ಟ್ರಂಪ್ 'ಗೊಡ್ಡು ಬೆದರಿಕೆ'ಗೆ ಹೆದರಲ್ಲ, ತಾಯ್ನಾಡಿಗಾಗಿ ಮತ್ತೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಸಿದ್ಧ- ಕೊಲಂಬಿಯಾದ ಅಧ್ಯಕ್ಷ

ನಾನು ಮತ್ತೆ ಆಯುಧ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ, ಆದರೆ ತಾಯ್ನಾಡಿಗಾಗಿ, ನಾನು ಮತ್ತೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುತ್ತೇನೆ ಎಂದು ಕೊಲಂಬಿಯಾದ ಅಧ್ಯಕ್ಷರು ಹೇಳಿದ್ದಾರೆ.
Gustavo Petro
ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ
Updated on

ಬೊಗೋಟಾ: ನೆರೆಯ ವೆನೆಜುವೆಲಾದಲ್ಲಿ ಅಮೆರಿಕದ ದಾಳಿ ನಂತರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆ ಎದುರಿಸಲು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವುದಾಗಿ" ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಸೋಮವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಗೆರಿಲ್ಲಾ ಹೋರಾಟಗಾರ ಪೆಟ್ರೋ, ನಾನು ಮತ್ತೆ ಆಯುಧ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ, ಆದರೆ ತಾಯ್ನಾಡಿಗಾಗಿ, ನಾನು ಮತ್ತೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ಕೊಲಂಬಿಯಾದ ಮೊದಲ ಎಡಪಂಥೀಯ ನಾಯಕ ಪೆಟ್ರೋ, ಕೊಕೇನ್ ತಯಾರಿಸಲು ಇಷ್ಟಪಡುವ ಮತ್ತು ಅದನ್ನು ಅಮೆರಿಕಕ್ಕೆ ಮಾರಾಟ ಮಾಡಲು ಇಚ್ಚಿಸುವ ವ್ಯಕ್ತಿ ಎಂದು ಟ್ರಂಪ್ ಕಳೆದ ವಾರ ಹೇಳಿದ್ದರು.

1989 ರ ಶಾಂತಿ ಒಪ್ಪಂದದಡಿ ಪೆಟ್ರೋ ಅವರ M-19 ನಗರ ಗೆರಿಲ್ಲಾ ಗುಂಪು ಸಶಸ್ತ್ರ ತ್ಯಜಿಸಿತ್ತು. ಜನವರಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಟ್ರಂಪ್ ಅವರೊಂದಿಗೆ ಪೆಟ್ರೋ ಅಸಮಾಧಾನ ಹೆಚ್ಚಾಗಿದೆ. ಕೆರಿಬಿಯನ್‌ನಲ್ಲಿ US ಮಿಲಿಟರಿ ನಿಯೋಜನೆಯನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ.

ಕೊಲಂಬಿಯಾದ ನಾಯಕ ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದು, ಅವರಿಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದಾರೆ. ಎಕ್ಸ್‌ನಲ್ಲಿನ ಸುದೀರ್ಘ ಪೋಸ್ಟ್ ಮಾಡಿರುವ ಪೆಟ್ರೋ, ತನ್ನ ಮಾದಕ ದ್ರವ್ಯ-ವಿರೋಧಿ ನೀತಿಯು ಸಾಕಷ್ಟು ದೃಢವಾಗಿದೆ. ಆದರೆ ಮಿಲಿಟರಿ ಎಷ್ಟು ಆಕ್ರಮಣಕಾರಿಯಾಗಿರಬಹುದು ಎಂಬುದಕ್ಕೆ ಮಿತಿಗಳಿವೆ ಎಂದು ಒತ್ತಿ ಹೇಳಿದ್ದಾರೆ.

ಸಾಕಷ್ಟು ಬುದ್ಧಿಯಿಲ್ಲದೆ ನೀವು ಈ ಗುಂಪಿನಲ್ಲಿ ಒಂದಾದರೂ ಬಾಂಬ್ ದಾಳಿ ಮಾಡಿದರೆ, ನೀವು ಅನೇಕ ಮಕ್ಕಳನ್ನು ಕೊಲ್ಲುತ್ತೀರಿ. ನೀವು ರೈತರ ಮೇಲೆ ಬಾಂಬ್ ದಾಳಿ ಮಾಡಿದರೆ, ಸಾವಿರಾರು ಜನರು ಪರ್ವತಗಳಲ್ಲಿ ಗೆರಿಲ್ಲಾಗಳಾಗಿ ಬದಲಾಗುತ್ತಾರೆ ಎಂದು ಅವರು ಬರೆದುಕೊಂಡಿದ್ದಾರೆ.

Gustavo Petro
ಮಡುರೊ ಬಂಧನ ಬೆನ್ನಲ್ಲೇ ಅಮೆರಿಕ ಉಪಾಧ್ಯಕ್ಷ JD Vance ಮನೆಯ ಮೇಲೆ ಗುಂಡಿನ ದಾಳಿ; ಆತಂಕ ಸೃಷ್ಟಿ!

ಟ್ರಂಪ್ ಆಡಳಿತವು ಕೊಲಂಬಿಯಾದಲ್ಲಿ ವಿಪಕ್ಷ ಬಲಪಂಥೀಯರೊಂದಿಗೆ ನಿಕಟ ಸಂಪರ್ಕದಲ್ಲಿದೆ. ಇದು ಈ ವರ್ಷ ಶಾಸಕಾಂಗ ಮತ್ತು ಅಧ್ಯಕ್ಷೀಯ ಚುನಾವಣೆಗಳನ್ನು ಗೆಲ್ಲುವ ಹೆಚ್ಚಿನ ಭರವಸೆಯನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com