ಕಾಸು ಖರ್ಚಿಲ್ಲದೇ ಬೆಳೆ ಉಳಿಸಿಕೊಳ್ಳಿ

ಕಾಸು ಖರ್ಚಿಲ್ಲದೇ ಬೆಳೆ ಉಳಿಸಿಕೊಳ್ಳಿ
Updated on: 

ಕೃಷಿಕರು ಬೆಳೆಗಳ ರಕ್ಷಣೆಗೆ ಏನಾದರೂ ಉಪಾಯ ಕಂಡುಕೊಳ್ಳಲೇಬೇಕು. ಇಲ್ಲದಿದ್ದರೆ ಬಹಳಷ್ಟು ಬೆಳೆ ಪ್ರಾಣಿ, ಪಕ್ಷಿಗಳ ದುಪಳಿಗೆ ತುತ್ತಾಗುವುದೇ ಜಾಸ್ತಿ. ಪ್ರಾಣಿ, ಪಕ್ಷಿಗಳಿಂದ ಜಮೀನಿನಿಂದ ಓಡಿಸಲು ನಾನಾ ಬಗೆಯ ಉಪಾಯ ಕಂಡುಕೊಂಡಿದ್ದಾರೆ ಕೃಷಿಕರು. ಅಂತಹ ಪರಿಹಾರ ಕ್ರಮಗಳ ಕೆಲವು ಸ್ಯಾಂಪಲ್-
1. ಬಾಳೆ ಗಿಡ ರಕ್ಷಿಸಲು ಬಣ್ಣದ, ಅದರಲ್ಲೂ ಹಳೆಯ ನೈಲಾನ್ ಸೀರೆಗಳನ್ನು ಸುತ್ತಿಡುವುದು ಒಂದು ಉಪಾಯ. ಮಂಗಗಳು ಕೆಂಪು, ಹಳದಿ ಬಣ್ಣಗಳಿಗೆ ಹೆದರುತ್ತವೆ ಎಂಬ ನಂಬಿಕೆ ರೈತರದು. ಅಲ್ಲದೆ, ಅವುಗಳ ಉಗುರು ಸೀರೆಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ಇದರಿಂದ ಬಾಳೆ ಬಚಾವ್.
2. ಅಡಕೆ ಮರಕ್ಕೆ 2- 3 ಅಡಿ ತೆಳ್ಳಗಿನ ತಗಡು ಅಂಟಿಸಿ ಎಳೆ ಅಡಕೆ ಕಾಯಿ ತಿನ್ನಲು ಬರುವ ಅಳಿಲಿನಿಂದ ರಕ್ಷಣೆ ಪಡೆಯಬಹುದು. ಅದೇ ರೀತಿ ತೆಂಗಿನ ಸಸಿಗೆ ಸುತ್ತಲೂ ಬಣ್ಣದ ಟೆಂಟ್ ಕಟ್ಟಿ ಹಂದಿಗಳಿಂದ ರಕ್ಷಿಸಬಹುದು. ಬಣ್ಣ- ಬಣ್ಣದ ಬಟ್ಟೆ ಕಂಡರೆ ಹಂದಿಗಳು ಜಾಗ ಖಾಲಿ ಮಾಡುತ್ತವಂತೆ.
3. ಮರ ಹತ್ತದಂತೆ ಮಂಗಗಳಿಂದ ರಕ್ಷಣೆ ಹಾಗೂ ಮರಕುಟಿಗದಿಂದ ರಕ್ಷಣೆ ಪಡೆಯಲು ಇಲ್ಲೊಬ್ಬರು ತೆಂಗಿನ ಮರಕ್ಕೆ ಕೆಂಪು ಸೀರೆ ಉಡಿಸಿದ್ದಾರೆ. ಇದು ವಿಚಿತ್ರವಾಗಿ ಕಂಡರೂ ಸಾಕಷ್ಟು ಪ್ರಯೋಜನಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ನಿಮಗೂ ಇಷ್ಟವಾದರೆ ಇಂತಹ ಬೆಳೆ ರಕ್ಷಣಾ ತಂತ್ರಗಳನ್ನು ಕಡಿಮೆ ಖರ್ಚಿನಲ್ಲಿ ಅಳವಡಿಸಿಕೊಳ್ಳಬಹುದು. <

-ಕೆಕ್ಕಾರ. ಎಸ್. ಎ. ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com