

ರೋಮ್: 76ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಗುರುವಾರ ವಿಶೇಷ ಶುಭಾಶಯಗಳನ್ನು ಕೋರಿದ್ದಾರೆ.
ಜಾರ್ಜಿಯಾ ಮೆಲೋನಿ ಅವರ ಹೃದಯಸ್ಪರ್ಶಿ ಸಂದೇಶ ವಿಶೇಷ ಗಮನ ಸೆಳೆದಿದ್ದು, ಪ್ರಧಾನಿ ಮೋದಿ ಅವರನ್ನು ತಮ್ಮ "ಆತ್ಮೀಯ ಗೆಳೆಯ" ಎಂದು ಕರೆದಿದ್ದಾರೆ.
ನನ್ನ ಆತ್ಮೀಯ ಗೆಳೆಯ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಜಾರ್ಜಿಯಾ ಮೆಲೋನಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಟಲಿ ಮತ್ತು ಭಾರತ ತಮ್ಮ ಆಳವಾದ ಸ್ನೇಹದ ಬಂಧವನ್ನು ಬಲಪಡಿಸುವುದನ್ನು ಮುಂದುವರಿಸುತ್ತಿದ್ದು, ನಮ್ಮ ರಾಷ್ಟ್ರಗಳ ಸಹಕಾರ ಮತ್ತು ಸಮೃದ್ಧಿಯ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸುತ್ತಿವೆ ಎಂದು ಜಾರ್ಜಿಯಾ ಮೆಲೋನಿ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ಮೆಲೋನಿ ಅವರ ಶುಭಾಶಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಧನ್ಯವಾದ ಅರ್ಪಿಸಿದ್ದು, ಭಾರತ ಮತ್ತು ಇಟಲಿ ನಡುವಿನ ಮೈತ್ರಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.