ಡ್ರೈಯರ್ ಸ್ಪೆಷಲ್

ಡ್ರೈಯರ್ ಸ್ಪೆಷಲ್
Updated on: 

ದ್ರಾಕ್ಷಿ, ಸೇಬು, ಚೆರಿ ಹಣ್ಣು, ಪೇರಲೆ ಇತ್ಯಾದಿ ಹಣ್ಣುಗಳು ಹೆಚ್ಚು ದಿನ ಮನೆಯಲ್ಲಿ ಇರಿಸಿಕೊಳ್ಳುವುದು ಕಷ್ಟ. ಬೇಗನೆ ಹಾಳಾಗುತ್ತವೆ. ತರಕಾರಿಗಳು ಈ ಸಮಸ್ಯೆಯಿಂದ ಹೊರತಾಗಿಲ್ಲ. ಡೀಹೈಡ್ರೇಟ್ ಮಾಡುವ ಮೂಲಕ ತರಕಾರಿ, ಹಣ್ಣುಗಳನ್ನು ಒಂದಷ್ಟು ದಿನಗಳ ಕಾಲ ಹಾಳಾಗದಂತೆ ತಡೆಯಬಹುದು. ಘನೀಕರಿಸುವ ವಿಧಾನಕ್ಕಿಂತಲೂ ಸಿಂಪಲ್. ಫುಡ್ ಡಿಹೈಡ್ರೇಷನ್‌ಗೆ ಬೇಕಿರುವುದು ಸುಲಭವಾದ ಗಾಳಿಯ ಪ್ರಸರಣ. ಅತಿ ಶೀಘ್ರವಾಗಿ ಮಾಡಿದರೆ ಒಳಿತು. ನಗರ ಪ್ರದೇಶದವರಿಗೆ ಹೇಳಿ ಮಾಡಿಸಿದ ಪರಿಷ್ಕರಣಾ ವಿಧಾನವೇ ಸರಿ.

ಸನ್ ಡ್ರೈಯಿಂಗ್
ಹೊರಗಿನ ಬಿಸಿಲಲ್ಲಿ ಹಣ್ಣುಗಳನ್ನು ಇರಿಸಿ ಒಣಗಿಸಬಹುದು. ಹಣ್ಣುಗಳನ್ನು ಇರಿಸುವ ಸ್ಥಳ ಸುರಕ್ಷಿತವಾಗಿರಬೇಕು. ತೇವಾಂಶವಿರದ, ಕೀಟ ಬಾಧೆ ಇರದ ಪ್ರದೇಶ ಒಣಗಿಸುವುದಕ್ಕೆ ಸೂಕ್ತ ಸ್ಥಳ. ಬಿಸಿಲು ಮರೆಯಾದಂತೆ ಒಳತಂದು ಟ್ರೇನಲ್ಲಿ ಜೋಡಿಸಿ ಸುರಕ್ಷಿತವಾಗಿ ಇರಿಸಬಹುದು. ಅದಕ್ಕಾಗೆ ಒಂದು ಮರದ ಪೆಟ್ಟಿಗೆ ನಿರ್ಮಿಸಿಕೊಳ್ಳಬಹುದು. ಪೂರ್ವ ಭಾಗ ತೆರೆದಿರಲಿ. ಬಿಸಿಲಿನ ಕಿರಣಗಳು ಒಳಬರಲು ಸಹಾಯ ಆಗುವಂತೆ ನಿರ್ಮಿಸಿದ ಪೆಟ್ಟಿಗೆಯನ್ನು ರಿಮೆ ಅಥವಾ ಹತ್ತಿಯ ಬಲೆ ಸಹಾಯದಿಂದ ಕವರ್ ಮಾಡಬೇಕು. ಇದರಿಂದ ಕೀಟಗಳಿಗೆ ಒಳ ಬರಲಾಗದೆ ಹಣ್ಣು, ತರಕಾರಿಗಳು ಸುರಕ್ಷವಾಗಿರಿಸಬಹುದು. ಲೋಹದಿಂದ ಮಾಡಿದ ಡ್ರೈಯರ್ ಬಳಸುತ್ತೀರಿ ಎಂದಾದರೆ ಪರದೆಯಾಗಿ ಸ್ಕ್ರೀನಿಂಗ್ ವಸ್ತುಗಳನ್ನು ಬಳಕೆ ಮಾಡಿ. ಗಾಳಿ ಮಲಿನವಾಗಿರದ ಕಡೆ ಡ್ರೈಯರ್ ಇರಿಸಿ. 85- 100 ಡಿಗ್ರಿ ಉಷ್ಣಾಂಶ ಫುಡ್ ಡ್ರೈಯರ್‌ಗೆ ಉತ್ತಮ. ದಪ್ಪ ಇರುವ ಹಣ್ಣುಗಳನ್ನು ಒಣಗಿಸುವಾಗ ಡ್ರೈಯರ್ ಬಾಕ್ಸ್ ಎರಡೂ ಬದಿಯಲ್ಲಿ ತೆರೆದಿರಿಸಿ. ಹೀಗೆ ಒಣಗಿಸುವುದರಿಂದ ಬೇಗ ಹಣ್ಣುಗಳ ನೀರಿನಾಂಶ ಆರಿ, ಹೆಚ್ಚು ದಿನ ಕೆಡುವುದಿಲ್ಲ. ರುಚಿಯೂ ಹೆಚ್ಚಿರುತ್ತದೆ.

