

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಂತರರಾಷ್ಟ್ರೀಯ ಕಾನೂನು ತಮಗೆ ಲೆಕ್ಕಕ್ಕೇ ಇಲ್ಲ ಎಂಬ ಅರ್ಥ ನೀಡುವ ಮಾತುಗಳನ್ನಾಡಿದ್ದಾರೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (ನ್ಯಾಟೋ) ಮತ್ತು ಗ್ರೀನ್‌ಲ್ಯಾಂಡ್ ಬಗ್ಗೆ ಮಾತನಾಡಿದ ಟ್ರಂಪ್ ತಾವು ಅಧಿಕಾರದಲ್ಲಿರುವವರೆಗೂ ಚೀನಾ ತೈವಾನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಮ್ಮ ಜಾಗತಿಕ ಶಕ್ತಿಗೆ ಯಾವುದೇ ಮಿತಿಗಳಿವೆಯೇ ಎಂದು ನ್ಯೂಯಾರ್ಕ್ ಟೈಮ್ಸ್ ಕೇಳಿದಾಗ, ಯುಎಸ್ ಅಧ್ಯಕ್ಷರು ತಮ್ಮ ಮನಸ್ಸು ಮಾತ್ರ ತಮ್ಮನ್ನು ತಡೆಯಬಹುದು ಎಂದು ಹೇಳಿದ್ದಾರೆ.
"ಹೌದು, ಒಂದು ವಿಷಯವಿದೆ. ನನ್ನ ಸ್ವಂತ ನೈತಿಕತೆ. ನನ್ನ ಸ್ವಂತ ಮನಸ್ಸು. ಅದು ನನ್ನನ್ನು ತಡೆಯಬಹುದಾದ ಏಕೈಕ ವಿಷಯ. ನನಗೆ ಅಂತರರಾಷ್ಟ್ರೀಯ ಕಾನೂನು ಅಗತ್ಯವಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ. "ನಾನು ಜನರಿಗೆ ನೋವುಂಟು ಮಾಡಲು ನೋಡುತ್ತಿಲ್ಲ" ಎಂದು ಇದೇ ವೇಳೆ ಟ್ರಂಪ್ ಒತ್ತಿ ಹೇಳಿದರು.
ಅಂತಾರಾಷ್ಟ್ರೀಯ ಕಾನೂನುಗಳಿಂದ ಅಂತಹ ನಿರ್ಬಂಧಗಳು ಯುಎಸ್‌ಗೆ ಅನ್ವಯಿಸಿದಾಗ ತಾನೇ ಮಧ್ಯಸ್ಥಗಾರನಾಗುತ್ತೇನೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. "ಇದು ಅಂತರರಾಷ್ಟ್ರೀಯ ಕಾನೂನಿನ ನಿಮ್ಮ ವ್ಯಾಖ್ಯಾನವನ್ನು ಅವಲಂಬಿಸಿರುತ್ತದೆ" ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.
ಚೀನಾ ಮತ್ತು ತೈವಾನ್ ವಿಷಯದ ಬಗ್ಗೆ, ಕ್ಸಿ ಜಿನ್‌ಪಿಂಗ್ ತೈವಾನ್ ನ್ನು ಚೀನಾಕ್ಕೆ ಪ್ರತ್ಯೇಕತಾವಾದಿ ಬೆದರಿಕೆ ಎಂದು ಪರಿಗಣಿಸಿದ್ದಾರೆಯೇ ಎಂದು ಕೇಳಿದಾಗ, ಪ್ರತಿಕ್ರಿಯೆ ನೀಡಿರುವ ಟ್ರಂಪ್, "ಅದು ಅವರ ಮೇಲೆ ಅವಲಂಬಿತವಾಗಿರುತ್ತದೆ, ಅವರು ಏನು ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ಆದರೆ, ನಿಮಗೆ ತಿಳಿದಿರಲಿ, ಅವರು ಹಾಗೆ ಮಾಡಿದರೆ ನಾನು ತುಂಬಾ ಅತೃಪ್ತಿ ಹೊಂದುತ್ತೇನೆ ಮತ್ತು ಅವರು ಹಾಗೆ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದಷ್ಟೇ ಹೇಳಿದರು.
ಚೀನಾ ಮತ್ತು ತೈವಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳು ತೈವಾನ್ ಗೆ ಉಸಿರುಗಟ್ಟಿಸುವ ಬೆದರಿಕೆಯ ಕುರಿತು ಪ್ರತಿಕ್ರಿಯೆ ನೀಡಿದ್ದು ಚೀನಾದ ಅಧ್ಯಕ್ಷರು ನಾನು ಅಧಿಕಾರದಲ್ಲಿರುವಾಗ ಅಂತಹ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದಲ್ಲಿ ಬೇರೆ ಅಧ್ಯಕ್ಷರು ಬಂದ ನಂತರ ಅವರು ಅದನ್ನು ಮಾಡಬಹುದು, ಆದರೆ ನಾನು ಅಧ್ಯಕ್ಷನಾಗಿರುವ ವೇಳೆ ಅವರು ಅದನ್ನು ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ" ಎಂದು ಟ್ರಂಪ್ ಹೇಳಿದರು.
