• Tag results for ಬೆಂಗಳೂರು

ಗ್ರಾಹಕರ ಮಾಹಿತಿ ನಿರ್ವಹಣೆಯಲ್ಲಿ ಲೋಪ: 110 ಔಷಧಾಲಯಗಳ ಲೈಸೆನ್ಸ್ ರದ್ದುಪಡಿಸಿದ ಸರ್ಕಾರ

ಐಎಲ್ ಐ, ಸಾರಿ (Sari)ಯಂತಹ ಇನ್ ಫ್ಲುಯೆಂಜಾಕ್ಕೆ ಸಂಬಂಧಿಸಿದ ಔಷಧ ಖರೀದಿಸುವ ಗ್ರಾಹಕರ ಮಾಹಿತಿಯನ್ನು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ 110 ಔಷಧಾಲಯಗಳ ಪರವಾನಗಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.

published on : 7th July 2020

ಗುರು ರಾಘವೇಂದ್ರ ಬ್ಯಾಂಕ್ ಹಗರಣಕ್ಕೆ ಮೊದಲ ಬಲಿ: ಮಾಜಿ ಸಿಇಒ ಆತ್ಮಹತ್ಯೆ

ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಶ್ರೀ ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿ ಹಗರಣ ಮೊದಲ ಬಲಿ ಪಡೆದಿದೆ. ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬ್ಯಾಂಕಿನ ಮಾಜಿ ಸಿಇಓ ವಾಸುದೇವ್ ಮಯ್ಯ ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

published on : 6th July 2020

ಮೋದಿ ಇಲ್ಲದಿದ್ದರೆ ದೇಶ ಈ ಮಟ್ಟದಲ್ಲಿ ಕೊರೋನಾದಿಂದ ಬಚಾವಾಗುತ್ತಿರಲಿಲ್ಲ-ಬಿ.ಎಲ್. ಸಂತೋಷ್  

ಕೊರೋನಾ ಸೋಂಕು ಪ್ರಕರಣಗಳಲ್ಲಿ ಭಾರತ ಮೂರನೇ ಸ್ಥಾನಕ್ಕೇರಿದ್ದು, ಅಮೆರಿಕ ದೇಶದ ಮೂರು ಪಟ್ಟು ಜನ ನಮ್ಮಲ್ಲಿದ್ದಾರೆ. ಹೀಗಾಗಿಯೇ ಸೋಂಕು ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.

published on : 6th July 2020

ಜನರ ಸೋಂಕು ಪರೀಕ್ಷೆ ನಡೆಸದ ಕೊಲೆಗಡುಕ ಸರ್ಕಾರ- ಸಿದ್ದರಾಮಯ್ಯ  

 ಸರಿಯಾಗಿ  ಸೋಂಕು ಪರೀಕ್ಷೆ ನಡೆಸದೇ ಜನರ ಸಾವಿಗೆ ಕಾರಣವಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೊಲೆಗುಡಕ ಸರ್ಕಾರ ಎಂದರೆ ತಪ್ಪಾಗುತ್ತದೆಯೇ?  ಎಂದು ವಿಪಕ್ಷ ನಾಯಕ  ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

published on : 6th July 2020

ಸಿದ್ದರಾಮಯ್ಯ ಅವರಿಗೆ ಲೆಕ್ಕ ಕೇಳುವ ಹಕ್ಕಿದೆ; ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ: ಡಾ. ಅಶ್ವತ್ಥನಾರಾಯಣ

ಜಿಲ್ಲೆಯಲ್ಲಿ ಜಾರಿ ಹಂತದಲ್ಲಿರುವ 15 ನೀರಾವರಿ ಕಾಮಗಾರಿಗಳನ್ನು ಆದಷ್ಟು ಶೀಘ್ರಗತಿಯಲ್ಲಿ ಮುಗಿಸುವುದರ ಜತೆಗೆ, ವಿಶ್ವೇಶ್ವರಯ್ಯ ನಾಲೆಯ ದುರಸ್ತಿ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

