ಪಾಕ್‌ನಲ್ಲಿ ಹಾಡಹಗಲೇ ಕಾರಿನ ಮೇಲೆ AK-47ನಿಂದ ದಾಳಿ ನಡೆಸಿ ಮುಸುಕುದಾರಿಗಳಿಂದ ಸಚಿವನ ಕಿಡ್ನಾಪ್, Video!

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಹಾಡಹಗಲೇ ಸಚಿವರೊಬ್ಬರ ಅಪಹರಣ ಪ್ರಕರಣ ಕೋಲಾಹಲಕ್ಕೆ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಸಚಿವ ಫಜಲ್ ಶಕೂರ್ ಖಾನ್ ನನ್ನು ಸೋಮವಾರ ಮಧ್ಯಾಹ್ನ ಶಸ್ತ್ರಸಜ್ಜಿತ ಮುಸುಕುಧಾರಿಗಳು ಅಪಹರಿಸಿದ್ದಾರೆ.
PTI minister kidnapped
ಪಿಟಿಐ ಸಚಿವನ ಕಿಡ್ನಾಪ್
Updated on

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಹಾಡಹಗಲೇ ಸಚಿವರೊಬ್ಬರ ಅಪಹರಣ ಪ್ರಕರಣ ಕೋಲಾಹಲಕ್ಕೆ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಸಚಿವ ಫಜಲ್ ಶಕೂರ್ ಖಾನ್ ನನ್ನು ಸೋಮವಾರ ಮಧ್ಯಾಹ್ನ ಶಸ್ತ್ರಸಜ್ಜಿತ ಮುಸುಕುಧಾರಿಗಳು ಅಪಹರಿಸಿದ್ದಾರೆ. ದಾಳಿಕೋರರು ಹೆದ್ದಾರಿಯಲ್ಲಿ ಸಚಿವನ ಕಾರನ್ನು ನಿಲ್ಲಿಸಿ ಮೊದಲು ಅದರ ಟೈರ್‌ಗಳಿಗೆ ಗುಂಡು ಹಾರಿಸಿ ನಂತರ ಸಚಿವನನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ವರದಿಗಳ ಪ್ರಕಾರ, ದಾಳಿಕೋರರು ಶಸ್ತ್ರಸಜ್ಜಿತರಾಗಿದ್ದು ಮುಖವಾಡಗಳನ್ನು ಧರಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ಕೆಲವು ಮುಸುಕುಧಾರಿಗಳು ಮುಖ್ಯ ರಸ್ತೆಯನ್ನು ನಿರ್ಬಂಧಿಸುತ್ತಿರುವುದನ್ನು ತೋರಿಸಲಾಗಿದೆ. ಸಚಿವನ ಕಾರನ್ನು ತಡೆಯಲು ಅವರು ನೇರವಾಗಿ ಟೈರ್‌ಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಫಜಲ್ ಶಕೂರ್ ಖಾನ್ ಅವರನ್ನು ಯಾವ ಸಂಘಟನೆ ಅಥವಾ ಗುಂಪು ಅಪಹರಿಸಿದೆ. ಅವರ ಬೇಡಿಕೆಗಳು ಅಥವಾ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

PTI minister kidnapped
ನಾವು ಉಗ್ರರನ್ನು ನ್ಯೂಯಾರ್ಕ್, ಲಂಡನ್, ಬೀದಿಗಳಲ್ಲಿ ಓಡಾಡಲು ಬಿಟ್ಟಿಲ್ಲ, ಇದು ಜಗತ್ತಿಗೆ ನಮ್ಮ ಕೊಡುಗೆ: Pak PM ಹಳೆಯ ವಿಡಿಯೋ ವೈರಲ್!

ಸಚಿವ ಫಜಲ್ ಶಕೂರ್ ಖಾನ್ ಅಪಹರಣದ ಜೊತೆಗೆ, ಪಿಟಿಐ ನಾಯಕ ಮತ್ತು ಪ್ರಾಂತೀಯ ಶಾಸಕ ಶಕೀಲ್ ಅಹ್ಮದ್ ಅವರನ್ನು ಅಪಹರಿಸಲು ಯತ್ನಿಸಲಾಗಿದೆ ಎಂಬ ವರದಿಗಳು ಸಹ ಹೊರಬಂದಿವೆ. ಮಲಕಂಡ್‌ನಲ್ಲಿ ಶಕೀಲ್ ಅಹ್ಮದ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾದ ಪ್ರಯತ್ನವು ಪಿಟಿಐ ಕಾರ್ಯಕರ್ತರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ ಎಂದು ವರದಿಯಾಗಿದೆ.

ಮಲಕಂಡ್‌ನಲ್ಲಿರುವ ಬಟ್ ಖೈಲಾ ಬೈಪಾಸ್ ಅನ್ನು ಪಿಟಿಐ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತಡೆದರು. ಪ್ರತಿಭಟನಾಕಾರರು ಟೈರ್‌ಗಳನ್ನು ಸುಟ್ಟು ಘೋಷಣೆಗಳನ್ನು ಕೂಗಿದರು. ಖೈಬರ್ ಪಖ್ತುಂಖ್ವಾದಲ್ಲಿನ ತನ್ನ ಪ್ರಾಂತೀಯ ನಾಯಕತ್ವವನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ಬಂದೂಕಿನಿಂದ ನಾಯಕರನ್ನು ಅಪಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಿಟಿಐ ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com