಡಿದ್ದ DOGE ಜವಾಬ್ದಾರಿಯಿಂದ ಹೊರಬರುತ್ತಿರುವುದಾಗಿ ಘೋಷಿಸಿದ್ದರು. ಇದಕ್ಕೂ ಮಸ್ಕ್ ಅವರ ಕಣ್ಣು ಕಪ್ಪಗಾಗಿರುವುದಕ್ಕೂ ಸಂಬಂಧವೇನಾದರೂ ಇದೆಯಾ? ಎಂದೆಲ್ಲಾ ಯೋಚಿಸಲು ಹೋಗಬೇಡಿ. ಎಲ್ಲಾ ಊಹಾಪೋಹಗಳಿಗೂ ಮಸ್ಕ್ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ತನ್ನ ಮಗ ಮುಖಕ್ಕೆ ಗುದ್ದಿದ ಪರಿಣಾಮ ತಮ್ಮ ಕಣ್ಣಿಗೆ ಈ ಪರಿಸ್ಥಿತಿ ಬಂದಿದೆ ಎಂದು ಮಸ್ಕ್ ಹೇಳಿದ್ದಾರೆ.
ಕಣ್ಣಿನ ಸುತ್ತ ಗಾಯಗಳಾಗಿದ್ದು ಹೇಗೆ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಸ್ಕ್, "ನಾನು ಸ್ವಲ್ಪ X ಜೊತೆ ಕುದುರೆ ಸವಾರಿ ಮಾಡುತ್ತಿದ್ದೆ, ಮತ್ತು ನಾನು, 'ಮುಂದೆ ನನ್ನ ಮುಖಕ್ಕೆ ಗುದ್ದಿ' ಎಂದು ಹೇಳಿದೆ, ಆತ ಗುದ್ದಿದ. ಐದು ವರ್ಷದ ಮಗು ಕೂಡ ನಿಮ್ಮ ಮುಖಕ್ಕೆ ಗುದ್ದುವುದು ನಿಜವಾಗಲೂ ಹೀಗಾಗುತ್ತದೆ..." ಎಂದು ಮಸ್ಕ್ ಹೇಳಿದ್ದಾರೆ.
"ಆ ಸಮಯದಲ್ಲಿ ನನಗೆ ನಿಜವಾಗಿಯೂ ಹೆಚ್ಚು ನೋವು ಅನಿಸಲಿಲ್ಲ ಆದರೆ ಅದು ನೋವುಂಟು ಮಾಡುತ್ತದೆ" ಎಂದು ಮಸ್ಕ್ ಹೇಳಿದ್ದಾರೆ.
ಸರ್ಕಾರಿ ದಕ್ಷತೆ ಇಲಾಖೆ (DOGE) ನಲ್ಲಿ ಟೆಸ್ಲಾ ಮುಖ್ಯಸ್ಥರ ಕೊನೆಯ ದಿನವನ್ನು ಗುರುತಿಸಲು ಟ್ರಂಪ್ ಮಸ್ಕ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಮಸ್ಕ್ ಸರ್ಕಾರದ ಕೆಲಸದ ಬಗ್ಗೆ ಹೆಚ್ಚುತ್ತಿರುವ ಭ್ರಮನಿರಸನವನ್ನು ವ್ಯಕ್ತಪಡಿಸಿದ್ದರು ಆದರೆ ಅವರು "ಸ್ನೇಹಿತ ಮತ್ತು ಸಲಹೆಗಾರ" ವಾಗಿ ಉಳಿಯುತ್ತಾರೆ ಎಂದು ಹೇಳಿದರು.
ಮಸ್ಕ್ ಅವರ ಬಲಗಣ್ಣಿನ ಪಕ್ಕದಲ್ಲಿರುವ ಮೂಗೇಟನ್ನು "ಗಮನಿಸಲಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ. ಆದರೆ "ನಿಮಗೆ X (ಮಸ್ಕ್ ಪುತ್ರ) ಅದನ್ನು ಮಾಡಿರಬಹುದು" ಎಂದು ಹೇಳಿದರು.
Advertisement