KPS ಮ್ಯಾಗ್ನೆಟ್ ಯೋಜನೆ: ವಿಲೀನದ ಮೂಲಕ 31 ಹೊಸ ಶಾಲೆಗಳು ಆರಂಭವಾಗಿದೆ; ಸಚಿವ ಮಧು ಬಂಗಾರಪ್ಪ

2018ರಿಂದ 2025ರವರೆಗೆ 35 ಉರ್ದು ಮಾಧ್ಯಮ ಕೆಪಿಎಸ್ ಶಾಲೆಗಳು ಆರಂಭಿಸಲಾಗಿದ್ದು, 2025-26ರಲ್ಲಿ ಸುಮಾರು 100 ಉರ್ದು ಮಾಧ್ಯಮ ಹಾಗೂ ಮೌಲಾನಾ ಆಜಾದ್ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಒಟ್ಟು 131 ಶಾಲೆಗಳು ಕೆಪಿಎಸ್ ರೂಪ ಪಡೆದಿವೆ.
Minister Madhu Bangarappa
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
Updated on

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಆರಂಭಿಸುವ ಸರ್ಕಾರದ ಕ್ರಮದ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, 2022ರಿಂದ 2025ರವರೆಗೆ ರಾಜ್ಯದಾದ್ಯಂತ 31 ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಎಂಎಲ್‌ಸಿ ಹನುಮಂತ್ ನಿರಾಣಿ ಮತ್ತು ಕಾಂಗ್ರೆಸ್ ಎಂಎಲ್‌ಸಿ ಬಿಲ್ಕಿಸ್ ಬಾನು ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ಸಚಿವರು ಈ ಮಾಹಿತಿ ನೀಡಿದರು.

ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ವಿಲೀನಗೊಳಿಸಿ ಈವರೆಗೂ 31 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

2018ರಿಂದ 2025ರವರೆಗೆ 35 ಉರ್ದು ಮಾಧ್ಯಮ ಕೆಪಿಎಸ್ ಶಾಲೆಗಳು ಆರಂಭಿಸಲಾಗಿದ್ದು, 2025-26ರಲ್ಲಿ ಸುಮಾರು 100 ಉರ್ದು ಮಾಧ್ಯಮ ಹಾಗೂ ಮೌಲಾನಾ ಆಜಾದ್ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಒಟ್ಟು 131 ಶಾಲೆಗಳು ಕೆಪಿಎಸ್ ರೂಪ ಪಡೆದಿವೆ ಎಂದು ತಿಳಿಸಿದರು. ಇದೇ ವೇಳೆ ಯಾವುದೇ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಆರಂಭಿಸಲಾಗುತ್ತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Minister Madhu Bangarappa
'ಉತ್ತಮ ಕಲಿಕಾ - ಉಜ್ವಲ ಭವಿಷ್ಯ': 800 KPS ಶಾಲೆ ಮೇಲ್ದರ್ಜೆಗೆ; ಗುಣಮಟ್ಟದ ಶಿಕ್ಷಣಕ್ಕಾಗಿ 3,900 ಕೋಟಿ ರೂ ಅನುದಾನ!

ಯಾವುದೇ ಪೋಷಕರು ಮತ್ತು ಮಕ್ಕಳನ್ನು ಕೆಪಿಎಸ್ ಶಾಲೆಗಳಿಗೆ ಸೇರಿಸಲು ಒತ್ತಾಯಿಸಲಾಗುವುದಿಲ್ಲ. ಪೋಷಕರಿಗೂ ಆರ್ಥಿಕವಾಗಿ ಹೊರೆಯಾಗುವುದಿಲ್ಲ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ರವರೆಗೆ ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಕಂಪ್ಯೂಟರ್ ಕೋರ್ಸ್‌ಗಳ ಜೊತೆಗೆ ಕೌಶಲ್ಯ ತರಬೇತಿ ಕೋರ್ಸ್‌ಗಳನ್ನೂ ಸಹ ನೀಡುತ್ತೇವೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾತಿ ಪ್ರಮಾಣವು ಶೇ.11.20 ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರಕ್ಕೆ ತಿಳಿದಿದೆ. ಇದು ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಿದ್ದರಿಂದ ಅಥವಾ ಮೇಲ್ದರ್ಜೆಗೇರಿಸುವ ಕಾರಣದಿಂದ ಆಗಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳು ಮತ್ತು ಸಿಬಿಎಸ್‌ಇ ಶಾಲೆಗಳಿಗೆ ಸೇರಿಸಲು ಆಕರ್ಷಿತರಾಗುತ್ತಿದ್ದಾರೆ. ಅದಕ್ಕಾಗಿಯೇ ದಾಖಲಾತಿ ಶೇಕಡಾವಾರು ಕಡಿಮೆಯಾಗಿದೆ. ಅದಕ್ಕಾಗಿಯೇ ಸರ್ಕಾರವು 9,522 ಪ್ರಾಥಮಿಕ ಶಾಲೆಗಳು ಮತ್ತು 6,456 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮಗಳನ್ನು ಪ್ರಾರಂಭಿಸಿದೆ ಎಂದು ವಿವರಿಸಿದರು.

ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನರಾಧ್ಯ ಅವರು ಮಾತನಾಡಿ, ಹಳ್ಳಿಗಳಲ್ಲಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಟೀಕಿಸಿದರು.

ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ನಿಜವಾದ ಪರಿಕಲ್ಪನೆ ಏನು? ನೀತಿಯ ವಿವರಗಳನ್ನು ಒಳಗೊಂಡಿರುವ ಯಾವುದೇ ದಾಖಲೆಗಳನ್ನು ಸಾರ್ವಜನಿಕ ವಲಯದಲ್ಲಿ ಒದಗಿಸದ ಕಾರಣ ಪರಿಕಲ್ಪನೆ ನೀತಿ ಏನೆಂದು ಯಾರಿಗೂ ತಿಳಿದಿಲ್ಲ. ಒಂದೆಡೆ, ಒಂದೇ ಒಂದು ಶಾಲೆಯನ್ನು ಮುಚ್ಚಲಾಗುವುದಿಲ್ಲ ಎಂದು ಸಚಿವರು ಸದನದಲ್ಲಿ ಹೇಳುತ್ತಿದ್ದಾರೆ. ಆದಾಗ್ಯೂ, ಹಳ್ಳಿಗಳಲ್ಲಿನ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳೊಂದಿಗೆ ವಿಲೀನಗೊಳಿಸುವ ಮೂಲಕ ಸದ್ದಿಲ್ಲದೆ ಮುಚ್ಚುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ವಿಲೀನಕ್ಕಾಗಿ ಸರ್ಕಾರಿ ಶಾಲೆಗಳ ಅಂತರ ಮತ್ತು ಶಿಕ್ಷಣ ಹಕ್ಕಿನಲ್ಲಿ ವ್ಯಾಖ್ಯಾನಿಸಲಾದ ನೆರೆಹೊರೆಯ ಶಾಲೆಯ ಪರಿಕಲ್ಪನೆಯನ್ನು ಅದು ಉಲ್ಲಂಘಿಸುತ್ತಿದೆಯೇ ಎಂಬಂತಹ ಪ್ರಮುಖ ಅಂಶಗಳನ್ನು ಪರಿಗಣಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com