

ಇತರೆ ಕ್ಷೇತ್ರದವರಿಗೆ ಕೃಷಿಯಲ್ಲಿ ಆಸಕ್ತಿಯಿದ್ದರೆ ಅದನು ಪ್ರವೃತ್ತಿಯನಾಗಿ ಮಾಡಿಕೊಳ್ಳಬಹುದು. ಆ ಮೂಲಕ ಸಾಧನೆ ಮಾಡಬಹುದು. ಇದಕ್ಕೆ ತಾಜಾ ನಿದರ್ಶನವೇ ವೈದ್ಯ ಕಮ್ ಕೃಷಿಕ.
ವೃತ್ತಿಯಲ್ಲಿ ವೈದ್ಯರಾದರೂ ನೆಚ್ಚಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಕರೆಗೆ ಸುಮಾರು 20 ಕ್ವಿಂಟಲ್ ಸೋಯಾಬೀನ್ ಫಸಲು ಪಡೆದು ಅಚ್ಚರಿಯ ಸಾಧನೆ ಮಾಡಿದ್ದಾರೆ ಭಾಲ್ಕಿ ತಾಲೂಕಿನ ಅಂಬೇಸಾಂಗವಿಯ ಎಲೆಕ್ಟ್ರೋ ಹೋಮೋಪತಿ ವೈದ್ಯ ಡಾ. ಧನರಾಜ ಹುಲಸೂರೆ. ಅವರು ಬೆಳೆದಿರುವ ಸೋಯಾ ಗಿಡವೊಂದಕ್ಕೆ ಸುಮಾರು 315ರಿಂದ 350 ಕಾಯಿ ಸಿಗುತ್ತವೆಯೆಂದರೆ ಸಣ್ಣ ಸಂಗತಿಯೇನಲ್ಲ. ಈ ಬೆಳೆಯಿಂದಾಗಿ ಸಾಮಾನ್ಯವಾಗಿ ಕೃಷಿ ಚಟುವಟಿಕೆಯಲ್ಲಿ ಸಾಧನೆ ಮಾಡೋದು ವೃತ್ತಿಪರ ರೈತರು ಮಾತ್ರ ಎಂಬ ಮಾತನು ಡಾ. ಧನರಾಜ ಸುಳ್ಳಾಗಿಸಿದ್ದಾರೆ.
ಭಾರಿ ಫೇಮಸ್ಸು
ಪಕ್ಕದ ಮಹಾರಾಷ್ಟ್ರದ ಅಹ್ಮದಾಪುರದಿಂದ ಎನ್ಆರ್ಸಿ 37 ಸೋಯಾಬೀನ್ ಬೀಜ ತಂದು ತಮ್ಮ ಹೊಲದಲ್ಲಿ ಪ್ರಯೋಗಿಸಿದ್ದಾರೆ. ಇದನು ನೋಡಲು ಗ್ರಾಮಸ್ಥರಲ್ಲದೆ ಸುತ್ತಮುತ್ತಲಿನ ಹಳ್ಳಿಗರು ಸೋಯಾ ಬೆಳೆ ವೀಕ್ಷಿಸಲು ಆಗಮಿಸುತ್ತಿರುವುದು ವಿಶೇಷ. ಸೋಯಾ ತೊಗರಿ ಬೆಳೆಯಂತೆ ಎತ್ತರಕ್ಕೆ ಬೆಳೆದಿದೆ. ಪ್ರತಿಯೊಂದು ಟೊಂಗೆಗೆ 50 ಕಾಯಿ ಉಂಟು. ಹೀಗೆ ಸುಮಾರು 6ರಿಂದ 8 ಟೊಂಗೆ ಹೊಂದಿದ್ದ ಸೋಯಾಬೀನ್ ಬೆಳೆಗೆ ಕನಿಷ್ಠ ಅಂದರೂ 315- 350 ಕಾಯಿ ಬಿಟ್ಟಿವೆ ಎನುತ್ತಾರೆ ಡಾ. ಧನರಾಜ್. ದಿನಕ್ಕೆ ಮೂರು ಬಾರಿ ಹೊಲಕ್ಕೆ ಭೇಟಿ ನೀಡುವ ಡಾ. ಧನರಾಜ್, ಪತಿಸಮೇತರಾಗಿ ಹೊಲ ಗದ್ದೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗುತ್ತಾರೆ.
ಮೊದಲ ಬಾರಿ...
5 ವರ್ಷದಿಂದ ಕೃಷಿಯಲ್ಲಿ ತೊಡಗಿರುವ ಅವರು, ಈ ಮೊದಲು ತೊಗರಿ, ಹೆಸರು, ಬಿಳಿಜೋಳ ಬಿತ್ತನೆ ಮಾಡಿದ್ದರು. ಆದರೂ ಅವರನು ಕೈ ಹಿಡಿದಿದ್ದು ಸೋಯಾಬೀನ್. 5 ಎಕರೆ ಜಮೀನಿನಲ್ಲಿ ಸೋಯಾ ಬಿತ್ತನೆ ಮಾಡಿದ್ದಾರೆ. ನಿಗದಿತವಾಗಿ ಬಿದ್ದ ಮಳೆಯಿಂದಾಗಿ ಉತ್ತಮ ಫಸಲು ಬರಲು ಕಾರಣವಾಗಿದೆ. ಗಿಡದಿಂದ ಗಿಡಕ್ಕೆ ಅರ್ಧ ಅಡಿ ಸ್ಥಳ ಬಿಟ್ಟಿದ್ದಾರೆ. ಅಲ್ಲದೆ, ಸೂಕ್ತ ರಸಗೊಬ್ಬರ, ಕೀಟನಾಶಕ ಸಿಂಪಡಣೆಯನು ಜಾಗರೂಕತೆಯಿಂದ ಮಾಡಿದ್ದಾರೆ. ಏನೇ ಆದರೂ ಡಾ. ಧನರಾಜ ಹುಲಸೂರೆ ಅವರ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಇತರೆ ರೈತರಿಗೆ ಮಾದರಿ ಎನಲಡ್ಡಿಯಿಲ್ಲ. ಡಾ. ಧನರಾಜ್ ಅವರ ಜತೆ ಮಾತನಾಡಲು ಮೊ. 9742074707 ಸಂಪರ್ಕಿಸಿ.
- ಚಂದ್ರಶೇಖರ ಎಮ್ಮೆ