

ಮೆಕ್ಸಿಕೋ ಚೆಲುವೆ ಫಾತಿಮಾ ಬಾಷ್ 2025 ರ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಬ್ಯಾಂಕಾಕ್‌ನಲ್ಲಿ ನಡೆದ 74 ನೇ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ, ಭಾರತ ಸೇರಿದಂತೆ ವಿಶ್ವದಾದ್ಯಂತದ 100 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಸೋಲಿಸಿ ಮಿಸ್ ಯೂನಿವರ್ಸ್ ಮೆಕ್ಸಿಕೋ 74 ನೇ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಪಡೆದುಕೊಂಡರು.
ಭಾರತ ಮಣಿಕಾ ಶರ್ಮ ಟಾಪ್ 30ಯಲ್ಲಿ ಸ್ಥಾನ
ಥೈಲ್ಯಾಂಡ್ ನ ಪ್ರವೀಣಾರ್ ಸಿಂಗ್ ಮೊದಲ ರನ್ನರ್ ಅಪ್, ವೆನೆಜುವೆಲಾದ ಸ್ಟೆಫನಿ ಅಬಾಸಾಲಿ ಎರಡನೇ ರನ್ನರ್ ಅಪ್ ಎಂದು ಘೋಷಿಸಲ್ಪಟ್ಟರು.
ಭಾರತದ ಮಣಿಕಾ ವಿಶ್ವಕರ್ಮ ಟಾಪ್ 30 ರಲ್ಲಿ ಅರ್ಹತೆ ಪಡೆದರೂ, ಕೊನೆಯದಾಗಿ ಟಾಪ್ 12 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
2025ರ ಮಿಸ್ ಯೂನಿವರ್ಸ್ ಟಾಪ್ 5
ಮೆಕ್ಸಿಕೊವನ್ನು ವಿಜೇತ ಎಂದು ಘೋಷಿಸಿದರೆ, ಮೊದಲ ರನ್ನರ್ ಅಪ್ ಥೈಲ್ಯಾಂಡ್‌ನ ಪ್ರವೀಣಾರ್ ಸಿಂಗ್.
2ನೇ ರನ್ನರ್ ಅಪ್: ವೆನೆಜುವೆಲಾ - ಸ್ಟೆಫನಿ ಅಬಾಸಾಲಿ
3ನೇ ರನ್ನರ್ ಅಪ್: ಫಿಲಿಪೈನ್ಸ್ - ಅಹ್ತಿಸಾ ಮನಾಲೊ
4ನೇ ರನ್ನರ್ ಅಪ್: ಕೋಟ್ ಡಿ'ಐವೊಯಿರ್ - ಒಲಿವಿಯಾ ಯಾಸೆ
Advertisement