ನ್ಯಾಟೋ ಸಂರಕ್ಷಣೆ ಅಥವಾ ಗ್ರೀನ್‌ಲ್ಯಾಂಡ್ ಅನ್ನು ಪಡೆಯುವುದು ಅವರ ಹೆಚ್ಚಿನ ಆದ್ಯತೆ ಯಾವುದು ಎಂದು ಕೇಳಿದಾಗ, ಟ್ರಂಪ್ ನೇರವಾಗಿ ಉತ್ತರಿಸಲು ನಿರಾಕರಿಸಿದರು, ಆದರೆ 'ಅದು ಒಂದು ಆಯ್ಕೆಯಾಗಿರಬಹುದು' ಎಂದಷ್ಟೇ ಒಪ್ಪಿಕೊಂಡಿದ್ದಾರೆ. "ಮಾಲೀಕತ್ವವು ಬಹಳ ಮುಖ್ಯ" ಎಂದು ಗ್ರೀನ್ ಲ್ಯಾಂಡ್ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದಾರೆ.
ಅವರು ಆ ಪ್ರದೇಶವನ್ನು ಏಕೆ ಹೊಂದಬೇಕಾಗಿ ಬಯಸುತ್ತಿದ್ದಾರೆ ಎಂದು ಟ್ರಂಪ್ ನ್ಯೂಯಾರ್ಕ್ ಟೈಮ್ಸ್‌ಗೆ ವಿವರಿಸಿದ ಟ್ರಂಪ್, " ಅದು ಯಶಸ್ಸಿಗೆ ಮಾನಸಿಕವಾಗಿ ಅಗತ್ಯವೆಂದು ನಾನು ಭಾವಿಸುತ್ತೇನೆ." ಮಾಲೀಕತ್ವವು ನಿಮಗೆ ಹೆಚ್ಚಿನದ್ದನ್ನು ಮಾಡಲು ಸಾಧ್ಯವಾಗದ ಒಂದು ಅಂಶವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ, ನೀವು ಗುತ್ತಿಗೆ ಅಥವಾ ಒಪ್ಪಂದದ ಬಗ್ಗೆ ಮಾತನಾಡುತ್ತಿದ್ದೀರಿ. ಮಾಲೀಕತ್ವವು ನಿಮಗೆ ಕೇವಲ ಒಂದು ದಾಖಲೆಗೆ ಸಹಿ ಹಾಕುವುದರಿಂದ ನೀವು ಪಡೆಯಲಾಗದ ವಸ್ತುಗಳು ಮತ್ತು ಅಂಶಗಳನ್ನು ನೀಡುತ್ತದೆ." ಎಂದು ಟ್ರಂಪ್ ಹೇಳಿದ್ದಾರೆ.
ಯುರೋಪ್ ಬಗ್ಗೆ ಮಾತನಾಡುತ್ತಾ, "ನಾವು ಯಾವಾಗಲೂ ಯುರೋಪಿನೊಂದಿಗೆ ಹೊಂದಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ, NATO ಗಾಗಿ ಹೆಚ್ಚಿನ GDP ಗಾಗಿ ಹೆಚ್ಚು ಖರ್ಚು ಮಾಡಲು ಅವರನ್ನು ಪ್ರೇರೇಪಿಸಿದವನು ನಾನು. ಆದರೆ ನೀವು NATO, ರಷ್ಯಾವನ್ನು ನೋಡಿದರೆ, ನೀವು ನಮ್ಮ ಹೊರತಾಗಿ ಬೇರೆ ಯಾವುದೇ ದೇಶದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ನಾನು ಹೇಳಬಲ್ಲೆ. ನಾನು ಯುರೋಪಿಗೆ ತುಂಬಾ ನಿಷ್ಠನಾಗಿದ್ದೇನೆ. ನಾನು ಒಳ್ಳೆಯ ಕೆಲಸ ಮಾಡಿದ್ದೇನೆ. "ನಾನು ಇಲ್ಲದಿದ್ದರೆ, ರಷ್ಯಾ ಈಗಲೇ ಇಡೀ ಉಕ್ರೇನ್ ನ್ನು ತನ್ನ ವಶ ಮಾಡಿಕೊಳ್ಳುತ್ತಿತ್ತು." ಎಂದು ಟ್ರಂಪ್ ಹೇಳಿದ್ದಾರೆ.
ಗುರುವಾರದ ಮೊದಲು, ಯುಎಸ್ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್, ಯುರೋಪಿಯನ್ ನಾಯಕರು ಗ್ರೀನ್‌ಲ್ಯಾಂಡ್ ಬಗ್ಗೆ ಅಧ್ಯಕ್ಷ ಟ್ರಂಪ್ ಅವರನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದರು. ಅಮೆರಿಕದ ಕ್ಷಿಪಣಿ ರಕ್ಷಣೆಗೆ ಮಾತ್ರವಲ್ಲದೆ ವಿಶ್ವ ಕ್ಷಿಪಣಿ ರಕ್ಷಣೆಗೂ ಇದು ಮುಖ್ಯ ಎಂದು ಕರೆದ ವ್ಯಾನ್ಸ್, ಯುರೋಪ್ ತನ್ನ ಭದ್ರತೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು, ಇಲ್ಲದಿದ್ದರೆ ಯುಎಸ್ 'ಇದರ ಬಗ್ಗೆ ಏನಾದರೂ' ಮಾಡಬೇಕಾಗುತ್ತದೆ ಎಂದು ಹೇಳಿದ್ದರು.
Advertisement