
ಸಾಂಟಾ ಬಾರ್ಬರಾ: ಪಾಪ್‌ಸ್ಟಾರ್ ಕೇಟಿ ಪೆರ್ರಿ ಮತ್ತು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾದಲ್ಲಿ ಹಡಗಿನಲ್ಲಿ ಪರಸ್ಪರ ಚುಂಬಿಸಿಕೊಳ್ಳುವ ಮೂಲಕ ಡೇಟಿಂಗ್ ವದಂತಿಗಳನ್ನು ದೃಢಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದ್ದು, ಇಬ್ಬರೂ ಒಟ್ಟಿಗೆ ಆನಂದಿಸುತ್ತಿರುವುದನ್ನು ತೋರಿಸುತ್ತವೆ. ಇದು ಹಲವು ತಿಂಗಳಿಗಳಿಂದ ಕೇಳಿಬರುತ್ತಿದ್ದ ಡೇಟಿಂಗ್ ವದಂತಿಗಳಿಗೆ ಬ್ರೇಕ್ ಹಾಕಿದ್ದಂತೆ ಕಂಡುಬರುತ್ತಿದೆ.
ಮಾಂಟ್ರಿಯಲ್‌ನಲ್ಲಿ ಇಬ್ಬರು ಡಿನ್ನರ್ ನಲ್ಲಿ ಕಾಣಿಸಿಕೊಂಡ ನಂತರ ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಇಬ್ಬರು ಸ್ವಲ್ಪ ದೂರ ಇದ್ದಾರೆ ಎಂದು ವರದಿಯಾಗಿತ್ತು. ಇದಾದ ಕೆಲವು ದಿನಗಳ ನಂತರ ಇದೀಗ ಇಬ್ಬರು ಪರಸ್ಪರ ಚುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಈ ಫೋಟೋದಲ್ಲಿ ಇಬ್ಬರು ತಬ್ಬಿಕೊಂಡಿದ್ದು, ಪೆರ್ರಿ ಕೆನ್ನೆಗೆ ಟ್ರುಡೊ ಮುತ್ತು ನೀಡುತ್ತಿರುವುದು ಕಂಡುಬಂದಿದೆ. ಪೆರ್ರಿ ಕಪ್ಪು ಈಜುಡುಗೆ ಧರಿಸಿ ಶರ್ಟ್ ಧರಿಸದ ಟ್ರೂಡೊ ಜೊತೆಗಿದ್ದಾರೆ. ಇಬ್ಬರು ತಬ್ಬಿಕೊಂಡಿದ್ದು, ಟ್ರೂಡೊ ಪೆರ್ರಿಯ ಕೆನ್ನೆಗೆ ಮುತ್ತಿಡುತ್ತಿರುವುದು ಫೋಟೋದಲ್ಲಿದೆ.
ಜಸ್ಟಿನ್ ಟ್ರುಡೊ, ಆಗಸ್ಟ್ 2023 ರಲ್ಲಿ 18 ವರ್ಷಗಳ ನಂತರ ಅವರ ಪತ್ನಿ ಸೋಫಿ ಗ್ರ್ಗೊಯಿರ್ ಟ್ರುಡೊ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದರು. ಮಾಜಿ ದಂಪತಿಗೆ ಮೂವರು ಮಕ್ಕಳಿದ್ದಾರೆ.
Advertisement