
2025ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಈ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬದಲು ವೆನೆಜುವೆಲಾದ ವಿಪಕ್ಷ ನಾಯಕಿ ಮರಿಯಾ ಮಚಾದೊ ಅವರಿಗೆ ಲಭಿಸಿದೆ.
ನೋಬೆಲ್ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಮರಿಯಾ ಅವರು ಒಬ್ಬ ನಿರ್ಭೀತ ಹುಟ್ಟು ಹೋರಾಟಗಾರ್ತಿ. ರಾಕ್-ಸ್ಟಾರ್ ಆಕರ್ಷಣೆಯನ್ನು ಹೊಂದಿರುವ ಮರಿಯಾ ಅವರು ಈಗ ವೆನೆಜುವೆಲಾ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದಾರೆ.
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರ ಸರ್ವಾಧಿಕಾರದ ವಿರುದ್ಧ ಹೋರಾಡಿದ ಮರಿಯಾ ಅವರು, 2022ರಲ್ಲಿ ಸುಮಾಟೆ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದರು. ವೆನೆಜುವೆಲಾದಲ್ಲಿ ಚುನಾವಣಾ ಪಾರದರ್ಶಕತೆ ತರುವುದಕ್ಕಾಗಿ ಈ ಸಂಸ್ಥೆ ಹೋರಾಟಗಳನ್ನು, ಜನಾಂದೋಲಗಳನ್ನು ನಡೆಸಿತು.
ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳವಳಿಯ ಕೇಂದ್ರ ವ್ಯಕ್ತಿಯಾದ ಮರಿಯಾ ಕೊರಿನಾ ಮಚಾಡೊ ಪ್ಯಾರಿಸ್ಕಾ ಲ್ಯಾಟಿನ್ ಅಮೆರಿಕಾದಲ್ಲಿ ನಾಗರಿಕ ಹಕ್ಕಿನ ಹೋರಾಟದ ಪ್ರಮುಖ ಶಕ್ತಿಯಾಗಿದ್ದಾರೆ.
ದಶಕಗಳಿಂದ ಸರ್ವಾಧಿಕಾರಿ ನಿಕೋಲಸ್ ಮಡುರೊ ಅವರ ದಬ್ಬಾಳಿಕೆಯ ಆಡಳಿತವನ್ನು ಧಿಕ್ಕರಿಸಿ, ಬೆದರಿಕೆಗಳು, ಬಂಧನಗಳು ಮತ್ತು ರಾಜಕೀಯ ಕಿರುಕುಳವನ್ನು ಅನುಭವಿಸಿದ್ದಾರೆ. ನಿರಂತರ ಬೆದರಿಕೆ ಹಾಗೂ ಅಪಾಯವನ್ನು ಮೆಟ್ಟಿನಿಂತ ಮರಿಯಾ ಅವರು ವೆನೆಜುವೆಲಾದಲ್ಲಿ ಶಾಂತಿ ನೆಲೆಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.
ಶಾಂತಿಯುತ ಪ್ರತಿರೋಧ ಮತ್ತು ಮುಕ್ತ ಚುನಾವಣೆಗಳ ಒತ್ತಾಯದ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ.
ವೆನೆಜುವೆಲಾದ ರಾಜಕಾರಣಿ ಮತ್ತು ಕೈಗಾರಿಕಾ ಎಂಜಿನಿಯರ್ ಆಗಿರುವ ಮರಿಯಾ ಅವರು 2011 ರಿಂದ 2014 ರವರೆಗೆ ರಾಷ್ಟ್ರೀಯ ವಿಧಾನಸಭೆಯ ಚುನಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
2024ರ ಚುನಾವಣೆಯಲ್ಲಿ ಮಡುರೋ ಅವರನ್ನು ಪ್ರಶ್ನಿಸುವುದನ್ನು ನಿಷೇಧಿಸಲಾಯಿತು. ನಂತರ ವೆನೆಜುವೆಲಾದ ನಾಯಕನಿಗೆ ಪ್ರತಿರೋಧವನ್ನು ಹೆಚ್ಚಿಸಲು ಪ್ರಯತ್ನಿಸಿದ ನಂತರ ಮರಿಯಾ ಅವರ ಬಂಧಿಸಲಾಯಿತು ಮತ್ತು ನಂತರ ಬಿಡುಗಡೆ ಮಾಡಲಾಯಿತು.
1967ರ ಅಕ್ಟೋಬರ್ 7 ರಂದು ಜನಿಸಿದ ಮರಿಯಾ ಕೊರಿನಾ ಮಚಾದೊ ಅವರು ಇಂಡಸ್ಟ್ರಿಯಲ್ ಇಂಜಿನಿಯರಿಂಗ್(ಕ್ಯಾಟೊಲಿಕಾ ಆ್ಯಂಡ್ರೆಸ್ ಬೆಲ್ಲೋ ವಿವಿಯಿಂದ) ಪದವಿ ಪಡೆದಿದ್ದಾರೆ.
ವೃತ್ತಿಯಲ್ಲಿ ಇಂಡಸ್ಟ್ರಿಯಲ್ ಇಂಜಿನಿಯರ್, ಯುಸಿಎಬಿ ಸಂಸ್ಥೆಯಲ್ಲಿ ಪ್ರಾಧ್ಯಾಪಕಿ, ರಾಜಕೀಯ ವ್ಯಕ್ತಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದಾರೆ.
Advertisement