ನಿತ್ಯಪುಷ್ಪ

ನಿತ್ಯಪುಷ್ಪ
Updated on: 

ಈ  ನಿತ್ಯಪುಷ್ಪಕ್ಕೆ ನಾನಾ ಹೆಸರು. 'ಕಾಶಿ ಕಣಗಿಲೆ', 'ಸ್ಮಶಾನ ಮಲ್ಲಿಗೆ', 'ಸದಾಪುಷ್ಪ'. ಇದು ಬಹುಮುಖ್ಯವಾದ ಔಷಧೀಯ ಮತ್ತು ಅಲಂಕಾರಿಕ ಸಸ್ಯ. ಇಂಗ್ಲಿಷಿನಲ್ಲಿ ಇದಕ್ಕೆ 'ಪೆರಿವಿಂಕಲ್‌' ಎಂಬ ಹೆಸರಿದೆ. ಇದು ಬಹುವಾರ್ಷಿಕ ಸಸ್ಯವೂ ಹೌದು. ಅಪೊಸಯನೇಸಿ ಕುಟುಂಬಕ್ಕೆ ಸೇರಿದೆ.
ತಿಳಿಹಸಿರು ಕಾಂಡ, ಪುಟ್ಟ ಹಸಿರಾದ ಹೊಳೆಯುವ ಎಲೆಗಳು, ಕಾಂಡದ ತುದಿ ಭಾಗದಲ್ಲಿ ತಿಳಿಗೆಂಪು ಇಲ್ಲವೇ ಬಿಳಿಯ ಬಣ್ಣದ ಹೂವುಗಳು, ಯಾವ ಕೈತೋಟದಲ್ಲಿ ಬೇಕಾದರೂ ಬೆಳೆಯಬಲ್ಲ ಸದಾಕಾಲ ಹೂವಿನಿಂದ ತುಂಬಿರುವ ಈ ಪುಟ್ಟ ಸಸ್ಯವೇ ನಿತ್ಯಪುಷ್ಪ. ಈ ಸಸ್ಯವು ಕಿರಿದಾದ ಮಧ್ಯಮ ಗಾತ್ರದ ಪೊದೆಯಾಗಿ ಬೆಳೆಯುವಂಥದ್ದು. ಕಾಂಡ ಮತ್ತು ಎಲೆಗಳು ಸೇರುವ ಜಾಗದಲ್ಲಿ ಬೀಜದ ಕಾಯಿಗಳಿರುತ್ತವೆ. ವರ್ಷಪೂರ್ತಿ ಹೂವು ಬಿಡುವ ಈ ಸಸ್ಯ ಯಾವುದೇ ಮಣ್ಣು ಮತ್ತು ಹವಾಗುಣದಲ್ಲಿ ಸುಲಭವಾಗಿ ಬೆಳೆಯುತ್ತದೆ. ಬೀಜವನ್ನು ಗಿಡದಿಂದ ಬೇರ್ಪಡಿಸಿದ ತಕ್ಷಣವೇ ಬಿತ್ತಿದರೆ, 10- 12 ತಿಂಗಳಲ್ಲಿ ಔಷಧಕ್ಕಾಗಿ ಬಳಸಲು ಯೋಗ್ಯವಾಗುತ್ತವೆ. ಎಲೆಗಳಲ್ಲಿ ವಿನ್ ಕ್ರಿಸ್ಟಿನ್, ವಿನ್ ಬ್ಲಾಸ್ಟಿನ್ ಹಾಗೂ ಬೇರಿನಲ್ಲಿ ರೆಸರ್ಪಿನ್, ಸರ್ಪೆಂಟೈನ್, ಆಜಮ್ಯಾಲಿಸಿನ್ ಎಂಬ ಔಷಧೀಯ ಸಂಯುಕ್ತ ವಸ್ತುಗಳಿರುತ್ತವೆ. ಈ ಸಸ್ಯದ ಹೂವು, ಎಲೆ, ಕಾಂಡ ಮತ್ತು ಬೇರುಗಳು ಔಷಧಿ ತಯಾರಿಕೆಯಲ್ಲಿ ಬಹು ಉಪಯುಕ್ತ.
ಎಲೆಗಳ ರಸವನ್ನು ಗಾಯಕ್ಕೆ, ಕೀಟದ ಕಡಿತದಲ್ಲಿ, ಅಲರ್ಜಿ ಮತ್ತು ಸೋಂಕು ನಿವಾರಿಸಲು ಬಳಸುತ್ತಾರೆ. ಎಲೆ, ಹೂವುಗಳ ರಸದಲ್ಲಿರುವ ಕಿಣ್ವಗಳಿಂದಾಗಿ ಗಾಯ ಬೇಗ ಮಾಗುತ್ತವೆ.
ಸಕ್ಕರೆ ಕಾಯಿಲೆ ತೊಂದರೆಯಿದ್ದಲ್ಲಿ 4-5 ಎಲೆಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಬಹುದು. ದದ್ದು ಮುಂತಾದ ಚರ್ಮ ರೋಗ ನಿವಾರಣೆಗಾಗಿ ಬೇರನ್ನು ನೀರಿನಲ್ಲಿ ತೇದು ಹಚ್ಚಿದರೆ ವಾಸಿಯಾಗುವುದು.


-ಸುನೀತಾ ಸಿ/ ನಿರ್ಮಲ ಕೆ.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com