
ವಿಶ್ವಸಂಸ್ಥೆ: ಬಲೋಚಿಸ್ತಾನ್ ಲಿಬರೇಷನ್ ಆರ್ಮಿ (Bla) ಮತ್ತು ಮಜೀದ್ ಬ್ರಿಗೇಡ್ ಸಂಘಟನೆಗಳನ್ನು ವಿದೇಶಿ ಉಗ್ರರ ಸಂಘಟನೆ ಎಂದು ಅಮೆರಿಕ ಘೋಷಿಸಿದ ನಂತರ ಅವುಗಳನ್ನು ವಿಶ್ವಸಂಸ್ಥೆಯಲ್ಲಿ ನಿರ್ಬಂಧಿಸುವ ಪಾಕಿಸ್ತಾನ ಮತ್ತು ಚೀನಾ ಪ್ರಯತ್ನವನ್ನು ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ತಡೆದಿವೆ.
ಬಲೂಚ್ ವಿಮೋಚನಾ ಸೇನೆ ಮತ್ತು ಅದರ ಆತ್ಯಾಹುತಿ ದಳವಾದ ಮಜೀದ್ ಬ್ರಿಗೇಡ್ ಅಲ್ ಖೈದಾ ಅಥವಾ ISIL ನೊಂದಿಗೆ ಸಂಪರ್ಕದಲ್ಲಿವೆ ಎಂಬುದಕ್ಕೆ ಯಾವುದೇ ಸೂಕ್ತ ಪುರಾವೆಗಳಿಲ್ಲ ಎಂಬುದನ್ನು ಅಮೆರಿಕ ಮತ್ತಿತರ ಮಿತ್ರ ರಾಷ್ಟ್ರಗಳು ಪರಿಗಣಿಸಿವೆ.
1267ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಅಲ್-ಖೈದಾ, ತಾಲಿಬಾನ್ ಮತ್ತು ISIL ಗೆ ಸಂಬಂಧಿಸಿರುವ ವ್ಯಕ್ತಿಗಳು ಅಥವಾ ಸಂಘಟನೆಗೆ ಸೇರಿದ ಕಾರ್ಯಕರ್ತರ ಪ್ರಯಾಣಕ್ಕೆ ನಿರ್ಬಂಧ, ಆಸ್ತಿ ಹಾಗೂ ಶಸಾಸ್ತ್ರಗಳ ಮುಟ್ಟುಗೋಲಿಗೆ ಅವಕಾಶ ನೀಡುತ್ತದೆ.
ಈ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಮತ್ತು ಅದರ ಆತ್ಮಾಹುತಿ ವಿಭಾಗವಾದ ಮಜೀದ್ ಬ್ರಿಗೇಡ್ ನಿರ್ಬಂಧಿಸುವಂತೆ ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಮನವಿ ಸಲ್ಲಿಸಿದ್ದವು.
ISIL-K ಅಲ್-ಖೈದಾ, ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್, BLA ಮತ್ತು ಮಜೀದ್ ಬ್ರಿಗೇಡ್-ಆಫ್ಘಾನಿಸ್ತಾನದಿಂದ ಗಡಿಯಾಚೆಗಿನ ದಾಳಿಗಳನ್ನು ನಡೆಸುತ್ತಿವೆ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ಅಸಿಮ್ ಇಫ್ತಿಕರ್ ಅಹ್ಮದ್ ಬುಧವಾರ ಹೇಳಿದ್ದರು. BLA ಮತ್ತು ಮಜೀದ್ ಬ್ರಿಗೇಡ್ ಸಂಘಟನೆಗಳನ್ನು ನಿರ್ಬಂಧ ಪಟ್ಟಿಗೆ ಸೇರಿಸಬೇಕು ಎಂದು 1267ರ ನಿರ್ಬಂಧ ಸಮಿತಿ ಮುಂದೆ ಮನವಿ ಸಲ್ಲಿಸಿದ್ದರು.
ಬಲೋಚಿಸ್ತಾನ್ ಲಿಬರೇಷನ್ ಆರ್ಮಿ (Bla) ಮತ್ತು ಮಜೀದ್ ಬ್ರಿಗೇಡ್ ಸಂಘಟನೆಗಳನ್ನು ವಿದೇಶಿ ಉಗ್ರರ ಸಂಘಟನೆ ಎಂದು ಕಳೆದ ತಿಂಗಳು ಅಮೆರಿಕ ಘೋಷಿಸಿತ್ತು.
Advertisement