ಮಿನಿಯೇಚರ್ ವಿಮಾನ ಕುರಿತು ಪುಸ್ತಕ ಬರೆದು ಬೆಳಕಿಗೆ ಬಂದ ಕಿರಣ

ಈತ ಭರವಸೆಯ ಕಿರಿಯ ವಿಜ್ಞಾನಿ ಎಂಬ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಅಂದು ಅಂತರ ಶಾಲಾ ಉತ್ಸವದಲ್ಲಿ ಬಿಡುಗಡೆ ಮಾಡಿದ ಈತನ ಪುಸ್ತಕ...
ಕಿರಣ್ ತಯಾರಿಸಿದ ಮೊದಲ ವಿಮಾನದ ಮಾದರಿ(ಒಳ ಚಿತ್ರದಲ್ಲಿ ಕಿರಣ್)
ಕಿರಣ್ ತಯಾರಿಸಿದ ಮೊದಲ ವಿಮಾನದ ಮಾದರಿ(ಒಳ ಚಿತ್ರದಲ್ಲಿ ಕಿರಣ್)

ಬೆಂಗಳೂರು: ಈತನನ್ನು ಭರವಸೆಯ ಕಿರಿಯ ವಿಜ್ಞಾನಿ ಎಂದು ಕರೆಯಬಹುದು. ಅಂದು ಅಂತರ ಶಾಲಾ ಉತ್ಸವದಲ್ಲಿ ಬಿಡುಗಡೆ ಮಾಡಿದ ಈತನ ಪುಸ್ತಕ ''ಆರ್ ಸಿ ವಲ್ಡ್ರ್ : ಎ ಜರ್ನಿ ಟು ರಿಮೋಟ್ ಕಂಟ್ರೋಲ್ ಪ್ಲೇನ್ಸ್'' ಆವೃತ್ತಿ-1 ಎಲ್ಲರ ಕಣ್ಣರಳಿಸುವಂತೆ ಮಾಡಿದೆ.

ಇವನ ಹೆಸರು ಕಿರಣ್ ರವೀಂದ್ರ ಪಾಟೀಲ್. ಬೆಂಗಳೂರಿನ ಯಲಹಂಕದಲ್ಲಿರುವ ನಾಗಾರ್ಜುನ ವಿದ್ಯಾನಿಕೇತನದಲ್ಲಿ ಸಿಬಿಎಸ್ ಸಿ ವಿಭಾಗದಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಮಿನಿಯೇಚರ್ ವಿಮಾನವನ್ನು ರಚಿಸಲು ಬೇಕಾದ ತಾಂತ್ರಿಕ ಉಪಕರಣಗಳು, ವಿಧಾನ ಮತ್ತು ಮುನ್ನೆಚ್ಚರಿಕೆ ಕುರಿತು ವಿಷಯಗಳನ್ನು ಒಟ್ಟುಸೇರಿಸಿ ಪುಸ್ತಕ ಹೊರತಂದಿದ್ದಾನೆ. ಮಾದರಿ ಮಿನಿಯೇಚರ್ ವಿಮಾನವನ್ನು ಸ್ವತಃ ರಚಿಸಿದ್ದಾನೆ ಕೂಡ.

ವಿಮಾನಗಳಲ್ಲಿ ಏರೊಬಾಟಿಕ್ಸ್ ಮಾಡುವುದೆಂದರೆ ಕಿರಣ್ ಪಾಟೀಲ್ ಗೆ ಬಹಳ ಇಷ್ಟವಂತೆ. ಅವನು ತಯಾರಿಸಿದ ಯಂತ್ರವು 5 ರಿಂದ 500 ಇಂಚು ವಿಸ್ತಾರವಿದೆ. ಹಾರುವ ಕಡ್ಡಿ, ಸ್ಕೈ ಸರ್ಫರ್ಸ್, 3ಡಿಕ್ಸ್, ಮೈಕ್ರೋ ಮತ್ತು ಮೇಕ್ರೋ ವಿಮಾನಗಳನ್ನು ಕೂಡ ಹಾರಿಸುತ್ತಾನೆ.
ಕಿರಣ್ ಗೆ ಚಿಕ್ಕವನಿದ್ದಾಗಲೇ ವಿಮಾನವೆಂದರೆ ಭಾರೀ ಕುತೂಹಲವಿತ್ತಂತೆ. ಆಟಿಕೆಗಳಲ್ಲಿ ಹೆಚ್ಚಾಗಿ ವಿಮಾನಗಳಲ್ಲಿ ಆಡುತ್ತಿದ್ದನಂತೆ. ಎರಡನೇ ತರಗತಿ ಬರುವ ಹೊತ್ತಿಗೆ ಆರ್ ಸಿ ಕಿಟ್ ನಿಂದ ಎಲೆಕ್ಟ್ರಾನಿಕ್ ವಿಮಾನಗಳನ್ನು ಹೇಗೆ ನಿರ್ಮಿಸಬೇಕೆಂಬುದನ್ನು ಕಲಿತಿದ್ದನಂತೆ. 
 
