ಮನೆಯಂಗಳದಲ್ಲಿ ಸ್ಟ್ರಾಬೆರಿ

ಮನೆಯಂಗಳದಲ್ಲಿ ಸ್ಟ್ರಾಬೆರಿ
Updated on: 

ಇರುವ ಒಂದೇ ಅಂಗುಲ ಜಾಗದಲ್ಲಿ ಮನೆಗೆ ಸಾಕಾಗುವಷ್ಟು ಸ್ಟ್ರಾಬೆರಿ ಹಣ್ಣನ್ನು ಬೆಳೆಯಲು ವಿಧಾನ ಇಲ್ಲಿದೆ. ನಾಲ್ಕು ಅಡಿ ಉದ್ದದ ಆರು ಇಂಚಿನ ಪ್ಲಾಸ್ಟಿಕ್ ಪೈಪ್ ಅನ್ನು ತೆಗೆದುಕೊಂಡು, ಅದರ ಸುತ್ತಲೂ ಬುಡದಿಂದ ತಲೆಯವರೆಗೂ ಒಂದು ಅಂಗುಲದ ಅಂತರದಲ್ಲಿ ಒಂದು ಇಂಚಿನ ತೂತು ಮಾಡಿ ಪೈಪ್ ಅನ್ನು ಲಂಬವಾಗಿ ನಿಲ್ಲಿಸಿ. ಗಿಡಕ್ಕೆ ನೀರು ಹಾಕಲು ಇದರ ನಡುವೆ ತೂತು ಮಾಡಿದ ಎರಡು ಇಂಚಿನ ಪೈಪ್ ಅನ್ನು ನಿಲ್ಲಿಸಬೇಕು. ಪೈಪುಗಳ ನಡುವೆ ಇರುವ ಜಾಗದಲ್ಲಿ ಮರಳು, ಗೊಬ್ಬರ ಮಿಶ್ರಿತ ಮಣ್ಣನ್ನು ಹಾಕಿ ಅದಕ್ಕೆ ನೀರು ಹಾಕಿ ದೊಡ್ಡ ಪೈಪಿನ ತೂತುಗಳಲ್ಲಿ ಸ್ಟ್ರಾಬೆರಿಯ ಒಂದೊಂದು ಗಿಡ ನೆಡಬೇಕು. ಚಿಕ್ಕ ಪೈಪಿನ ಮೂಲಕ ದಿನಾಲೂ ಗಿಡಗಳಿಗೆ ನೀರನ್ನು ಹಾಕಬೇಕು. 3- 4 ತಿಂಗಳಲ್ಲಿ ಸ್ಟ್ರಾಬೆರಿ ಹಣ್ಣು ಪಡೆಯಬಹುದು.
- ಚೇತನ ಹಿಂಡೂಮನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com