ಧನರಾಜ ತೇಗ

ಧನರಾಜ ತೇಗ
Updated on: 

ತೇಗ ಮರಗಳ ರಾಜ ಎಂದೇ ಜನಜನಿತ. ಕೃಷಿಯಲ್ಲಿ ಅರಣ್ಯ ಬೆಳೆಯಬೇಕೆನ್ನುವವರು ತೇಗ ಹಾಕಬಹುದು. ಇದಕ್ಕೆ ಮಾರುಕಟ್ಟೆಯಲ್ಲಿ ಬಲು ಬೇಡಿಕೆ ಇರುವುದರಿಂದ ಬೆಳೆಯುವವರ ಪ್ರಮಾಣ ಹೆಚ್ಚುತ್ತಿದೆ. ದೀರ್ಘಕಾಲದ ಬೆಳೆಯಾಗಿರುವ ಇದನ್ನು ಖಾಲಿ ನಿವೇಶನ, ಹಿತ್ತಿಲಲ್ಲೂ ಬೆಳೆದು ಲಾಭ ಪಡೆಯಬಹುದು.
ಬೆಳೆಯುವ ವಿಧಾನ
ತೇಗದ ಒಂದು ಅಥವಾ ಎರಡು ವರ್ಷದ ಗಿಡವನ್ನು ಭೂಮಿಯಲ್ಲಿ ನಾಟಿ ಮಾಡಬೇಕು. ನಾಟಿಗೆ ಜೂನ್ ತಿಂಗಳು ಅಂದರೆ ಮಳೆಗಾಲದ ಪ್ರಾರಂಭವೇ ಸಕಾಲ. ಮೊದಲು 10್ಢ10 ಅಡಿ ಅಂತರದಲ್ಲಿ 2 ಅಡಿ ಆಳದ ಗುಂಡಿ ತೋಡಬೇಕು. ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ಕಾಂಪೋಸ್ಟ್ ಗೊಬ್ಬರ, ಕೆಂಪು ಮಣ್ಣು ಮತ್ತು ಮರಳನ್ನು ಹಾಕಬೇಕು. ಬಳಿಕ ಗಿಡ ನೆಟ್ಟು ನೀರು ಹಾಯಿಸಬೇಕು. ತೇಗಕ್ಕೆ ಸಾಕಾಗುವಷ್ಟು ಮಳೆ ಆಗದಿದ್ದರೆ ವಾರಕ್ಕೊಮ್ಮೆ ನೀರು ಹಾಯಿಸುತ್ತಿರಬೇಕು. ಈ ರೀತಿ 2 ವರ್ಷ ಮಾಡಬೇಕು. ಬಳಿಕ ನೀರು ಹಾಯಿಸದಿದ್ದರೂ ಆಗುತ್ತೆ. 6 ತಿಂಗಳಿಗೊಮ್ಮೆ ಗಿಡದ ಕವಲುಗಳನ್ನು ಕತ್ತರಿಸಬೇಕು. ಇದರಿಂದ ಗಿಡ ನೇರವಾಗಿ ಬೆಳೆಯಲು ಸಹಕಾರಿಯಾಗುತ್ತೆ. ಇದಕ್ಕೆ ಜಾಡು ರೋಗ ಮತ್ತು ಎಲೆ ತಿನ್ನುವ ಕೀಟ ಹಾವಳಿ ಬರಬಹುದು. ಸೂಕ್ತ ಔಷಧೋಪಚಾರ ಕೈಗೊಳ್ಳಬೇಕು. ಗಿಡ ನಾಟಿ ಮಾಡಿದ 15- 20 ವರ್ಷದ ಅವಧಿಯಲ್ಲಿ ಮರ ಕಟಾವು ಮಾಡುವುದು ಸೂಕ್ತ. ಮರ ಕಡಿಯಲು ಅರಣ್ಯ ಇಲಾಖೆಯವರ ಅನುಮತಿ ಅಗತ್ಯ.
ತಳಿಗಳು
ತೇಗದಲ್ಲಿ ಪ್ರಮುಖವಾಗಿ ಎರಡು ತಳಿಗಳು ಹೆಚ್ಚು ಪ್ರಚಲಿತದಲ್ಲಿವೆ. ಅವುಗಳೆಂದರೆ ಬರ್ಮಾ ಮತ್ತು ಭಾರತೀಯ ತೇಗ.
ಮಣ್ಣು
100ರಿಂದ 150 ಅಡಿ ಆಳದವರೆಗೆ ಕಲ್ಲು ಇರದ ಮಣ್ಣು ಉತ್ತಮ. ಮರಳು ಮಿಶ್ರಿತ ಕೆಂಪು ಮತ್ತು ಕಪ್ಪು ಮಣ್ಣಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಹರಪನಹಳ್ಳಿ ತಾಲೂಕಿನ ಇ. ಬೇವಿನಹಳ್ಳಿಯ ಬಿ.ಎಂ. ಶಿವಯೋಗಿ (9008279337) ಅವರನ್ನು ಸಂಪರ್ಕಿಸಬಹುದು.

ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com