ದೇಶದ ಶಾಂತಿ, ಸಾಮರಸ್ಯಕ್ಕಾಗಿ ಹೋರಾಡುತ್ತಿರುವ ಶೃತಿ ಶಿಮ್ಲಾ ಮೂಲದವರು. ಭಾರತ-ಚೀನಾ ಗಡಿಭಾಗದಲ್ಲಿ ಇಂಡೊ-ಟಿಬೆಟನ್ ಗಡಿ ಪೊಲೀಸರು ಮತ್ತು ಭಾರತೀಯ ಸೇನಾ ಸಿಬ್ಬಂದಿ ಎದುರು ಕ್ಹಾರ್ಡುಂಗ್ಲಾ ಪಾಸ್ ಹತ್ತಿರ ಹಿಮಾಚಲ ಪ್ರದೇಶದ ಲಾಹುಲ್ ಸ್ಪಿತಿ ಜಿಲ್ಲೆಯಲ್ಲಿ ದಾಖಲೆಯ ನೃತ್ಯ ಪ್ರದರ್ಶನ ನೀಡಿದ ನಂತರ ಆ ಭಾಗದ ಹೆಣ್ಣು ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುವ ಯೋಜನೆಯಲ್ಲಿ ಶೃತಿ ಇದ್ದಾರೆ.