ಮಾವು

ಮಾವು
Updated on: 

ಮಾವು 'ಹಣ್ಣುಗಳ ರಾಜ'. ದೇಶದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮಾವನ್ನು ಬೆಳೆಯಲಾಗುತ್ತಿದೆ. ವಿಶ್ವದ ಮಾವು ಉತ್ಪಾದನೆಯಲ್ಲಿ ದೇಶದ ಪಾಲು ಕಾಲುಭಾಗದಷ್ಟಿದೆ. ಮಾವಿನಲ್ಲಿ ಸಾವಿರಾರು ನಮೂನೆಯ ತಳಿಗಳಿದ್ದರೂ ಬಳಕೆಯಲ್ಲಿದ್ದರೂ ಕೆಲವು ಮಾತ್ರ. ಮಾವಿನ ಹಣ್ಣಿನಲ್ಲಿ ಹಲವು ನಮೂನೆಯ ಔಷಧಿಯ ಗುಣ ಮತ್ತು ವಿಟಮಿನ್ 'ಎ' ಅಧಿಕ ಪ್ರಮಾಣದಲ್ಲಿದೆ. ಇದರ ವೈಜ್ಞಾನಿಕ ಮ್ಯಾಂಗಿಫೆರಾ (Mangifera).
ಬೆಳೆಯುವ ವಿಧಾನ
ಹಣ್ಣಿನ ಬೆಳೆ ಬೆಳೆಯಬೇಕೆನ್ನುವವರು ಮಾವಿಗೆ ಆದ್ಯತೆ ನೀಡುತ್ತಾರೆ. ಏಕೆಂದರೆ ಇದರ ನಿರ್ವಹಣೆ ತೀರಾ ಸರಳ, ಸುಲಭ. ಮೊದಲು ಜಮೀನನ್ನು ಚೆನ್ನಾಗಿ ಹಸನು ಮಾಡಿ ಸಮತಟ್ಟು ಮಾಡಬೇಕು. ಬಳಿಕ 40 ್ಢ 40 ಅಡಿ ಅಂತರ ಮತ್ತು 1 ಮೀಟರ್ ಆಳದ ಗುಂಡಿ ತೋಡಬೇಕು. ಅಗತ್ಯಕ್ಕೆ ತಕ್ಕಷ್ಟು ಕೊಟ್ಟಿಗೆ ಗೊಬ್ಬರ ಮತ್ತು ಕೆಂಪು ಮಣ್ಣು ಹಾಕಿ ಗಿಡ ನೆಡಬೇಕು. ಬಳಿಕ ವಾತಾವರಣ, ಮಳೆ, ಮಣ್ಣು ಆಧರಿಸಿ ಆಗಾಗ ನೀರು, ಗೊಬ್ಬರ ಹಾಕಬೇಕು. ಮಾವಿನ ಮಧ್ಯ ಅಂತರ ಬೆಳೆಗಳನ್ನು ಬೆಳೆಯಬಹುದು. ಮಾವು ಗಿಡ ನಾಟಿ ಮಾಡಿದ ಮೂರ್ನಾಲ್ಕು ವರ್ಷದ ಬಳಿಕ ಹಣ್ಣು ಬಿಡಲು ಶುರು. ಆಯಾ ತಳಿ ಆಧರಿಸಿ ಹಣ್ಣು ಬಿಡುವ ಅವಧಿ ತುಸು ಹೆಚ್ಚು- ಕಡಿಮೆ ಆಗಬಹುದು. ಜೂನ್- ಜುಲೈ ಮಾವು ನೆಡಲು ಸಕಾಲ.
ತಳಿಗಳು
ರಾಜ್ಯದಲ್ಲಿ ಮುಖ್ಯವಾಗಿ ಮಲ್ಲಿಕಾ, ತೋತಾಪುರಿ, ರಸಪುರಿ, ಮಲಗೋವಾ, ನೀಲಂ, ಲಾಂ ಗ್ರಾ ತಳಿಗಳ ಮಾವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ರೋಗ/ ಕೀಟಬಾಧೆ
ಕಾಂಡಕೊರಕ, ಸುಳಿರೋಗ, ಚಿಬ್ಬುರೋಗ, ಅಂಗಮಾರಿ, ಬೂದಿರೋಗ, ಎಲೆಚುಕ್ಕಿರೋಗ ಮತ್ತು ಬೂಸ್ಟ್ ತಿಗಣೆ, ಸಸ್ಯಹೇನು, ಓಟೆಯ ಮೂತಿ ಹುಳು, ಕಂಬಳಿ ಹುಳು ಮೊದಲಾದವು ಬರಬಹುದು. ಹೆಚ್ಚಿನ ಮಾಹಿತಿಗೆ 25 ರಾಸಾಯನಿಕ ಗೊಬ್ಬರ, ಔಷಧಿ ಬಳಸದೆ ಮಾವು ಬೇಸಾಯ ಮಾಡುತ್ತಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಕೈಲಾಸಮೂರ್ತಿ (ಮೊ.9880185757) ಅವರನ್ನು ಸಂಪರ್ಕಿಸಬಹುದು.

ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com