Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

"ಐಫೆಲ್ ಟವರ್ ಶೀಘ್ರದಲ್ಲೇ ಕೆಡವಲಾಗುವುದು" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದ್ದಾರೆ.
Eiffel Tower
ಎಫಿಲ್ ಟವರ್ online desk
Updated on

ನವದೆಹಲಿ: ಪ್ಯಾರಿಸ್ ನಲ್ಲಿರುವ ಜಗದ್ವಿಖ್ಯಾತ ಎಫಿಲ್ ಟವರ್ (Eiffel Tower) ಶೀಘ್ರವೇ ಇತಿಹಾಸದ ಪುಟಗಳನ್ನು ಸೇರಲಿದೆ ಎಂಬ ಸುದ್ದಿ ವ್ಯಾಪಕವಾಗಿ ಪ್ರಚಾರವಾಗುತ್ತಿದೆ.

ಇತ್ತೀಚಿನ ಸಾಮಾಜಿಕ ಮಾಧ್ಯಮ ಹೇಳಿಕೆಗಳು ಪ್ಯಾರಿಸ್‌ನ ಐಫೆಲ್ ಟವರ್ ನ್ನು 2026 ರಲ್ಲಿ ಕೆಡವಲು ನಿರ್ಧರಿಸಲಾಗಿದೆ ಎಂಬ ವ್ಯಾಪಕ ಕಳವಳವನ್ನು ಹುಟ್ಟುಹಾಕಿವೆ. X ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟಗೊಂಡಿರುವ ಈ ಪೋಸ್ಟ್‌ಗಳು, "ಕಾರ್ಯಾಚರಣಾ ಗುತ್ತಿಗೆ" ಅವಧಿ ಮುಗಿಯುತ್ತಿದ್ದು, ರಚನೆಯಲ್ಲಿನ ಸಹಜ ದುರಸ್ತಿಗಳು, ದುಬಾರಿ ನಿರ್ವಹಣೆ ಮತ್ತು ಸಾರ್ವಜನಿಕ ದೂರುಗಳ ಕಾರಣದಿಂದಾಗಿ 2026 ರಲ್ಲಿ ಎಫಿಲ್ ಟವರ್ ನ್ನು ಕೆಡವಲಾಗುತ್ತದೆ ಎಂದು ಹೇಳುತ್ತಿವೆ.

ಇದಕ್ಕೆ ಪೂರಕವೆಂಬಂತೆ, ಎಫಿಲ್ ಟವರ್ ನ್ನು ಅಕ್ಟೋಬರ್ 2, 2025 ರಿಂದ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಸಂದರ್ಶಕರಿಗೆ ಮುಚ್ಚಲಾಗಿದೆ. ಪ್ರತಿಭಟನಾಕಾರರು ಪ್ಲೇಸ್ ಡಿ'ಇಟಲಿಯಿಂದ ಸ್ಮಾರಕದ ಕಡೆಗೆ ಮೆರವಣಿಗೆ ನಡೆಸುತ್ತಿದ್ದಂತೆ, ಅದರ ಆಡಳಿತ ಮಂಡಳಿಯು ಸಂದರ್ಶಕರಿಗೆ ಎಫಿಲ್ ಟವರ್ ಪ್ರವೇಶಿಸುವುದನ್ನು ಮುಚ್ಚಿರುವುದನ್ನು ದೃಢಪಡಿಸುವ ಹೇಳಿಕೆಯನ್ನು ನೀಡಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

"ಐಫೆಲ್ ಟವರ್ ಶೀಘ್ರದಲ್ಲೇ ಕೆಡವಲಾಗುವುದು" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದ್ದಾರೆ.

ಈ ಹೇಳಿಕೆಗಳು ವ್ಯಾಪಕ ಕಳವಳಕ್ಕೆ ಕಾರಣವಾಗಿವೆ, ಆದರೆ ಅವುಗಳಲ್ಲಿ ಯಾವುದೇ ಸತ್ಯವಿಲ್ಲ. ಎಫಿಲ್ ಟವರ್ ಕೆಡವುದು ಇನ್ನೂ ನಿರ್ಧರಿತವಾಗಿಲ್ಲ ಮತ್ತು ನಿಮ್ಮ ಕನಸಿನ ಪ್ಯಾರಿಸ್ ಪ್ರವಾಸ ಸುರಕ್ಷಿತವಾಗಿಯೇ ಇದೆ ಎಂದು ಸಂದರ್ಶಕರು ಖಚಿತವಾಗಿ ಹೇಳಬಹುದು ಎಂದು ಎಫಿಲ್ ಟವರ್ ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಹೇಳಿದೆ.

Eiffel Tower
ವಿಶೇಷ ಚಿತ್ರ ಲೇಖನ: 'ಐರನ್ ಲೇಡಿ ಆಫ್ ಪ್ಯಾರೀಸ್' ಐಫೆಲ್ ಟವರ್ ಗೆ 130 ವರ್ಷ!

ಸುದ್ದಿ ಹರಡಿದ್ದು ಹೇಗೆ?

2026 ರಲ್ಲಿ ಎಫಿಲ್ ಟವರ್ ನ್ನು ಕೆಡವಲಾಗುವುದು ಎಂಬ ಹೇಳಿಕೆಯು ಸೆಪ್ಟೆಂಬರ್ 18, 2025 ರಂದು ವಿಡಂಬನಾತ್ಮಕ ವಿಷಯಕ್ಕೆ ಹೆಸರುವಾಸಿಯಾದ ಟ್ಯಾಪಿಯೋಕಾ ಟೈಮ್ಸ್ ವೆಬ್‌ಸೈಟ್ ಪ್ರಕಟಿಸಿದ ವಿಡಂಬನಾತ್ಮಕ ಲೇಖನದಿಂದ ಹುಟ್ಟಿಕೊಂಡಿದೆ.

