H-1B ವೀಸಾ ಶುಲ್ಕ ಹೆಚ್ಚಳ ಗೊಂದಲ: ಯಾರಿಗೆ ಅನ್ವಯ? Donald Trump ಸರ್ಕಾರ ಕೊಟ್ಟ ಸ್ಪಷ್ಟನೆ ಏನು?

ನೂತನ ವೀಸಾ ಶುಲ್ಕವು ಭಾನುವಾರ ಇಂದಿನಿಂದ ಜಾರಿಗೆ ಬರುತ್ತದೆ. ಇದು ಒಂದು ವರ್ಷದ ನಂತರ ಮುಕ್ತಾಯಗೊಳ್ಳಲಿದೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕದ ವಲಸೆ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಉದ್ದೇಶದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೆಚ್-1ಬಿ ವೀಸಾ ಶುಲ್ಕ ಹೆಚ್ಚಳ ಮತ್ತು ಗೋಲ್ಡನ್ ವೀಸಾ ಯೋಜನೆಯು ಕೆಲವು ವಲಸೆ ನೌಕರರನ್ನು ಗೊಂದಲಕ್ಕೀಡು ಮಾಡಿದೆ.

ಅಮೆರಿಕ ಸರ್ಕಾರವು ಕೌಶಲ್ಯಪೂರ್ಣ ತಂತ್ರಜ್ಞಾನ ನೌಕರರಿಗೆ ವೀಸಾಗಳ ಮೇಲಿನ ಹೊಸ 100,000 ಡಾಲರ್ ಶುಲ್ಕವು ಹೊಸ ಅರ್ಜಿದಾರರಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಪ್ರಸ್ತುತ ವೀಸಾ ಹೊಂದಿರುವವರಿಗೆ ಅಲ್ಲ ಎಂದು ಸ್ಪಷ್ಟಪಡಿಸಲು ಪರದಾಡಬೇಕಾಯಿತು.

ಮೊನ್ನೆ ಶುಕ್ರವಾರ ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರೊಂದಿಗೆ ಅಧ್ಯಕ್ಷರು, H-1B ವೀಸಾಗಳು ಎಂದು ಕರೆಯಲ್ಪಡುವ - ತಂತ್ರಜ್ಞಾನ ಕಂಪನಿಗಳು ತುಂಬಲು ಕಷ್ಟಕರವೆಂದು ಭಾವಿಸುವ ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಹೊಸ ಶುಲ್ಕವನ್ನು ವಿಧಿಸುವ ಘೋಷಣೆಗೆ ಸಹಿ ಹಾಕಿದರು.

ನೂತನ ಶುಲ್ಕ ಯಾರಿಗೆ ಅನ್ವಯ?

ಈಗಾಗಲೇ H-1B ವೀಸಾಗಳನ್ನು ಹೊಂದಿರುವವರು ಮತ್ತು ಪ್ರಸ್ತುತ ದೇಶದ ಹೊರಗೆ ಇರುವವರಿಗೆ ಮರು-ಪ್ರವೇಶಿಸಲು 100,000 ಡಾಲರ್ ಶುಲ್ಕ ವಿಧಿಸಲಾಗುವುದಿಲ್ಲ" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಎಕ್ಸ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇದು ಹೊಸ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ, ನವೀಕರಣಗಳಿಗೆ ಅಲ್ಲ ಮತ್ತು ಪ್ರಸ್ತುತ ವೀಸಾ ಹೊಂದಿರುವವರಿಗೆ ಅಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ನೂತನ ವೀಸಾ ಶುಲ್ಕವು ಭಾನುವಾರ ಇಂದಿನಿಂದ ಜಾರಿಗೆ ಬರುತ್ತದೆ. ಇದು ಒಂದು ವರ್ಷದ ನಂತರ ಮುಕ್ತಾಯಗೊಳ್ಳಲಿದೆ. ಆದರೆ ಸರ್ಕಾರವು ಅದನ್ನು ಮುಂದುವರಿಸಲು ನಿರ್ಧರಿಸಿದರೆ ಅದನ್ನು ವಿಸ್ತರಿಸಬಹುದು.

ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಶ್ವೇತಭವನವು ಹೊಸ ನಿಯಮವು "ಯಾವುದೇ ಪ್ರಸ್ತುತ ವೀಸಾ ಹೊಂದಿರುವವರು ಅಮೆರಿಕಕ್ಕೆ/ಅಮೆರಿಕದಿಂದ ಪ್ರಯಾಣಿಸುವವರಿಗೆ ಪರಿಣಾಮ ಬೀರುವುದಿಲ್ಲ" ಎಂದು ಸ್ಪಷ್ಟಪಡಿಸಲು ಪ್ರಯತ್ನಿಸಿದೆ.

ಆದರೆ ಅಮೆರಿಕದ ವಲಸೆ ನೀತಿ ವಕೀಲರು ಶ್ವೇತಭವನದ ಈ ಕ್ರಮವು ಅನೇಕ ನುರಿತ ನೌಕರರ ಜೀವನವನ್ನು ಹಾಳುಮಾಡುವ ಬೆದರಿಕೆ ಹಾಕುತ್ತದೆ ಮತ್ತು ಅಮರಿಕದ ವ್ಯವಹಾರದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಹೇಳಿದರು.

Donald Trump
ತಕ್ಷಣ ಅಮೆರಿಕಕ್ಕೆ ಹಿಂತಿರುಗಿ ಇಲ್ಲದಿದ್ದರೆ ಸಿಕ್ಕಿಹಾಕಿಕೊಳ್ಳುತ್ತೀರಿ: H-1B ವೀಸಾ ನೌಕರರಿಗೆ ವಲಸೆ ಅಟರ್ನಿ, ಕಂಪೆನಿಗಳ ಎಚ್ಚರಿಕೆ ಸೂಚನೆ!

ಟೆಕ್ಸಾಸ್‌ನ ಎಲ್ ಪಾಸೊದಲ್ಲಿ ನೆಲೆಸಿರುವ ಡಿಕಿನ್ಸನ್ ರೈಟ್ ಅವರ ವಲಸೆ ವಕೀಲರಾದ ಕ್ಯಾಥ್ಲೀನ್ ಕ್ಯಾಂಪ್‌ಬೆಲ್ ವಾಕರ್, ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡುವ ಮೂಲಕ, ಶ್ವೇತಭವನದ ಈ ಕ್ರಮವು "ಒಂದು ದಿನದ ಸೂಚನೆಯೊಂದಿಗೆ ಅಸ್ತಿತ್ವದಲ್ಲಿರುವ H-1B ಪ್ರಕ್ರಿಯೆಯಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನು ಉಂಟುಮಾಡುತ್ತದೆ ಎಂದಿದ್ದಾರೆ. ಶುಲ್ಕವು ಕಂಪನಿಗಳಿಗೆ ವಾರ್ಷಿಕ ವೆಚ್ಚವಾಗಿರುತ್ತದೆ ಎಂದು ಲುಟ್ನಿಕ್ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಆದರೆ ಶ್ವೇತಭವನದ ಅಧಿಕಾರಿಯೊಬ್ಬರು ನಿನ್ನೆ ಮಾತನಾಡುತ್ತಾ ಇದು "ಒಂದು ಬಾರಿ ಶುಲ್ಕ" ಎಂದು ಹೇಳಿದರು. ಲುಟ್ನಿಕ್ ಅವರ ಹೇಳಿಕೆಗಳು ಗೊಂದಲವನ್ನು ಬಿತ್ತುತ್ತವೆಯೇ ಎಂದು ಕೇಳಿದಾಗ, ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ಅಧಿಕಾರವಿಲ್ಲದ ಮತ್ತು ಅನಾಮಧೇಯತೆಯ ಸ್ಥಿತಿಯ ಕುರಿತು ಮಾತನಾಡಿದ ಅಧಿಕಾರಿ, ಹೊಸ ಶುಲ್ಕ "ಪ್ರಸ್ತುತ ನವೀಕರಣಗಳಿಗೆ ಅನ್ವಯಿಸುವುದಿಲ್ಲ ಆದರೆ ಆ ನೀತಿ ಚರ್ಚೆಯಲ್ಲಿದೆ" ಎಂದು ಹೇಳಿದರು.

H-1B ವೀಸಾ ಹೊಂದಿರುವವರಲ್ಲಿ 70% ಕ್ಕಿಂತ ಹೆಚ್ಚು ಜನರು ಭಾರತದವರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com