published on : 6th July 2020

2,450 ರೂ.ಗೆ ಮನೆಯಲ್ಲೇ ಕೊರೋನಾ ಚಿಕಿತ್ಸೆ: ಖಾಸಗಿ ಆಸ್ಪತ್ರೆಯ ವಿನೂತನ ಪ್ರಯೋಗ

ಮಾರಕ ಕೊರೋನಾ ವೈರಸ್ ನಿಂದಾಗಿ ಬೆಂಗಳೂರಿಗರು ತತ್ತರಿಸಿ ಹೋಗಿದ್ದು, ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಸೋಂಕಿತರು ಪರದಾಡುತ್ತಿರುವ ಹೊತ್ತಿನಲ್ಲೇ ಖಾಸಗಿ ಆಸ್ಪತ್ರೆಯೊಂದು ಕೇವಲ 2,450ರೂ.ಗೆ ಮನೆಯಲ್ಲೇ ಕೊರೋನಾ ಚಿಕಿತ್ಸೆ ನೀಡುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

published on : 6th July 2020

ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ, ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ: ಮುಖ್ಯಮಂತ್ರಿ, ಸಚಿವರಿಂದ ಗೌರವ ನಮನ

ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ.

published on : 6th July 2020

ಭಾನುವಾರದ ಲಾಕ್ ಡೌನ್ ಯಶಸ್ವಿ: ಬೆಂಗಳೂರು ಜನತೆಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಧನ್ಯವಾದ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಯಾಗಿದ್ದ ಭಾನುವಾರದ ಲಾಕ್​ಡೌನ್​​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.

published on : 6th July 2020

ವೈದ್ಯಕೀಯ ಕಿಟ್‌ನಲ್ಲಿ ಅವ್ಯವಹಾರ: ಲೋಪದೋಷ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ- ಮುಖ್ಯಮಂತ್ರಿ ಯಡಿಯೂರಪ್ಪ

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿರುವುದು ಕಂಡುಬಂದರೆ ಅಧಿಕಾರಿಗಳು ಅಥವಾ ಯಾವುದೇ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

published on : 6th July 2020

ಬೆಂಗಳೂರಿನಲ್ಲಿ ಮತ್ತೋರ್ವ ಎಎಸ್ಐ ಕೋವಿಡ್-19 ಗೆ ಬಲಿ

ಸಿಲಿಕಾನ್ ಸಿಟಿಯ‌ ಮತ್ತೋರ್ವ ಕೊರೊನಾ ವಾರಿಯರ್ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ.

published on : 6th July 2020

ಕೊರೋನಾ ಯೋಧರಿಗೆ ಮಸಿ ಬಳಿಯಬೇಡಿ: ಡಾ. ಕೆ.ಸುಧಾಕರ್

ಮಾರಕ ಕೊರೋನಾ ವೈರಸ್ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಕೊರೋನಾ ಯೋಧರಿಗೆ ಮಸಿ ಬಳಿಯಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

published on : 6th July 2020

ಸೋಂಕಿತರ ಚಿಕಿತ್ಸೆಗೆ ಸರ್ಕಾರದ ಮಹತ್ವದ ಹೆಜ್ಜೆ: ಕೋವಿಡ್ ಕೇರ್ ಕೇಂದ್ರಗಳಲ್ಲಿ ಐಸಿಯು ಸ್ಥಾಪನೆ

ಕೊರೋನಾ ಸೋಂಕಿತರ ಚಿಕಿತ್ಸೆಗೆ ಮಹತ್ವದ ಹೆಜ್ಜೆಗಳನ್ನು ಇಟ್ಟಿರುವ ರಾಜ್ಯ ಸರ್ಕಾರ ಕೋವಿಡ್ ಕೇರ್ ಕೇಂದ್ರಗಳಲ್ಲಿ ತುರ್ತು ನಿಗಾ ಘಟಕಗಳನ್ನು (ಐಸಿಯು) ಸ್ಥಾಪಿಸಲು ಮುಂದಾಗಿದೆ.

published on : 6th July 2020

ರಾಜ್ಯದಲ್ಲಿ ಇಂದು 1925 ಕೊರೋನಾ ಪ್ರಕರಣ ಪತ್ತೆ, 37 ಬಲಿ, 23,474ಕ್ಕೇರಿದ ಸೋಂಕಿತರ ಸಂಖ್ಯೆ!

ರಾಜ್ಯದಲ್ಲಿ ಇಂದು ಹೊಸದಾಗಿ 1,925 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು 37 ಮಂದಿ ಕೊರೋನಾದೆ ಬಲಿಯಾಗಿದ್ದಾರೆ.

published on : 5th July 2020

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಗೆ ಕೊರೋನಾ ವೈರಸ್ ಸೋಂಕು

ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರಿಗೆ ಕೊರೋನಾ ಸೋಂಕು ಒಕ್ಕರಿಸಿದೆ.

published on : 5th July 2020
1 2 3 4 5 6 >