
ನ್ಯೂಯಾರ್ಕ್: ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೆ ಮುಜುಗರಕ್ಕೊಳಗಾದ ಪ್ರಸಂಗ ನಡೆದಿದೆ. ಕೇವಲ 4 ಸೆಕೆಂಡ್, ಒಂದು ವಾಕ್ಯದಲ್ಲಿಯೇ ಅದರ ನಿಜವಾದ ಬಣ್ಣ ಬಯಲಾಗಿದೆ. ಹೌದು, ಇತ್ತೀಚಿಗೆ ಹಮಾಸ್ ನಾಯಕರ ನಿವಾಸವನ್ನು ಗುರಿಯಾಗಿಸಿಕೊಂಡು ಕತಾರ್ ನಲ್ಲಿ ಇಸ್ರೇಲ್ ನಡೆಸಿದ ದಾಳಿ ಕುರಿತು ವಿಶ್ವಸಂಸ್ಥೆಯಲ್ಲಿ ನಡೆಯುತ್ತಿದ್ದ ಚರ್ಚೆಯ ವೇಳೆ ಇದು ನಡೆದಿದೆ.
ವಕೀಲರು ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಹಿಲ್ಲೆಲ್ ನ್ಯೂಯರ್ ಅವರು ಕತಾರ್ "ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದು, ಗಲ್ಫ್ ರಾಷ್ಟ್ರ ಭಯೋತ್ಪಾದನೆಗೆ ನೆರವು ನೀಡುತ್ತಿದೆ (sponsor of terror) ಎಂದು ಕರೆದಾಗ ಈ ಘಟನೆ ನಡೆಯಿತು.
ಕತಾರ್ 2012 ರಿಂದ ಯುಎಸ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾದ ಹಮಾಸ್‌ನ ರಾಜಕೀಯ ಚರ್ಚೆಗೆ ಅವಕಾಶ ನೀಡುತ್ತಿದೆ. ಇಸ್ರೇಲ್ ನಡೆಯನ್ನು ಖಂಡಿಸಿದ್ದಕ್ಕಾಗಿ ಯುಎನ್ ಮುಖ್ಯಸ್ಥರ ವಿರುದ್ಧವೂ ನ್ಯೂಯರ್ ವಾಗ್ದಾಳಿ ನಡೆಸಿದರು.
ಭಾಷಣಕ್ಕೆ ಅಡ್ಡಿಪಡಿಸಲು ಪಾಕ್ ಪ್ರತಿನಿಧಿ ಯತ್ನ:
2011ರಲ್ಲಿ ಪಾಕಿಸ್ತಾನದಲ್ಲಿ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಕೊಂದಾಗ ನ್ಯಾಯಯುತವಾಗಿದೆ ಎಂದು ಅಂದಿನ ವಿಶ್ವಸಂಸ್ಥೆಯ ಮುಖ್ಯಸ್ಥರು ಹೇಳಿದ್ದರು ಎಂದು ನ್ಯೂಯರ್ ಹೇಳುತ್ತಿದ್ದಂತೆಯೇ ಮಧ್ಯೆ ಬಾಯಿ ಹಾಕಿದ ಪಾಕಿಸ್ತಾನದ ಪ್ರತಿನಿಧಿ, ಬಿಲ್ ಲಾಡೆನ್ ಹಾಗೂ ಪಾಕಿಸ್ತಾನದ ಹೆಸರನ್ನು ಬಳಸದಂತೆ ತಡೆಹಾಕಲು ಪ್ರಯತ್ನಿಸಿದರು. ಯಾವುದೇ ಭಾಷಣಕಾರರು ವಿಶ್ವಸಂಸ್ಥೆ ನಿಯಮಗಳು ಮತ್ತು ಸಾರ್ವಭೌಮ ಸದಸ್ಯ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಯ ತತ್ವಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು (UNHRC chairperson) ಕೇಳಿಕೊಂಡರು. ಆಧಾರ ರಹಿತ ಆರೋಪವನ್ನು ನಿರಾಕರಿಸುತ್ತೇವೆ ಎಂದು ಪಾಕಿಸ್ತಾನ ಹೇಳಿತು.
ಆದಾಗ್ಯೂ, ನ್ಯೂಯರ್ ನತ್ತ ಮೈಕ್ ತಿರುಗಿಸಿದ UNHRC ಮುಖ್ಯಸ್ಥರು, ಇನ್ನೂ ಕೇವಲ ನಾಲ್ಕು ಸೆಕೆಂಡ್ ಗಳಲ್ಲಿ ತಮ್ಮ ಭಾಷಣವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಆಗ ಭಾಷಣ ಮುಂದುವರೆಸಿದ ನ್ಯೂಯರ್, "ಮಿಸ್ಟರ್ ಪ್ರೆಸಿಡೆಂಟ್, ಪಾಕಿಸ್ತಾನ ಭಯೋತ್ಪಾದನೆಯ ಮತ್ತೊಂದು ಪ್ರಾಯೋಜಕ ರಾಷ್ಟ್ರ ಎಂದು ಹೇಳುವ ಮೂಲಕ ಗುಡುಗಿದರು. ಆ ಮೂಲಕ ಪಾಕ್ ಪ್ರತಿನಿಧಿಯನ್ನು ಮುಜುಗರಕ್ಕೀಡುಮಾಡಿದರು.
Advertisement