3 ಸಾಧಕರಿಗೆ ವಿಶ್ವಾತ್ಮ ಪ್ರಶಸ್ತಿ

ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೆ ಜಗವೆಲ್ಲ ಒಂದೇ ಮನುಕುಲವೆಲ್ಲ ಒಂದೇ ಎನ್ನುವ ರೀತಿ ತಮ್ಮ ತಮ್ಮ ಕ್ಷೇತ್ರದಲ್ಲಿ ಮಾನವೀಯ ಕಳಕಳಿಯ ಸೇವೆಯನ್ನು ಮಾಡುತ್ತಿರುವ ಮೂರು ಜನ ಸಾಧಕರಿಗೆ `ವಿಶ್ವಾತ್ಮ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ...
ಸಾಲಮರದ ತಿಮ್ಮಕ್ಕ(ಸಂಗ್ರಹ ಚಿತ್ರ)
ಸಾಲಮರದ ತಿಮ್ಮಕ್ಕ(ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೆ ಜಗವೆಲ್ಲ ಒಂದೇ ಮನುಕುಲವೆಲ್ಲ ಒಂದೇ ಎನ್ನುವ ರೀತಿ ತಮ್ಮ ತಮ್ಮ ಕ್ಷೇತ್ರದಲ್ಲಿ ಮಾನವೀಯ ಕಳಕಳಿಯ ಸೇವೆಯನ್ನು ಮಾಡುತ್ತಿರುವ ಮೂರು ಜನ ಸಾಧಕರಿಗೆ `ವಿಶ್ವಾತ್ಮ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹೂವಿನ ಹೊಳೆ ಪ್ರತಿಷ್ಠಾನವು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 2015 ನೇ ಸಾಲಿನ ಪ್ರಶಸ್ತಿಯನ್ನು ನಾಡೋಜ ಸಾಲಮರದ ತಿಮ್ಮಕ್ಕ, ಕವಿ ನಾಗತಿಹಳ್ಳಿ ರಮೇಶ್ ಹಾಗೂ ಅಶ್ವಿನಿ ಅಂಗಡಿಯವರಿಗೆ ನೀಡಲಾಗಿದೆ.

ನ್ಯಾ. ಎ.ಜೆ. ಸದಾಶಿವ ಅವರು ಕಾರ್ಯಕ್ರಮದ ಉದ್ಘಾಟಿಸಿ ಪ್ರಶಸ್ತಿ ವಿತರಿಸಿದರು. ಹಿರಿಯ ಪತ್ರಕರ್ತರಾದ ಪಿ. ರಾಮಯ್ಯ, ಸ್ವಾತಂತ್ರ ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ಚಂದ್ರಶೇಖರ ಪಾಟೀಲ ಮುಂತಾದವರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com