• Tag results for ಕರ್ನಾಟಕ

ಕೋವಿಡ್ -19: ಆರೋಗ್ಯ ಕಾರ್ಯಕರ್ತರಿಗೆ ತರಬೇತಿಗಾಗಿ ಯೂಟ್ಯೂಬ್ ಚಾನಲ್ ಆರಂಭಿಸಿದ ಸರ್ಕಾರ

ಕೋವಿಡ್-19 ಚಿಕಿತ್ಸೆಗಾಗಿ ಸ್ಥಳೀಯ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಜಾಗೃತಿ ಕರ್ನಾಟಕ ಎಂಬ ಯು ಟ್ಯೂಬ್ ಚಾನಲ್ ವೊಂದನ್ನು ಕರ್ನಾಟಕ ಸರ್ಕಾರ  ಆರಂಭಿಸಿರುವುದಾಗಿ ಉನ್ನತ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

published on : 4th April 2020

ಹೊಸಪೇಟೆ: ಗಣಿನಾಡು ಬಳ್ಳಾರಿಯಲ್ಲಿ 5ಕ್ಕೇರಿದ ಸೋಂಕಿತರ ಸಂಖ್ಯೆ

ಗಣಿನಾಡು ಬಳ್ಳಾರಿಯಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಹೊಸಪೇಟೆಯಲ್ಲಿ ಸೋಂಕಿತ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯಲ್ಲಿಯೂ ಇದೀಗ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

published on : 4th April 2020

ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ಕಾಸರಗೋಡು ಗಡಿ ಬಂದ್ ಮಾಡಲಾಗಿದೆ: ಸಿಎಂ ಯಡಿಯೂರಪ್ಪ

ಕರ್ನಾಟಕ ಜನತೆ ಹಿತದೃಷ್ಟಿಯಿಂದ ಕಾಸರಗೋಡು ಗಡಿ ಬಂದ್ ಮಾಡಲಾಗಿದ್ದು ವಿವಿಧ ವೈದ್ಯಕೀಯ ಸಂಘಟನೆಗಳ ಅಭಿಪ್ರಾಯ ಹಾಗೂ ಸಾರ್ವಜನಿಕರ ಹಿತಾಸಕ್ತಿಯ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

published on : 4th April 2020

ಮಹಾಮಾರಿ ಕೊರೋನಾ ವಿರುದ್ಧ ಹೋರಾಟ: ರಾಜ್ಯಕ್ಕೆ ಕೇಂದ್ರದಿಂದ ರೂ.395 ಕೋಟಿ ಅನುದಾನ

ಇಡೀ ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿರುವ ಮಹಾಮಾರಿ ಕೊರೋನಾ ವಿರುದ್ದ ಹೋರಾಟ ಮಾಡುತ್ತಿರುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ರೂ.395 ಕೋಟಿ ಅನುದಾನ ನೀಡಿದೆ. 

published on : 4th April 2020

ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ವಿವಿಧೆಡೆ ಲಘು ಭೂಕಂಪನದ ಅನುಭವ!

ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಹಲವು ಗ್ರಾಮಗಳಲ್ಲಿಂದು ಲಘು ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

published on : 3rd April 2020

ಕರ್ನಾಟಕ-ಕೇರಳ ಗಡಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ, ಪೇದೆಗೆ ಗಾಯ

ಕೊರೋನಾ ವೈರಸ್ ಸೋಂಕು ಹಿನ್ನಲೆಯಲ್ಲಿ ಕರ್ನಾಟಕ ಕೇರಳ ಸಂಪರ್ಕಿಸುವ ಗಡಿ ರಸ್ತೆಯನ್ನು ಮುಚ್ಚಿರುವಂತೆಯೇ ಅತ್ತ ಕೇರಳ ಮೂಲದ ಅಪರಿಚತ ಯುವಕರು ಗಡಿಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ.

published on : 3rd April 2020

ಕೊರೋನಾ ವೈರಸ್ ಲಾಕ್ ಡೌನ್ ಎಲ್ಲ ಧರ್ಮಗಳಿಗೂ ಅನ್ವಯ, ಕಾನೂನಿಗೆ ಮೊದಲು ಗೌರವ ಕೊಡಿ: ಹುಬ್ಬಳ್ಳಿ ಪೊಲೀಸ್ ಆಯುಕ್ತ ಆರ್ ದಿಲೀಪ್ ಮನವಿ

ದೇಶದಲ್ಲಿ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಜನ ಜಮಾಣೆಗೊಳ್ಳದಂತೆ ಸೂಚಿಸಲಾಗಿದೆ. ಲಾಕ್ ಡೌನ್ ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ. ದಯಮಾಡಿ ಕಾನೂನಿಗೆ ಗೌರವ ಕೊಡಿ ಎಂದು ಹುಬ್ಬಳ್ಳಿ ಮತ್ತು ಧಾರವಾಡದ ಪೊಲೀಸ್ ಆಯುಕ್ತ ಆರ್ ದಿಲೀಪ್  ಮನವಿ ಮಾಡಿದ್ದಾರೆ.

