

ಲಂಡನ್: ಉತ್ತರ ಇಂಗ್ಲೆಂಡ್‌ನಲ್ಲಿ ಜನಾಂಗೀಯ ದಾಳಿ ನಡೆದಿದ್ದು, ಭಾರತೀಯ ಮೂಲದ 20 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಲಾಗಿದೆ. ಶಂಕಿತ ವ್ಯಕ್ತಿಯ ಪತ್ತೆಗೆ ಯುಕೆ ಪೊಲೀಸರು ತುರ್ತು ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ರಸ್ತೆಯಲ್ಲಿ ಸಂಕಷ್ಟದಲ್ಲಿ ಬಿದಿದ್ದ ಸಂತ್ರಸ್ತೆಯನ್ನು ಶನಿವಾರ ಸಂಜೆ ವಾಲ್ಸಾಲ್‌ನ ಪಾರ್ಕ್ ಹಾಲ್ ಪ್ರದೇಶಕ್ಕೆ ಕರೆಸಲಾಯಿತು ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ತಿಳಿಸಿದ್ದಾರೆ. ಶಂಕಿತನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದು ಜನಾಂಗೀಯವಾಗಿ ಉಲ್ಬಣಗೊಂಡ ದಾಳಿ" ಎಂದು ಪರಿಗಣಿಸಿರುವುದಾಗಿ ಅವರು ತಿಳಿಸಿದ್ದಾರೆ.
"ಇದು ಯುವತಿ ಮೇಲಿನ ಭಯಾನಕ ದಾಳಿಯಾಗಿದ್ದು, ಆರೋಪಿಯನ್ನು ಬಂಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಡಿಟೆಕ್ಟಿವ್ ಸೂಪರಿಂಟೆಂಡೆಂಟ್ (ಡಿಎಸ್) ರೊನಾನ್ ಟೈರರ್ ಭಾನುವಾರ ಹೇಳಿದ್ದಾರೆ.
ಸಾಕ್ಷ್ಯಗಳನ್ನು ಸಂಗ್ರಹಿಸಲು ಅಧಿಕಾರಿಗಳ ತಂಡಗಳನ್ನು ರಚಿಸಿದ್ದೇವೆ. ದಾಳಿಕೋರನ ವೈಯಕ್ತಿಕ ವಿವರಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಇದರಿಂದ ಆತನನ್ನು ಸಾಧ್ಯವಾದಷ್ಟು ಬೇಗ ಕಸ್ಟಡಿಗೆ ತೆಗೆದುಕೊಳ್ಳಬಹುದು. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಯ ಚಲನವಲನ ಕಂಡುಬಂದಲ್ಲಿ ಕೂಡಲೇ ಮಾಹಿತಿ ತಿಳಿಸುವಂತೆ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
Advertisement