ಭಾರತೀಯ ಮೂಲದ ಉಪನ್ಯಾಸಕಿಗೆ ಪ್ರತಿಷ್ಠಿತ 'ನರ್ಸಿಂಗ್ ಸಾಧನೆ' ಪ್ರಶಸ್ತಿ

ಸುಭದ್ರಾ ದೇವಿ ರೈ ಅವರಿಗೆ ಇಂಟರ್‌ನ್ಯಾಷನಲ್ ಕೌನ್ಸಿಲ್ ಆಫ್ ನರ್ಸೆಸ್ ಫ್ಲೋರೆನ್ಸ್ ನೈಟಿಂಗೇಲ್ ಇಂಟರ್‌ನ್ಯಾಷನಲ್ ಫೌಂಡೇಶನ್ ನೀಡುವ 2015 ಅಂತಾರಾಷ್ಟ್ರೀಯ ಸಾಧನೆ ಪ್ರಶಸ್ತಿ...
ಸುಭದ್ರಾ ದೇವಿ ರೈ
ಸುಭದ್ರಾ ದೇವಿ ರೈ

ಮಹಿಳೆಯರಿಗೆ ಮತ್ತು ಸಂತ್ರಸ್ತರಿಗಾಗಿ ಮಾಡಿರುವ ಸೇವೆಯನ್ನು ಪರಿಗಣಿಸಿ ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ಉಪನ್ಯಾಸಕಿಯೊಬ್ಬರಿಗೆ ಪ್ರತಿಷ್ಠಿತ 'ನರ್ಸಿಂಗ್ ಸಾಧನೆ' ಪ್ರಶಸ್ತಿ ಲಭಿಸಿದೆ.

ನನ್ಯಾಂಗ್ ಪಾಲಿಟೆಕ್ನಿಕ್ (ಎನ್‌ವೈಪಿ)ನಲ್ಲಿರುವ ಸ್ಕೂಲ್ ಆಫ್ ಹೆಲ್ತ್ ಸಯನ್ಸ್ (ನರ್ಸಿಂಗ್)ನಲ್ಲಿ ಹಿರಿಯ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಭದ್ರಾ ದೇವಿ ರೈ ಅವರಿಗೆ ಇಂಟರ್‌ನ್ಯಾಷನಲ್ ಕೌನ್ಸಿಲ್ ಆಫ್ ನರ್ಸೆಸ್  ಫ್ಲೋರೆನ್ಸ್ ನೈಟಿಂಗೇಲ್ ಇಂಟರ್‌ನ್ಯಾಷನಲ್ ಫೌಂಡೇಶನ್ ನೀಡುವ 2015 ಅಂತಾರಾಷ್ಟ್ರೀಯ ಸಾಧನೆ ಪ್ರಶಸ್ತಿ ದಕ್ಕಿದೆ.

ಲಿಂಗಾಧಾರಿತ ಶೋಷಣೆ, ಲೈಂಗಿಕ ಆರೋಗ್ಯ ಮತ್ತು ಸಂತ್ರಸ್ತರಿಗೆ ನೀಡುವ ಆರೈಕೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಜನರಲ್ ನರ್ಸಿಂಗ್ ತರಬೇತಿ ಮುಗಿಸಿದ ರೈ ಅವರು ಸಿಂಗಾಪುರದ ಆಸ್ಪತ್ರೆಯೊಂದರ ಐಸಿಯುನಲ್ಲಿ ಕೆಲಸ ಮಾಡುತ್ತಿದ್ದರು. 1997ರಿಂದ ಅವರು ಮಹಿಳೆ ಮತ್ತು ಸಂತ್ರಸ್ತರ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಲು ತೊಡಗಿದ್ದರು.

51ರ ಹರೆಯದ ರೈ ಅವರು ತಮ್ಮ ವೃತ್ತಿ ಜೀವನದಲ್ಲಿ ಜನರಿಗೆ ನೀಡಿದ ಆರೈಕೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಅಂತಾರಾಷ್ಟ್ರೀಯ ಕೌನ್ಸಿಲ್ ಆಫ್ ನರ್ಸೆಸ್  ಮತ್ತು ದ ಪ್ಲೋರೆನ್ಸ್ ನೈಟಿಂಗೇಲ್ ಇಂಟರ್‌ನ್ಯಾಷನಲ್ ಫೌಂಡೇಶನ್‌ನ  ಅಧ್ಯಕ್ಷೆ ಜುಡಿತ್ ಶಾಮಿಯಾನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com