ಹಾಡಹಗಲೇ ಪಾಕಿಸ್ತಾನದ TikTok Star ಆಯೇಷಾ ಗಿಲಾಮಾನಾ ಗುಂಡೇಟಿಗೆ ಬಲಿ! ವಿಡಿಯೋ ವೈರಲ್

ಗುಂಡೇಟು ತಗುಲಿದ ನಂತರ, ಅವರ ಕಾರು ರಸ್ತೆಯಿಂದ ಪಕ್ಕಕ್ಕೆ ಸರಿದು ಚರಂಡಿಗೆ ಬಿದ್ದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಲಭ್ಯವಾಗಿವೆ.
CCTV Video
ಸಿಸಿಟಿವಿ ದೃಶ್ಯಾವಳಿ
Updated on: 

ಇಸ್ಲಾಮಾಬಾದ್: ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಪ್ರಭಾವಿ ವ್ಯಕ್ತಿ (ಇನ್‌ಫ್ಲುಯೆನ್ಸರ್) ಮತ್ತು ಟಿಕ್‌ಟಾಕ್ ಸ್ಟಾರ್ ಆಯೇಷಾ ಗಿಲಾಮಾನಾ ಅವರನ್ನು ಹಾಡಹಗಲೇ ಗುಂಡಿಕ್ಕಿ ಕೊಲ್ಲಲಾಗಿದೆ. 1.3 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ 28 ವರ್ಷದ ಇವರ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಗುಂಡೇಟು ತಗುಲಿದ ನಂತರ, ಅವರ ಕಾರು ರಸ್ತೆಯಿಂದ ಪಕ್ಕಕ್ಕೆ ಸರಿದು ಚರಂಡಿಗೆ ಬಿದ್ದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಲಭ್ಯವಾಗಿವೆ.

ಫಾಲೋವರ್ಸ್ ವಲಯದಲ್ಲಿ 'ಆಯೇಷಾ ಗಿಲಾಮಾನಾ' ಎಂದೇ ಪರಿಚಿತರಾಗಿದ್ದ ಶಮ್ಸೋ ಬಿಬಿ, ಫೋನ್ ಕರೆ ಬಂದ ನಂತರ ಮನೆಯಿಂದ ಹೊರಗೆ ಬಂದಿದ್ದು, ಕಾರಿನಲ್ಲಿ ತಮ್ಮ 15 ವರ್ಷದ ಸಹೋದರಿ ಮತ್ತು ಕಿರಿಯ ಸಹೋದರ ನೈಮತುಲ್ಲಾ ಜೊತೆಗೆ ತೆರಳುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಕುಟುಂಬವು ಸ್ವಲ್ಪ ದೂರ ಪ್ರಯಾಣಿಸಿದಾಗ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಲಿಸುತ್ತಿದ್ದ ಕಾರಿನ ಹತ್ತಿರ ಬಂದು ಗುಂಡಿನ ದಾಳಿ ನಡೆಸಿದ್ದಾರೆ.

ಆಯೇಷಾ ಅವರ ಕುತ್ತಿಗೆಗೆ ಗುಂಡು ತಗುಲಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಅವರ ಕಿರಿಯ ಸಹೋದರಿ ಗಾಯಗೊಂಡಿದ್ದಾರೆ. ಘಟನೆಗೆ ಸ್ವಲ್ಪ ಸಮಯದ ಮೊದಲು ತಮ್ಮ ಮೊಬೈಲ್ ಫೋನ್‌ಗೆ ಕರೆ ಬಂದಿತ್ತು ಎಂದು ಆಯೇಷಾ ಅವರ ಕುಟುಂಬ ಪೊಲೀಸರಿಗೆ ತಿಳಿಸಿದೆ. ಅವರ ದೂರಿನ ಪ್ರಕಾರ, ಕಾಶಿಫ್ (ಅಲಿಯಾಸ್ ಕಾಶಿ) ಎಂಬ ವ್ಯಕ್ತಿಯೊಬ್ಬರು ಆಕೆಯನ್ನು ಶೀಘ್ರವೇ ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.

ನಂತರ ಆಯೇಷಾ ತಮ್ಮ ಕಿರಿಯ ಸಹೋದರಿ, ಸಹೋದರನೊಂದಿಗೆ ಮನೆಯಿಂದ ಹೊರಟರು. ಆ ನಂತರ ಸ್ವಲ್ಪ ಸಮಯದಲ್ಲೇ ಗುಂಡಿನ ದಾಳಿಯ ಬಗ್ಗೆ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ. ಘಟನೆಯ ಬಳಿಕ ಅವರ ತಂದೆ ಆಸ್ಪತ್ರೆಗೆ ತೆರಳಿ ತಮ್ಮ ಮಗಳ ಮೃತದೇಹವನ್ನು ಗುರುತಿಸಿದ್ದಾರೆ.

ತಮ್ಮ ಮಗಳು ಸುಮಾರು ಮೂರು-ನಾಲ್ಕು ವರ್ಷಗಳಿಂದ ಟಿಕ್‌ಟಾಕ್ ವೀಡಿಯೊಗಳನ್ನು ಮಾಡುತ್ತಿದ್ದರು ಮತ್ತು ಆ ವೇದಿಕೆಯಲ್ಲಿ ಗಮನಾರ್ಹ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದರು ಎಂದು ಶಮ್ಸೋ ಬಿಬಿ ಅವರ ತಂದೆ ಸಾಹಿಬ್‌ಜಾದಾ ತಿಳಿಸಿದ್ದಾರೆ.

CCTV Video
Kolkata: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪಿಎ ಗುಂಡೇಟಿಗೆ ಬಲಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com