ಚಿಕ್ಕು ಚಿಕ್ಕು

ಚಿಕ್ಕು ಚಿಕ್ಕು
Updated on: 

ಚಿಕ್ಕು (ಸಪೋಟಾ) ಪ್ರಮುಖ ತೋಟಗಾರಿಕೆ ಬೆಳೆ. ಅಲ್ಲದೆ, ದೀರ್ಘಕಾಲಿಕ ಬೆಳೆಯೂ ಹೌದು. ಇದರ ಮೂಲ ಮೆಕ್ಸಿಕೋ ಎಂದು ಗುರುತಿಸಲಾಗಿದೆ. ಚ್ಯುವಿಂಗ್ ಗಮ್‌ನಲ್ಲಿ ಬಳಸುವುದರಿಂದ ಚಿಕ್ಕುಗೆ ಬೇಡಿಕೆ ಹೆಚ್ಚಿದೆ.

ಬೆಳೆಯುವ ವಿಧಾನ
ಸಾಮಾನ್ಯವಾಗಿ ಇದನ್ನು ಎಲ್ಲ ನಮೂನೆಯ ಮಣ್ಣಲ್ಲೂ ಬೆಳೆಯಬಹುದು. ಮೊದಲು 30 ಅಡಿ ಅಂತರದಲ್ಲಿ ಗುಂಡಿ ತೋಡಬೇಕು. 2 ಅಡಿ ಅಗಲವಿರಬೇಕು. ಎರಡೂವರೆ ಅಡಿ ಅಳವಿರಬೇಕು. ಬಳಿಕ ಗುಂಡಿಗೆ 15 ಕೆಜಿಯಷ್ಟು ನಾಟಿ ಗೊಬ್ಬರ ಹಾಕಬೇಕು. ಅದರ ಜತೆಗೆ 3 ಕೆಜಿ ಬೇವಿನ ಹಿಂಡಿ, 2 ಕೆಜಿ ಹರಳ ಹಿಂಡಿ, 2 ಕೆಜಿ ಹೊಂಗೆ ಹಿಂಡಿ ಬೆರೆಸಿ ಅದಕ್ಕೆ ನೀರು, ಮಣ್ಣು ಹಾಕಿ 15 ದಿನ ಮುಚ್ಚಬೇಕು. 15 ದಿನದ ನಂತರ ಚಿಕ್ಕು ಸಸಿ ನಾಟಿ ಮಾಡಬೇಕು. ಆಗಾಗ ನೀರು, ಗೊಬ್ಬರ ಹಾಕುತ್ತಿರಬೇಕು. ಇದು ದೀರ್ಘಕಾಲದ ಬೆಳೆ ಆಗಿದ್ದರಿಂದ ಅಂತರ್ ಬೆಳೆಯಾಗಿ ಕಾಯಿಪಲ್ಲೆ ಸೇರಿದಂತೆ ಅಲ್ಪಾವಧಿ ಬೆಳೆಗಳನ್ನು ಬೆಳೆಯಬಹುದು. ಚಿಕ್ಕುವಿನ ಕವಲು ಹೆಚ್ಚು ಹಬ್ಬಿದರೆ ಕಟಾವು ಮಾಡಬೇಕು. ಸಾಮಾನ್ಯವಾಗಿ ಚಿಕ್ಕು ನಾಟಿ ಮಾಡಿದ 3 ವರ್ಷಕ್ಕೆ ಫಸಲು ನೀಡಲು ಶುರು ಮಾಡುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಗಿಡವೊಂದರಿಂದಲೇ ವಾರ್ಷಿಕ 500 ಕೆಜಿ ಇಳುವರಿ ಪಡೆಯಬಹುದು.

ತಳಿಗಳು
ಕ್ರಿಕೆಟ್ ಬಾಲ್, ಅಲಹಾಬಾದ್, ಕಾಳಿಪಟ್ಟಿ, ಡಿಎಚ್‌ಎಸ್- 1,2, ಮತ್ತು ಸಿಒ- 1 ಸೇರಿದಂತೆ ಹಲವಾರು ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ.

ರೋಗಗಳು
ಎಲೆಚುಕ್ಕೆ ರೋಗ, ಕಾಂಡ ಕೊರಕ, ಹಣ್ಣು ಕೊರಕ, ಬಿಳಿಹೇನು, ಕರಿಹೇನು, ತಿಗಣೆ ಮೊದಲಾದ ರೋಗ, ಕೀಟ ಕಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಚಿಕ್ಕು ಬೆಳೆಯುತ್ತಿರುವ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ರಾಜನಪಾಳ್ಯಗೇಟ್‌ನ ಖಾದರ್ (ಮೊ. 9686918077) ಅವರನ್ನು ಸಂಪರ್ಕಿಸಬಹುದು.

- ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com