• Tag results for farmers

ದಿನದಿಂದ ದಿನಕ್ಕೆ ರೈತರ ಪ್ರತಿಭಟನೆ ತೀವ್ರ: ಹಿರಿಯರಿಗೆ ಯುವಕರ ಬೆಂಬಲ, ಮುಂದುವರಿದ 'ದೆಹಲಿ ಚಲೋ' 

ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯ ನಿಜವಾಗಿಯೂ ಎಷ್ಟರ ಮಟ್ಟಿಗೆ ವಾಸ್ತವ ರೂಪದಲ್ಲಿ ನಿಜವಾಗುತ್ತಿದೆ ಎಂಬ ಮಾತು ಗೊತ್ತಿಲ್ಲ. ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿಯ ಸಿಂಘು ಗಡಿಯಲ್ಲಿ ಬೀಡುಬಿಟ್ಟಿದ್ದಾರೆ. 

published on : 4th December 2020

ಕೇಂದ್ರ ಸರ್ಕಾರ, ರೈತರ ನಡುವಿನ ಮಾತುಕತೆಯಲ್ಲಿ ಬಗೆಹರಿಯದ ಸಮಸ್ಯೆ: ಡಿಸೆಂಬರ್ 5ಕ್ಕೆ ಮತ್ತೆ ಸಭೆ

ನೂತನ ಕೃಷಿ ಕಾನೂನುಗಳ ರದ್ದತಿಗೆ ರೈತ ಸಂಘಟನೆಗಳ ಮುಖಂಡರು ಪಟ್ಟು ಹಿಡಿದ್ದರಿಂದ ಸುಮಾರು 8 ಗಂಟೆಗಳ ಕಾಲ ರೈತ ಪ್ರತಿನಿಧಿಗಳು ಹಾಗೂ ಮೂವರು ಕೇಂದ್ರ ಸಚಿವರೊಂದಿಗೆ ಇಂದು ನಡೆದ ಸಭೆಯೂ ಕೂಡಾ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ.

published on : 3rd December 2020

ನಿಮ್ಮ ಅವಧಿಯಲ್ಲಿ 3,800 ರೈತರು ಆತ್ಮಹತ್ಯೆ, ಗಡದ್ದಾಗಿ ನಿದ್ದೆ ಮಾಡೋರಿಗೆ ಇದೆಲ್ಲಾ ತಿಳಿಯಲ್ಲ: ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು

ನಿಮ್ಮ ಅವಧಿಯಲ್ಲೇ 3,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಡದ್ದಾಗಿ ನಿದ್ದೆ ಮಾಡುತ್ತಿದ್ದ ನಿಮಗೀಗ ಇದ್ದಕ್ಕಿಂತೆಯೇ ರೈತರ ಮೇಲೆ ಪ್ರೇಮ ಉಕ್ಕಿದೆ ಅಲ್ಲವೇ? ಎಂದು ಸಿದ್ದರಾಮಯ್ಯಗೆ ಬಿಜೆಪಿ ತಿರಗೇಟು ನೀಡಿದೆ.

published on : 3rd December 2020

ರೈತರನ್ನು ಹೇಡಿ ಎಂದು ಕರೆದಿಲ್ಲ: ಕೃಷಿ ಸಚಿವ ಬಿಸಿ ಪಾಟೀಲ್ ಸ್ಪಷ್ಟನೆ

ತಮ್ಮ ಹೇಳಿಕೆ ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.

published on : 3rd December 2020

ನಿಜವಾದ ಹೇಡಿ ಯಾರು? ರೈತರೋ? ರಾತ್ರೋ ರಾತ್ರಿ ಮುಂಬೈಗೆ ಹಾರಿದವರೋ?: ಬಿಸಿ ಪಾಟೀಲ್ ಗೆ ಕಾಂಗ್ರೆಸ್ ತಿರುಗೇಟು

ನಿಜವಾದ ಹೇಡಿಗಳು ಯಾರು? ರೈತರೋ? ಅಥವಾ ರಾತ್ರೋ ರಾತ್ರಿ ಮುಂಬೈಗೆ ಹಾರಿದವರೋ? ಕೊರೊನಾ ಸಮಯದಲ್ಲಿ ರೈತರ ಬೆಳೆಗೆ ಮಾರುಕಟ್ಟೆ ಕಲ್ಪಿಸದ ಸರಕಾರವೋ? ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

published on : 3rd December 2020

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು: ಸಚಿವ ಬಿ.ಸಿ. ಪಾಟೀಲ್ ವಿವಾದಾತ್ಮಕ ಹೇಳಿಕೆ

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೖಷಿ ಸಚಿವ ಬಿ.ಸಿ.ಪಾಟೀಲ್ ಗುರುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

published on : 3rd December 2020

ದೆಹಲಿ: ರೈತರ ಪ್ರತಿಭಟನೆ ವೇಳೆ ಮತ್ತೋರ್ವ ರೈತನ ಸಾವು, ಹೃದಯಾಘಾತದಿಂದ 57 ವರ್ಷದ ಲಖ್ವೀರ್ ಸಿಂಗ್ ನಿಧನ

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಯನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ರೈತರ ಸಾವಿನ ಸರಣಿ ಕೂಡ ಮುಂದುವರೆದಿದೆ.

