

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರ ಬಳಿ ನಿಮಗೆ ಎಷ್ಟು ಪತ್ನಿಯರು ಎಂದು ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಿರಿಯಾ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು, ಅವುಗಳನ್ನು ಅಭಿವೃದ್ಧಿಗೊಳಿಸಿ ಬಲಪಡಿಸುವ ಮಾರ್ಗಗಳು ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಸುಂಗಧ ದ್ರವ್ಯವನ್ನು ಅಲ್-ಶರಾ ಮತ್ತು ಅವರ ಸಿಬ್ಬಂದಿ ಮೇಲೆ ಸ್ಪ್ರೇ ಮಾಡಿದ ನಂತರ ಟ್ರಂಪ್, ಇದು ನಿಮ್ಮ ಪತ್ನಿಗೆ ನೀಡುತ್ತಿದ್ದೇನೆ. ನಿಮಗೆ ಎಷ್ಟು ನಿಮಗೆ ಎಷ್ಟು ಪತ್ನಿಯರು ಎಂದು ಲಘು ದಾಟಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಅಲ್-ಶರಾ ಒಬ್ಬಳು ಎಂದು ಉತ್ತರ ನೀಡಿ ನಕ್ಕಿದ್ದಾರೆ.
ಸಿರಿಯಾ ಮೇಲಿನ ನಿರ್ಬಂಧವನ್ನು 6 ತಿಂಗಳು ಅಮಾನತುಗೊಳಿಸುವುದಾಗಿ ಅಮೆರಿಕದ ಖಜಾನೆ ಇಲಾಖೆ ಘೋಷಿಸಿದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. 1946ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಸಿರಿಯಾದ ನಾಯಕರೊಬ್ಬರು ಅಮೆರಿಕಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದ್ದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ನಾಟಕೀಯ ಬದಲಾವಣೆಯನ್ನು ಸೂಚಿಸುತ್ತದೆ.
1946 ರಲ್ಲಿ ಫ್ರಾನ್ಸ್‌ನಿಂದ ಸಿರಿಯಾ ಸ್ವಾತಂತ್ರ್ಯ ಪಡೆದ ನಂತರ ಸಿರಿಯಾ ನಾಯಕರೊಬ್ಬರು ಶ್ವೇತಭವನಕ್ಕೆ ಮಾಡಿದ ಮೊದಲ ಅಧಿಕೃತ ಭೇಟಿಯಾಗಿತ್ತು. ಈ ಹಿಂದೆ ಅಲ್ ಶರಾ ಅವರನ್ನು ಉಗ್ರ ಎಂದು ಅಮೆರಿಕ ಕರೆದಿತ್ತು. ಅಷ್ಟೇ ಅಲ್ಲದೇ ಅಲ್ ಶರಾ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನ ಸಹ ಘೋಷಿಸಿತ್ತು. ಅಲ್-ಖೈದಾ ಜೊತೆ ಸಂಬಂಧ ಹೊಂದಿರುವ ಸಿರಿಯನ್ ಭಯೋತ್ಪಾದಕ ಗುಂಪಿನ ನಾಯಕ ಎಂದು ಅಮೆರಿಕ ಹೇಳಿತ್ತು.
Advertisement