ಬಂಗಾರದ ಮನುಷ್ಯ

ನೀವು ಮೊಳಕಾಲ್ಮುರು ತಾಲೂಕಿನ ಬಿ.ಜಿ. ಕೆರೆಗೆ ಬಂದು ಬಿ.ವಿ ತಿಪ್ಪೇಸ್ವಾಮಿ ಅವರ ತೋಟ...
ಬಿ.ವಿ ತಿಪ್ಪೇಸ್ವಾಮಿ
ಬಿ.ವಿ ತಿಪ್ಪೇಸ್ವಾಮಿ

ನೀವು ಮೊಳಕಾಲ್ಮುರು ತಾಲೂಕಿನ ಬಿ.ಜಿ. ಕೆರೆಗೆ ಬಂದು ಬಿ.ವಿ ತಿಪ್ಪೇಸ್ವಾಮಿ ಅವರ ತೋಟ ಎಲ್ಲಿದೆ ಎಂದು ಕೇಳಿದರೆ ಪ್ರಾಯಶಃ ಯಾರೂ ಹೇಳಲಿಕ್ಕಿಲ್ಲ. ಆದರೆ, ಬಂಗಾರದ ಮನುಷ್ಯ ಅವರ ತೋಟ ಎಲ್ಲುಂಟು ಎಂದು ಕೇಳಿದರೆ ಥಟ್ಟನೆ ಬಳ್ಳಾರಿ ರಸ್ತೆಯೆಡೆ ಬೆರಳು ತೋರುತ್ತಾರೆ.

ಅಷ್ಟರ ಮಟ್ಟಿಗೆ ತಿಪ್ಪೇಸ್ವಾಮಿ ಎಂಬ ಸಾಧಕ ರೈತನಿಗೆ ಅನ್ವರ್ಥನಾಮ ಆವರಿಸಿ ಬಿಟ್ಟಿದೆ. ಹಾಗಾಂತ ಈ ಹೆಸರನ್ನು ಅವರೇ ಇಟ್ಟುಕೊಂಡಿದ್ದಲ್ಲ. ಇವರ ಸಾಧನೆ ನೋಡಿದ ಜನರೇ ಪ್ರೀತಿಯಿಂದ ಬಂಗಾರದ ಮನುಷ್ಯ ಎಂಬ ಅಭಿದಾನ ನೀಡಿದ್ದಾರೆ.

ನಿಜ. ಒಬ್ಬ ರೈತ ಮನಸ್ಸು ಮಾಡಿದರೆ ಬದುಕನ್ನು ಯಾವ ರೀತಿ ಹಸನು ಮಾಡಿಕೊಳ್ಳಬಹುದು ಎಂಬುದಕ್ಕೆ ಇವರು ಉದಾಹರಣೆ. ತಿಪ್ಪೇಸ್ವಾಮಿ ಎಂಬ ವ್ಯಕ್ತಿ ಬಂಗಾರದ ಮನುಷ್ಯ ಆಗಿದ್ದರೆ ಹಿಂದೆ ಶ್ರಮದ ಕಥನವಿದೆ, ಅವರ ತೋಟ ಹೊಕ್ಕಾಗ ಪ್ರತಿ ಬೆವರ ಹನಿಯಿಂದ ಕೃಷಿ ಬದುಕಿಗೆ ಅಡಿಪಾಯ ಹಾಕಿದ್ದಾರೆ ಎಂಬುದು ಮನದಟ್ಟಾಗದೆ ಇರದು. ಇಲ್ಲದಿದ್ದರೆ ಒಬ್ಬ ಸಾಮಾನ್ಯ ಮನಷ್ಯ ಅಸಾಮಾನ್ಯ ವ್ಯಕ್ತಿ ಆಗಲು ಸಾಧ್ಯವಾಗುತ್ತಿರಲಿಲ್ಲ.

ಸಾಧನೆಯ ಹಾದಿ
ಅದು 1966ರ ಸಮಯ. ಆಗ ತಿಪ್ಪೇಸ್ವಾಮಿ ಅವರು ಬಿಎಸ್ಸಿ ಮುಗಿಸಿ ಐಎಎಸ್ ಲಿಖಿತ ಪರೀಕ್ಷೆಯನ್ನೂ ಪಾಸಾಗಿದ್ದರು. ಆಗ ಅವರ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ಐಎಎಸ್ ಅಧಿಕಾರಿ ಆಗೋದು, ಮತ್ತೊಂದು ಕೃಷಿಯಲ್ಲೇ ಬದುಕು ಕಂಡುಕೊಳ್ಳುವುದು. ತಿಪ್ಪೇಸ್ವಾಮಿಗೆ ಬಾಲ್ಯದಿಂದಲೂ ಮಣ್ಣಿನ ನಂಟು. ಭಾನುವಾರ ಬಂತೆಂದರೆ ಜಮೀನಿನ ಕಡೆ ಓಡುತ್ತಿದ್ದರು. ಅಲ್ಲಿ ರೈತರು ಯಾವ ರೀತಿ ಕೆಲಸ ಮಾಡುತ್ತಿದ್ದರು ಎಂಬುದನ್ನು ನೋಡುತ್ತಿದ್ದರು. ಹಾಗಾಗಿ ಐಎಎಸ್ ಆಸೆ ಬಿಟ್ಟು ಕೃಷಿಯಲ್ಲೇ ಸಾಧನೆ ಮಾಡಬೇಕೆಂದು ನಿರ್ಧರಿಸಿದರು.

ಜಮೀನು ಖರೀದಿ
ಬಿ.ಜಿ ಕೆರೆಯ ಸನಿಹದಲ್ಲಿ ಎಕರೆಗೆ ಕೇವಲ ರು. 15 ರಂತೆ 6 ಎಕರೆ ದರಕಾಸ್ತು ಜಮೀನು ಖರೀದಿಸಿದರು. ಅದು ಗುಡ್ಡ, ಇಳಿಜಾರಿನಿಂದ ಕೂಡಿದ ಪ್ರದೇಶವಾಗಿತ್ತು. ಆಗ ಊರ ಜನರೆಲ್ಲ ತಿಪ್ಪೇಸ್ವಾಮಿಗೆ ಏನೋ ಹುಚ್ಚು ಹಿಡಿದಿದೆ ಎಂದು ಜರಿದಿದ್ದರು. ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಮೊದಲು ಗುಡ್ಡ, ತಗ್ಗು ದಿನ್ನೆಗಳಿಂದ ಕೂಡಿದ್ದ ಜಮೀನನ್ನು ಸಮತಟ್ಟು ಮಾಡಲು ಅಣಿಯಾದರು. ಬಳಿಕ ಅದಕ್ಕೆ ಕೆರೆಮಣ್ಣನ್ನು ಹಾಕಿಸಿದರು. ಮೆಲ್ಲನೆ ಮಳೆಯಾಶ್ರಿತ ಬೇಸಾಯ ಶುರುಹಚ್ಚಿಕೊಂಡರು. ಶೇಂಗಾ, ಹುರುಳಿ ತರಕಾರಿ ಮೊದಲಾದ ಬೆಳೆಗಳನ್ನು ಬೆಳೆಯತೊಡಗಿದರು. 


-ಮಹೇಶ್ ಅರಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com