
ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಯಂತ್ರೋಪಕರಣಗಳ ಬಳಕೆ ಹೆಚ್ಚಿಸುವುದು ಅನಿವಾರ್ಯವಾಗಿರುವಂತೆ, ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ಇಕ್ಕಟ್ಟಿನಲ್ಲಿ ರೈತರು ಸಿಲುಕಿದ್ದಾರೆ. ಇಂಥ ರೈತರಿಗೆ ಅಗ್ಗದ ದರದಲ್ಲಿ ಕೃಷಿ ಉಪಕರಣಗಳನ್ನು ಬಾಡಿಗೆ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ.
ರಾಜ್ಯದಾದ್ಯಂತ ಸುಮಾರು 180 ಸ್ಥಳಗಳಲ್ಲಿ ಕೃಷಿ ಯಂತ್ರೋಪಕರಣ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಬಾಡಿಗೆ ಜೊತೆಗೆ, ಕೃಷಿ ಯಂತ್ರೋಪಕರಣಗಳ ದುರಸ್ತಿ ಸೇವೆ ಸಹ ನೀಡುವ ಉದ್ದೇಶವಿದೆ. ಬಾಡಿಗೆಗೆ ಇರುವ ಕೃಷಿ ಉಪಕರಣಗಳು ಟ್ರ್ಯಾಕ್ಟರ್, ಟ್ರ್ಯಾಕ್ಟರ್ ಟ್ರೇಲರ್, ಟ್ರ್ಯಾಕ್ಟರ್ ನೀರಿನ ಟ್ಯಾಂಕ್, ರಾಶಿ ಯಂತ್ರ ಟ್ರ್ಯಾಕ್ಟರ್ ಮಾಡೆಲ್, ಸಿಂಗಲ್ ಪಲ್ಟಿ ನೇಗಿಲು, ಡಬಲ್ ಪಲ್ಟಿ ನೇಗಿಲು, ಹೈಡ್ರಾಲಿಕ್ ನೇಗಿಲು, ರೋಟೋ-ವೇಟರ್, ಕಲ್ಟಿವೇಟರ್, ಕಬ್ಬಿನ ಸ್ಟಬಲ್, ಶೇವರ್, ಬಿತ್ತನೆ ಕೂರಿಗೆ, ಬತ್ತ ಕಟಾವು ಯಂತ್ರ, ಕಬ್ಬಿನ ಟ್ರ್ಯಾಶ್ ಕಟರ್, ಪವರ್ ಟ್ರೇಲರ್, ರಾಶಿ ಮಶಿನ್ ಆಯಿಲ್ ಎಂಜಿನ್, ಕಬ್ಬಿನ ಬಡ್ ಕಟಿಂಗ್ ಮೆಶಿನ್, ಬತ್ತ ದ ನಾಟಿ ಯಂತ್ರ, ಡೀಸೆಲ್ ಎಂಜಿನ್, ವೀಡ್ ಕಟ್ಟರ್, ಕಬ್ಬಿನ ಸಾಲು ಬಿಡುವ ಯಂತ್ರ, ಬತ್ತ ರಾಶಿ ಮಾಡುವ ಯಂತ್ರ, ಚಾಪ್ ಕಟ್ಟರ್ ಮಶೀನ್, ಬಿತ್ತನೆ ಕೂರಿಗೆ, ಶೇಂಗಾಕಾಯಿ ಬಿಡಿಸುವ ಯಂತ್ರ, ಲೆವೆಲ್ಲಿಂಗ್ ಬ್ಲೇಡ್, ಪೆಟ್ರೋಲ್ ಸ್ಪ್ರೇಯರ್, ಬ್ಯಾಟರಿ ಸ್ಪ್ರೇಯರ್, ರಾಶಿ ಯಂತ್ರ, ವುಡ್ ಕಟರ್, ಡೀಸೆಲ್ ಪಂಪ್ ಸೆಟ್, ರೆಂಟೆ, ಎಡೆಕುಂಟಿ ಇತ್ಯಾದಿ.
ಕಡಿಮೆ ದರದಲ್ಲಿ
ದೊಡ್ಡ ರೈತರಿಗೆ ಮಾರುಕಟ್ಟೆ ದರದಲ್ಲಿ ಗಂಟೆ ಅಥವಾ ದಿನದ ಲೆಕ್ಕದಲ್ಲಿ ಬಾಡಿಗೆ
ರೈತರು ಈ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಕೊಳ್ಳಬೇಕು.
5 ಎಕರೆಗಿಂತ ಕಡಿಮೆ ಹೊಲ ಹೊಂದಿರುವವರನ್ನು ಸಣ್ಣ ರೈತರು ಎಂದು ಪರಿಗಣಿಸಲಾಗುತ್ತದೆ.
ದೊಡ್ಡ ರೈತರಿಗೂ ಬಾಡಿಗೆಗೆ ಲಭ್ಯ
Advertisement