''ನನಗೆ ಮಿನಿಯೇಚರ್ ವಿಮಾನದ ಮಾದರಿಯನ್ನ ಕಟ್ಟಲು ಐದರಿಂದ ಆರು ವರ್ಷ ಹಿಡಿಯಿತು. ತಪ್ಪು ಮಾಡಿ ತಿದ್ದಿ ತಪ್ಪು ಮಾಡಿ ಕಲಿತೆ. ಈ ವಿಮಾನವನ್ನು ನಿರ್ಮಿಸುವ ಮೊದಲು ಹತ್ತು ಸಲ ವಿಫಲನಾಗಿದ್ದೆ. ಮೊದಲ ಪ್ರಯತ್ನದಲ್ಲಿ ವಿನ್ಯಾಸದಲ್ಲಿ ನ್ಯೂನತೆಯನ್ನು ಗುರುತಿಸಿದೆನು. ನಂತರ ಅದರ ರಚನೆಯಲ್ಲಿ ವ್ಯತ್ಯಾಸವಾಗಿದೆ ಎಂದು ಗೊತ್ತಾಯಿತು. ಬ್ಯಾಟರಿ ಗಾತ್ರ ಉಳಿದ ಉಪಕರಣಗಳೊಂದಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ರೆಕ್ಕೆಗಳನ್ನು ಜೋಡಿಸಲು ಪ್ರಯತ್ನಿಸಿದೆ.'' ಎಂದು ಕಿರಣ್ ತನ್ನ ವಿಮಾನ ರಚನೆಯ ವಿಧಾನವನ್ನು ವಿವರಿಸುತ್ತಾನೆ. ಕೊನೆಗೆ ವಿಮಾನದ ಹೋಲಿಕೆಯನ್ನು ನಿರ್ಮಿಸಿ ತನ್ನದೇ ವಿನ್ಯಾಸದಲ್ಲಿ ನಿರ್ಮಿಸಿದ.

ತುರ್ತು ಹಾರಾಟ ವಿಮಾನವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ಕೂಡ ಕಿರಣ್ ಪುಸ್ತಕದಲ್ಲಿ ವಿವರಿಸಿದ್ದಾನೆ. ನನ್ನ ಹವ್ಯಾಸದ ಮೂಲಕ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆನ್ನುವ ಹಂಬಲವಿದೆ. ನನ್ನ ಪ್ರತಿಭೆಯನ್ನು ಅಗತ್ಯವಿರುವವರ ಆರೋಗ್ಯ ಬಳಕೆಗೆ ಬಳಸಬೇಕೆಂದು ಅಂದುಕೊಂಡಿದ್ದೇನೆ ಎನ್ನುತ್ತಾನೆ ಕಿರಣ್.

ಮಿನಿಯೇಚರ್ ವಿಮಾನ ನಿರ್ಮಾಣ ಹವ್ಯಾಸಕ್ಕೆ ಕಿರಣ್ ಗೆ ಅವನ ಪೋಷಕರು ಸಹಾಯ ಮಾಡುತ್ತಾರೆ. ಕೆಲವೊಂದು ಉಪಕರಣಗಳನ್ನು ವಿದೇಶಗಳಿಂದ ತರಿಸಬೇಕಾಗುತ್ತದೆ. ಕಿರಣ್ ರಜಾದಿನಗಳಲ್ಲಿ ಅವನ ಮನೆಯಿಂದ 2 ಕಿಲೋ ಮೀಟರ್ ದೂರದಲ್ಲಿರುವ ಮೈದಾನಕ್ಕೆ ಹೋಗಿ ಅಲ್ಲಿ ವಿಮಾನ ಹಾರಿಸುತ್ತಾನಂತೆ. ಎರಡು ತಿಂಗಳ ಹಿಂದೆ ಮುಂಬೈಯ ಐಐಟಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಟೆಕ್ ಫೆಸ್ಟ್ ನಲ್ಲಿ ತನ್ನ ಕ್ವಾಡ್ ಕಾಪ್ಟರ್ ಹಾರಿಸಿ ಕಿರಣ್ ಮೂರನೇ ಬಹುಮಾನ ಗಳಿಸಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com