published on : 3rd April 2020

ನಿಜಾಮುದ್ದೀನ್ ಮರ್ಕಜ್ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ 13 ಮಂದಿಗೆ ಕೊರೋನಾ ವೈರಸ್ ಸೋಂಕು: ಸಚಿವ ಸುರೇಶ್ ಕುಮಾರ್

ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮೂಲದವರ ಪೈಕಿ 13 ಮಂದಿಗೆ ಕೋವಿಡ್ 19 ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

published on : 3rd April 2020

ಹುಬ್ಬಳ್ಳಿಯಲ್ಲಿ ಯುವಕರಿಂದ ಪೊಲೀಸರತ್ತ ಕಲ್ಲುತೂರಾಟ

ದೇಶದಲ್ಲಿ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಜನ ಜಮಾಣೆಗೊಳ್ಳದಂತೆ ಸೂಚಿಸಿರುವುದನ್ನು ಲೆಕ್ಕಿಸಿದ ಯುವಕರು ಪೊಲೀಸರತ್ತ ಕಲ್ಲು ತೂರಾಟ ಮಾಡಿರುವ ಘಟನೆ ವರದಿಯಾಗಿದೆ.

published on : 3rd April 2020

ಐಕ್ಯತೆ ಪ್ರದರ್ಶನ ಓಕೆ, ಜೊತೆಗೆ ಕೊರೋನಾ ಸೋಂಕು ಪರೀಕ್ಷಾ ಕಿಟ್‌ಗಳನ್ನು ಹೆಚ್ಚೆಚ್ಚು ಒದಗಿಸಿ: ಮಾಜಿ ಪ್ರಧಾನಿ ದೇವೇಗೌಡ

ಇದೇ 5ರಂದು ರಾತ್ರಿ ದೀಪ ಆರಿಸಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಐಕ್ಯತೆ ಪ್ರದರ್ಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸ್ವಾಗತಿಸಿದ್ದಾರೆ.

published on : 3rd April 2020

ಬೆಳಗಾವಿಯಲ್ಲಿ ಮೂವರಿಗೆ ಕೊರೋನಾ ವೈರಸ್ ಪಾಸಿಟಿವ್, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಶುಕ್ರವಾರ ಬೆಳಗಾವಿಯಲ್ಲಿ ಮತ್ತೆ ಮೂವರಲ್ಲಿ ಕೊವಿಡ್-19 ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ.

published on : 3rd April 2020

ಕೇರಳ-ಕರ್ನಾಟಕ ಗಡಿ ವಿವಾದ: ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚಿಸಿ ನಿರ್ಧರಿಸಿ ಎಂದ ಸುಪ್ರೀಂ, ವಿಚಾರಣೆ ಏ.7ಕ್ಕೆ ಮುಂದೂಡಿಕೆ

ಕೋವಿಡ್ ಮಹಾಮಾರಿ ಹರಡುವಿಕೆ ತಡೆಗಾಗಿ ದೇಶವು ಸಂಪೂರ್ಣ ಲಾಕ್ ಡೌನ್ ಆಗಿರುವ ವೇಳೆ ಕರ್ನಾಟಕ ಹಾಗೂ ಕೇರಳದ ಗಡಿ ಬಂದ್ ಮಾಡಿದೆ. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಲಬೇಕೆಂದು ಹೇಳಿದೆ. 

published on : 3rd April 2020

ಕರ್ನಾಟಕದಲ್ಲಿ ಕೊರೋನಾ ಕುರಿತು ಸಂಪೂರ್ಣ ವಿವರವುಳ್ಳ ವೆಬ್‌ಸೈಟ್ ಬಿಡುಗಡೆ

ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿನಕ್ಕೆ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕಾಗಿ ಸರ್ಕಾರ ನಾನಾ ಉಪಕ್ರಮ ತೆಗೆದುಕೊಳ್ಳುತ್ತಿದೆ.. ಈ ನಡುವೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋವಿಡ್19 ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ವೆಬ್‌ಸೈಟ್ ಒಂದನ್ನು ಬಿಡುಗಡೆ ಮಾಡಿದೆ.

published on : 3rd April 2020

ಕರ್ನಾಟಕ: 5 ದಿನಗಳಲ್ಲಿ ಶೇ. 6.31 ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ

ಕೊರೋನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರುತ್ತಲೇ ಇದೆ. ಕಳೆದ 5 ದಿನಗಳಲ್ಲಿ ಶೇ.6.31 ರಷ್ಟು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 

published on : 3rd April 2020

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಇಂಪ್ಯಾಕ್ಟ್: ಗಣಿ ಕಾರ್ಮಿಕರ ಕುಟುಂಬಗಳಿಗೆ ನೆರವಾದ ದಾನಿಗಳು

ಕೊರೋನ ಭೀತಿಯಿಂದ ಮನೆಯಿಂದ ಆಚೆ ಬರದೆ ಹಸಿವಿನಿಂದ ಬಳಲಿದ್ದ 70ಕ್ಕೂ ಹೆಚ್ಚು ಗಣಿ ಕಾರ್ಮಿಕರ ಕುಟುಂಬಗಳ ಹಸಿವನ್ನ ದಾನಿಗಳು ನೀಗಿಸಿದ್ದಾರೆ.

published on : 3rd April 2020
1 2 3 4 5 6 >