ವಿದ್ಯುತ್ ಡಿಹೈಡ್ರೇಟರ್
ಹೆಚ್ಚಿನ ಪದಾರ್ಥಗಳನ್ನು ಒಣಗಿಸಿ ಇಟ್ಟುಕೊಳ್ಳುತ್ತೀರಿ ಎಂದಾದರೆ ವಿದ್ಯುತ್‌ಡಿಹೈಡ್ರೇಟರ್ ಖರೀದಿಸಬಹುದು. ವ್ಯವಸ್ಥಿತವಾಗಿ ಹಾಗೂ ವೇಗವಾಗಿ ಹಣ್ಣು, ತರಕಾರಿಗಳನ್ನು ಒಣಗಿಸಿಟ್ಟುಕೊಳ್ಳಬಹುದು. ತರಕಾರಿ, ಹಣ್ಣುಗಳನ್ನು ಬೆಳೆಯುವ ರೈತರಿಗೂ ಬಹು ಉಪಯೋಗಕಾರಿ.ವಿದ್ಯುತ್ ಡಿಹೈಡ್ರೇಟರ್‌ನಲ್ಲಿ ಹಲವು ಕಪಾಟುಗಳಿದ್ದು, ಏಕಕಾಲಕ್ಕೆ ಹೆಚ್ಚಿನ ಪದಾರ್ಥ ಒಣಗಿಸಿಟ್ಟುಕೊಳ್ಳಬಹುದು. ಒಳ್ಳೆಯ ಥರ್ಮೋಸ್ಟಾಟ್ ಮತ್ತು ಕಡಿಮೆ ಸದ್ದು ಮಾಡುವ ಫ್ಯಾನ್ ಹೊಂದಿರುವ ಕಡಿಮೆ ಸಾಮರ್ಥ್ಯದ ಘಟಕವಿರುವ ವಿದ್ಯುತ್ ಡಿಹೈಡ್ರೇಟರ್ ಖರೀದಿಸುವುದು ಸೂಕ್ತ. ಬೆಚ್ಚನೆಯ ಕೊಠಡಿಯಲ್ಲಿ ಡಿಹೈಡ್ರೇಟರ್ ಇಟ್ಟುಕೊಳ್ಳಿ. 5- 9 ಟ್ರೇಗಳನ್ನು ಹೊಂದಿರುವ ಎಕ್ಸ್‌ಕ್ಯಾಲಿಬರ್ ಡಿಹೈಡ್ರೇಟರ್‌ಗಳಲ್ಲಿ ಉತ್ತಮವಾಗಿದೆ. ಹಿಂಭಾಗದಲ್ಲಿ ಫ್ಯಾನ್ ಜೋಡಿಸಿರುವುದರಿಂದ ಎಲ್ಲಾ ಟ್ರೇಗಳಿಗೂ ಶಾಖ ದೂಡುವಲ್ಲಿ ಸಮರ್ಥವಾಗಿದೆ ಹಾಗೂ ನಿಯಂತ್ರಿಸುವಲ್ಲೂ ಸಹಕಾರಿ.

