

ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (AI) ಹೇಳುವುದೆಲ್ಲವನ್ನೂ ಕುರುಡಾಗಿ ನಂಬಬೇಡಿ" ಎಂದು Google ಮುಖ್ಯಸ್ಥ ಸುಂದರ್ ಪಿಚೈ ಅವರು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. AI ಹೂಡಿಕೆಯಿಂದ ಯಾರಿಗೂ ನಷ್ಟವಾಗದಂತೆಯೂ ಕಂಪನಿಗಳು ನಿಗಾ ವಹಿಸಬೇಕು ಎಂದು ಅವರು ಹೇಳಿದ್ದಾರೆ.
BBC ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಲ್ಫಾಬೆಟ್‌ನ ಭಾರತೀಯ-ಅಮೇರಿಕನ್ CEO, AI ಮಾದರಿಯಲ್ಲೂ ಕೆಲವು ದೋಷಗಳಿರುತ್ತವೆ. ಇತರ ಪರಿಕರಗಳ ಜೊತೆಗೆ ಅವುಗಳನ್ನು ಸಮತೋಲನಗೊಳಿಸುವಂತೆ ಬಳಕೆದಾರರನ್ನು ಒತ್ತಾಯಿಸಿದರು.
AI ತಂತ್ರಜ್ಞಾನ ಮಾತ್ರ ಅವಲಂಬಿಸುವ ಬದಲು ಉನ್ನತ ಮಾಹಿತಿ ಪರಿಸರ ವ್ಯವಸ್ಥೆಯನ್ನು ಹೊಂದುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ. ಇದಕ್ಕಾಗಿಯೇ ಜನರು ಗೂಗಲ್ ಹುಡುಕಾಟವನ್ನು ಸಹ ಬಳಸುತ್ತಾರೆ. ನಿಖರವಾದ ಮಾಹಿತಿ ಒದಗಿಸುವಲ್ಲಿ ಹೆಚ್ಚು ಆಧಾರಿತವಾದ ಇತರ ಉತ್ಪನ್ನಗಳು ನಮ್ಮಲ್ಲಿವೆ ಎಂದು ಪಿಚೈ ಬಿಬಿಸಿಗೆ ತಿಳಿಸಿದರು.
ಏನನ್ನಾದರೂ ಸೃಜನಾತ್ಮಕವಾಗಿ ಬರೆಯಲು ಬಯಸಿದರೆ" AI ಸಹಾಯಕವಾಗಿದ್ದರೂ, ಜನರು ಹೇಳುವುದೆಲ್ಲವನ್ನೂ ಕುರುಡಾಗಿ ನಂಬಬಾರದು. ಉತ್ತಮವಾದದ್ದಕ್ಕಾಗಿ ಈ ಪರಿಕರಗಳನ್ನು ಬಳಸಲು ಕಲಿಯಬೇಕು" ಎಂದು ಅವರು ಹೇಳಿದರು.
ತಜ್ಞರೊಂದಿಗೆ ಮಾತನಾಡುವ ಅನುಭವದ ಗುರಿಯೊಂದಿಗೆ ಮೇ ತಿಂಗಳಲ್ಲಿ ಗೂಗಲ್ ತನ್ನ ಜೆಮಿನಿ ಚಾಟ್‌ಬಾಟ್ ಅನ್ನು ಬಳಸಿಕೊಂಡು ಸರ್ಚ್ ನಲ್ಲಿ "AI ಮೋಡ್" ಅನ್ನು ಪರಿಚಯಿಸಿತು. ಇದು ಸಾಧ್ಯವಾದಷ್ಟು ನಿಖರವಾದ ಮಾಹಿತಿಯನ್ನು ನೀಡುವುದರಿಂದ ನಾವು ಹೆಮ್ಮೆಪಡುತ್ತೇವೆ. ಆದರೆ ಪ್ರಸ್ತುತ ಅತ್ಯಾಧುನಿಕ AI ತಂತ್ರಜ್ಞಾನದಲ್ಲಿ ಕೆಲವು ದೋಷಗಳಿರುತ್ತವೆ ಎಂದು ಅವರು ಹೇಳಿದ್ದಾರೆ.
Advertisement