

ಇದು ಒಂದು ನಮೂನೆಯ ಗೆಣಸು. ತಿನಲು ಬಲು ರುಚಿ. ಮಾಮೂಲಿ ಗೆಣಸಿಗಿಂತ ಗಾತ್ರದಲ್ಲಿ ದೊಡ್ಡದು. ಕರ್ನಾಟಕದಲ್ಲಿ ವಿರಳ ಬೆಳೆ ಇದು.
ಬೆಳೆಯುವ ವಿಧಾನ
ಮೊದಲು ನಿರ್ದಿಷ್ಟ ಜಾಗದಲ್ಲಿ 10 ಅಡಿ ಎತ್ತರದಲ್ಲಿ ಏರಿ ಮಾಡಬೇಕು. ಬಳಿಕ ಕಾಂಪೋಸ್ಟ್ ಗೊಬ್ಬರ ಹಾಕಬೇಕು. ಜಮೀನು ಹದವಾದ ಮೇಲೆ ಸಾಲಿನಿಂದ ಸಾಲಿಗೆ 3 ಅಡಿ ಅಂತರದಲ್ಲಿ ಬಳ್ಳಿ ನಾಟಿ ಮಾಡಬೇಕು. ಬಳ್ಳಿಯಿಂದ ಬಳ್ಳಿಗೆ ಅರ್ಧ ಅಡಿ ಅಂತರ ಇದ್ದರೆ ಸಾಕು. ನಂತರ ಬಳ್ಳಿಯ ಬುಡದಲ್ಲಿ ತೆಳುವಾಗಿ ಮಣ್ಣು ಹರಡಿ ನೀರು ಹಾಯಿಸಬೇಕು. 2 ದಿನಕ್ಕೊಮ್ಮೆ ನಿಯಮಿತವಾಗಿ ನೀರುಣಿಸುತ್ತಿರಬೇಕು. 10- 15 ದಿನ ಬಿಟ್ಟ ನಂತರ ಬಳ್ಳಿ ಚಿಗುರೊಡೆಯಲು ಪ್ರಾರಂಭಿಸುತ್ತದೆ. ಆಗ ಬೂದಿ, ಕೋಳಿಗೊಬ್ಬರ ಬೆರೆಸಿ ಬಳ್ಳಿಯ ಬುಡದಲ್ಲಿ ಹಾಕಬೇಕು. ಹೀಗೆ ಎರಡು ದಿನಕ್ಕೊಮ್ಮೆ ನೀರು ಹಾಯಿಸುತ್ತಾ ನಿರ್ವಹಣಾ ಕ್ರಮ ಕೈಗೊಂಡರೆ 3 ತಿಂಗಳಲ್ಲಿ ಫಸಲು ಕೈಗೆ ಬರುತ್ತದೆ. ಚೆನಾಗಿ ನಿರ್ವಹಣೆ ಮಾಡಿದರೆ ಎಕರೆಗೆ 400 ಕೆಜಿ ಇಳುವರಿ ಬರುತ್ತದೆ. ಇದಕ್ಕೆ ಹೆಚ್ಚಾಗಿ ರೋಗಬಾಧೆ ಕಾಡದು. ಅದೇ ರೀತಿ ಜಾಸ್ತಿ ನಿರ್ವಹಣೆಯನು ಬಯಸದು.
ಅಂತರ ಬೆಳೆ
ಇದು ಅಲ್ಪಾವಧಿ ಬೆಳೆಯಾಗಿರುವುದರಿಂದ ದೀರ್ಘಾವಧಿ ಬೆಳೆಗಳ ಮಧ್ಯ ಅಂತರ ಬೆಳೆಯಾಗಿ ಸಿಹಿಗೆಣಸನು ಬೆಳೆಯಬಹುದು. ಆದರೆ, ಏಕಬೆಳೆಯಾಗಿ ಬೆಳೆದಾಗ ಬರುವಷ್ಟು ಇಳುವರಿ ಬರಲ್ಲ.
ಮಣ್ಣು
ಕೆಂಪು ಗೋಡು ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣಲ್ಲಿ ಚೆನಾಗಿ ಬೆಳೆಯುತ್ತದೆ. ಇತರ ಮಣ್ಣಲ್ಲಿ ಇಳುವರಿ ತುಸು ಮಟ್ಟಿಗೆ ಕಡಿಮೆ ಬರಬಹುದು. ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲೆಯ ಕಾಪು ಹೋಬಳಿಯ ಶಿರ್ವದ ರಾಘವೇಂದ್ರ (ಮೊ. 8861866920) ಅವರನು ಸಂಪರ್ಕಿಸಬಹುದು.
- ಮಹೇಶ್ ಅರಳಿ