"ನಾವು ಚೆನ್ನಾಗಿ ನಿರ್ವಹಿಸಿದ್ದೇವೆ. ಇದು ಬಹಳ ಸಮಯದಿಂದ ಜನಪ್ರಿಯವಾಗಿದೆ ಆದರೆ ಯಾರೂ ಅಲ್ಲಿಗೆ ಹೋಗುವುದಿಲ್ಲ, ಆದ್ದರಿಂದ ನಾವು ಅದನ್ನು ಮುಚ್ಚುತ್ತಿದ್ದೇವೆ. ಇಂಟರ್ನೆಟ್ ಅಂತಿಮವಾಗಿ ನಮ್ಮನ್ನು ಹಿಡಿದಿಟ್ಟುಕೊಂಡಿದೆ ಮತ್ತು ಚಿಕ್ಕ ಮಕ್ಕಳು ಇನ್ನು ಮುಂದೆ ಮೇಲಕ್ಕೆ ಹೋಗಲು ಬಯಸುವುದಿಲ್ಲ ಎಂದು ತೋರುತ್ತದೆ. ಗೋಪುರವನ್ನು ಸುತ್ತುವರೆದಿರುವ ಡ್ರೋನ್‌ಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವನ್ನು ನಾವು ಗಮನಿಸಿದ್ದೇವೆ, ಆದ್ದರಿಂದ ಬಹುಶಃ ಅದು ಹಾಜರಾತಿಯಲ್ಲಿ ಇಳಿಕೆಗೆ ಕಾರಣವಾಗಬಹುದು" ಎಂಬಂತಹ ಕಾಲ್ಪನಿಕ "ವಕ್ತಾರ" ಹೇಳಿಕೆಗಳನ್ನು ಲೇಖನವು ಉಲ್ಲೇಖಿಸಿತ್ತು.

ಎಫಿಲ್ ಟವರ್ "ಅಳಿಲುಗಳು ಮತ್ತು ಪಾರಿವಾಳಗಳಿಂದ" ತುಂಬಿದೆ ಮತ್ತು ವಾಟರ್ ಸ್ಲೈಡ್, ಲಾಸ್ ವೇಗಾಸ್ ಶೈಲಿಯ ಸಂಗೀತ ಸ್ಥಳ ಅಥವಾ ಹಿಪ್ಪಿಗಳಿಂದ ತುಂಬಿದ "ಪ್ಯಾರಿಸ್ ಬರ್ನಿಂಗ್ ಮ್ಯಾನ್" ನಂತಹ ಬದಲಿ ಸ್ಥಳಗಳನ್ನು ಈ ವಿಡಂಬನಾತ್ಮಕ ಲೇಖನದಲ್ಲಿ ಸಂದರ್ಶಕರಿಗೆ ಸೂಚಿಸಲಾಗಿದೆ.

"ಯಾವುದೇ ರೀತಿಯಲ್ಲಿ, ಏನೇ ಸಂಭವಿಸಿದರೂ, ಕೆಡವುವಿಕೆ 2026 ರ ಆರಂಭದಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದ ನೀವು ವಯಸ್ಸಾದವರಾಗಿದ್ದರೆ ಮತ್ತು ಹಳೆಯ ನೆನಪುಗಳಿದ್ದರೆ ಈಗ ಪ್ಯಾರಿಸ್‌ಗೆ ಭೇಟಿ ನೀಡುವ ಸಮಯ" ಎಂದು ಲೇಖನ ಹೇಳಿದೆ. ಈ ವಿಡಂಬನಾತ್ಮಕ ನಿರೂಪಣೆಯನ್ನು ಎತ್ತಿಕೊಂಡು ವೈರಲ್ ಎಕ್ಸ್ ಪೋಸ್ಟ್‌ಗಳ ಮೂಲಕ ಸುದ್ದಿ ಹರಡಲಾಗಿದೆ.

ಕೆಡವುವಿಕೆಯ ಅಧಿಕೃತ ದೃಢೀಕರಣವಿಲ್ಲ

ಎಫಿಲ್ ಟವರ್ ಕೆಡವುವಿಕೆಯ ಸುದ್ದಿಯನ್ನು ಯಾವುದೇ ವಿಶ್ವಾಸಾರ್ಹ ಪುರಾವೆಗಳು ಬೆಂಬಲಿಸಿಲ್ಲ. ಎಫಿಲ್ ಟವರ್ ನಿರ್ವಹಿಸುವ ಸೊಸೈಟೆ ಡಿ'ಎಕ್ಸ್‌ಪ್ಲೋಯಿಟೇಶನ್ ಡಿ ಲಾ ಟೂರ್ ಐಫೆಲ್ (SETE) ಆಗಲಿ, ಪ್ಯಾರಿಸ್ ನಗರವಾಗಲಿ ಅಥವಾ ಫ್ರೆಂಚ್ ಪರಂಪರೆ ಅಧಿಕಾರಿಗಳಾಗಲಿ ಸ್ಮಾರಕವನ್ನು ಕೆಡವಲು ಯೋಜನೆಗಳನ್ನು ಸೂಚಿಸುವ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com