ಓವೆನ್ ಡ್ರೈಯಿಂಗ್
ಕಡಿಮೆ ಪ್ರಮಾಣದ ಪದಾರ್ಥಗಳನ್ನು ಒಣಗಿಸಲು ಪರಿಣಾಮಕಾರಿಯಾಗಿ ಬಳಕೆಯಾಗುವುದು ಓವೆನ್ ಡ್ರೈಯಿಂಗ್. ಕಡಿಮೆ ಉಷ್ಣಾಂಶ ಇರುವ ಸಂದರ್ಭಗಳಲ್ಲಿ ಓವೆನ್ ಡ್ರೈಯಿಂಗ್ ಬಳಕೆ ಕಷ್ಟವೆಂದೆನಿಸಬಹುದು. ಓವೆನ್ ಥರ್ಮಾಮೀಟರ್ ಅಳವಡಿಕೆ ಉತ್ತಮ. ಟ್ರೇಗಳನ್ನು ನೇತಾಡಿಸುವಂತೆ ಕಟ್ಟಿ ಒಣಗಿಸುವುದು ಸೂಕ್ಷ್ಮ ಜೀವಿಗಳಿಂದ ದೂರ ಇರಿಸುತ್ತದೆ.

ಗಮನಿಸಿ...
-    ಹಣ್ಣು ಅಥವಾ ತರಕಾರಿ ಪಕ್ವಗೊಂಡಾಕ್ಷಣ ಕಟಾವು ಮಾಡಬೇಕು.
-    ಪದಾರ್ಥ ಒಣಗಿಸುವ ಮೊದಲು ಚೆನ್ನಾಗಿ ತೊಳೆಯಬೇಕು. ಸಾಧ್ಯವಾದರೆ ಮೇಲಿನ ಸಿಪ್ಪೆ ತೆಗೆಯಬೇಕು. ತುಂಡುಗಳಾಗಿ ಬೇರ್ಪಡಿಸಿ ಟ್ರೇನಲ್ಲಿ ಜೋಡಿಸಿಡಬೇಕು.
-    ಹೆಚ್ಚಿನ ಉಷ್ಣಾಂಶ ಒಳ್ಳೆಯದೇ, ಬೇಗನೆ ಒಣಗಿಸುತ್ತದೆ. ಆದರೆ, ಪದಾರ್ಥ ಬೇಯದಂತೆ ಎಚ್ಚರ ವಹಿಸಬೇಕು.
-    ದಿನದಲ್ಲಿ 2- 3 ಬಾರಿ ಟ್ರೇಗಳನ್ನು ಮೇಲೆ ಕೆಳಗೆ ಮಾಡುತ್ತಿರಬೇಕು.
-    ಚೆರ್ರೀ, ಎಪ್ರಿಕಾಟ್ಸ್, ಅನಾನಸ್ ಇತ್ಯಾದಿ ರಸಭರಿತ ಹಣ್ಣುಗಳನ್ನು ಸುಲಭವಾಗಿ ರಕ್ಷಿಸಿ ಬಳಸಬಹುದು.

-ಮಂಜುನಾಥ್ ಎಲ್.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com