

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಹಿಂದುಗಳ ಕೊಲೆ ನಡೆಯುತ್ತಿದೆ. ನಿನ್ನೆಯೂ ಸಹ ಹಿಂದೂ ಯುವಕನನ್ನು ಕೊಲ್ಲಲಾಗಿದೆ. ಶುಕ್ರವಾರ ರಾತ್ರಿ ಬಾಂಗ್ಲಾದೇಶದ ನರಸಿಂಗಡಿಯಲ್ಲಿ ಮಲಗಿದ್ದಾಗ ಚಂಚಲ್ ಚಂದ್ರ ಭೌಮಿಕ್ ಎಂಬ 23 ವರ್ಷದ ಹಿಂದೂ ಯುವಕನನ್ನು ಅಂಗಡಿಯೊಳಗೆ ಸುಟ್ಟು ಹಾಕಲಾಗಿದೆ.
ದಾಳಿಕೋರರು ಅಂಗಡಿಯ ಶಟರ್ ಮುಚ್ಚಿ, ಪೆಟ್ರೋಲ್ ಸುರಿದು, ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಚಂಚಲ್ ಸುಟ್ಟು ಸಾಯುವವರೆಗೂ ದುಷ್ಕರ್ಮಿ ಹೊರಗೆ ಇದ್ದು, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಂಚಲ್ ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದು, ಅವರ ತಂದೆಯ ಮರಣದ ನಂತರ ಅವರ ಅನಾರೋಗ್ಯ ಪೀಡಿತ ತಾಯಿ, ಅಂಗವಿಕಲ ಅಣ್ಣ ಮತ್ತು ಕಿರಿಯ ಸಹೋದರನನ್ನು ನೋಡಿಕೊಳ್ಳುತ್ತಿದ್ದರು.
ಕಳೆದ ಆರು ವರ್ಷಗಳಿಂದ ನರಸಿಂಗಡಿಯ ಸ್ಥಳೀಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ನಿವಾಸಿಗಳು ಮತ್ತು ಗ್ಯಾರೇಜ್ ಮಾಲೀಕರು ಚಂಚಲ್ ಅವರನ್ನು ಸರಳ ಮತ್ತು ಪ್ರಾಮಾಣಿಕ ಯುವಕ ಎಂದು ಹೇಳಿದ್ದಾರೆ.
ಈ ಕೊಲೆಯು ಉದ್ದೇಶಪೂರ್ವಕ ಪಿತೂರಿಯಂತೆ ಕಾಣುತ್ತದೆ ಮತ್ತು ಧಾರ್ಮಿಕ ದ್ವೇಷದಿಂದ ಪ್ರೇರಿತವಾಗಿರಬಹುದು ಎಂದು ಕುಟುಂಬ ಆರೋಪಿಸಿದೆ. ದೀಪು ಚಂದ್ರ ದಾಸ್ ಮತ್ತು ಖೋಕೋನ್ ಚಂದ್ರ ದಾಸ್ ಅವರ ಕೊಲೆ ಬಳಿಕ ದೇಶಾದ್ಯಂತ ಹಿಂದೂ ಸಮುದಾಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿವೆ.
ನಾವು ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಸಂಗ್ರಹಿಸಿದ್ದೇವೆ ಮತ್ತು ಒಬ್ಬ ವ್ಯಕ್ತಿ ಓಡಾಡುತ್ತಿರುವ ದೃಶ್ಯವನ್ನು ಗಮನಿಸಿದ್ದೇವೆ. ಬೆಂಕಿಯು ಯಾವುದೋ ಬಾಹ್ಯ ಅಂಶದಿಂದ ಉಂಟಾಗಿದೆಯೇ ಅಥವಾ ವಿದ್ಯುತ್ ದೋಷದಿಂದ ಉಂಟಾಗಿದೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ನರಸಿಂಗ್ಡಿ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಅಬ್ದುಲ್ಲಾ ಅಲ್ ಫಾರೂಕ್ ಎಎನ್‌ಐಗೆ ತಿಳಿಸಿದರು.
ಅಂಗಡಿಯೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಅವರನ್ನು ರಕ್ಷಿಸಲು ಅಗ್ನಿಶಾಮಕ ದಳದವರು ಶಟರ್ ಒಡೆದರು, ಆದರೆ ಅವರ ದೇಹವು ಸುಟ್ಟು ಕರಕಲಾಗಿತ್ತು ಎಂದು ಎಸ್‌ಪಿ ಉಲ್ಲೇಖಿಸಿದ್ದಾರೆ. "ನಾವು ಇನ್ನೂ ಎಲ್ಲವನ್ನೂ ತನಿಖೆ ಮಾಡುತ್ತಿದ್ದೇವೆ ಮತ್ತು ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ" ಎಂದು ಅವರು ಹೇಳಿದರು.
Advertisement