published on : 3rd December 2020

ರೈತರ ಹೆಸರಿನಲ್ಲಿ ಟುಕ್ಡೆ ಟುಕ್ಡೆ ಗ್ಯಾಂಗ್‌ನಿಂದ ಅರಾಜಕತೆ ಸೃಷ್ಠಿಗೆ ಯತ್ನ: ಮನೋಜ್ ತಿವಾರಿ ಆರೋಪ

ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಶಾಹೀನ್ ಬಾಗ್ ರೀತಿಯಲ್ಲಿ ಅರಾಜಕತೆ ಸೃಷ್ಠಿಸಲು 'ಟುಕ್ಡೆ ಟುಕ್ಡೆ ಗ್ಯಾಂಗ್' ಪ್ರಯತ್ನಿಸುತ್ತಿದೆ ಎಂದು ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ.

published on : 3rd December 2020

ರೈತರು ಮತ್ತು ಸರ್ಕಾರ ಮಧ್ಯೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ: ಗೃಹ ಸಚಿವ ಅಮಿತ್ ಶಾಗೆ ಪಂಜಾಬ್ ಸಿಎಂ ಮನವಿ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸರ್ಕಾರ ಮತ್ತು ರೈತರ ನಡುವೆ ಇರುವ ಬಿಕ್ಕಟ್ಟನ್ನು ಸಂಧಾನ ಸೂತ್ರ ಮೂಲಕ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

published on : 3rd December 2020

ಪ್ರತಿಭಟನೆ ವೇಳೆ ರೈತರ ಸಾವು: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಪಂಜಾಬ್ ಸಿಎಂ

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನು ವಿರುದ್ಧ ಕಳೆದ 8 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅಕಾಲಿಕ ನಿಧನರಾಗಿದ್ದ ರೈತರಿಗೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

published on : 3rd December 2020

'ದೆಹಲಿ ಚಲೋ' ಪ್ರತಿಭಟನೆಗೆ ಬೆಂಬಲ: ಶೀಘ್ರದಲ್ಲೇ 100 ವಾಹನಗಳಲ್ಲಿ ದೆಹಲಿಗೆ ತೆರಳಲಿರುವ ರಾಜ್ಯ ರೈತರು

ರೈತ ವಿರೋಧಿ ಮಸೂದೆ ಹಿಂಪಡೆಯಲು ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಗೆ ಬೆಂಬಲ ನೀಡಿರುವ ರಾಜ್ಯದ ರೈತರು, ಶೀಘ್ರದಲ್ಲೇ 100 ವಾಹನಗಳಲ್ಲಿ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ. 

published on : 3rd December 2020

ಇಂದು ರೈತರ ಜತೆ ಕೇಂದ್ರದ ಮಹತ್ವದ ಮಾತುಕತೆ ಹಿನ್ನೆಲೆ, ಶಾ ಭೇಟಿಯಾಗಲಿರುವ ಅಮರೀಂದರ್ ಸಿಂಗ್

ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವಣ ಮಾತುಕತೆಯ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. 

published on : 3rd December 2020

ರೈತರ ಪ್ರತಿಭಟನೆಯಲ್ಲಿ ಕೊಳಕು ರಾಜಕೀಯ ಮಾಡಬೇಡಿ: ಅರವಿಂದ್ ಕೇಜ್ರಿವಾಲ್

ರಾಷ್ಟ್ರ ರಾಜಧಾನಿಯ ಗಡಿಯ ಸುತ್ತ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ರೈತರ ಪ್ರತಿಭಟನೆಯಲ್ಲಿ ಕೊಳಕು ರಾಜಕೀಯ ಮಾಡಬೇಡಿ ಎಂದಿದ್ದಾರೆ.

published on : 2nd December 2020

'ಸೂಟು-ಬೂಟು ಸರ್ಕಾರದ ಆಳ್ವಿಕೆಯಲ್ಲಿ ರೈತರ ಆದಾಯ ಅರ್ಧದಷ್ಟಾಗಿದೆ, ಸರ್ಕಾರದ ಸ್ನೇಹಿತರ ವರಮಾನ ದುಪ್ಪಟ್ಟಾಗಿದೆ'

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸೂಟು ಬೂಟು ಸರ್ಕಾರದ ಅಡಿಯಲ್ಲಿ ರೈತರ ಅದಾಯ ಅರ್ಧದಷ್ಟು ಇಳಿಕೆಯಾಗಿದೆ, ಆದರೆ ಸರ್ಕಾರದ ಸ್ನೇಹಿತರ ಆದಾಯ ಮಾತ್ರ ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

published on : 2nd December 2020

ರೈತರ 'ದೆಹಲಿ ಚಲೋ' ಪ್ರತಿಭಟನೆಗೆ ಬೆಂಬಲ; ಹೊಸಪೇಟೆ-ಬಳ್ಳಾರಿ‌ ಹೆದ್ದಾರಿಯಲ್ಲಿ‌ ರಸ್ತೆ ತಡೆದು ಪ್ರತಿಭಟನೆ

ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಹಾಗೂ ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು‌ ಸೇನೆಯ ಕಾರ್ಯಕರ್ತರು ಹೊಸಪೇಟೆ-ಬಳ್ಳಾರಿ‌ ಹೆದ್ದಾರಿಯಲ್ಲಿ‌ ರಸ್ತೆತಡೆದು ಬುಧವಾರ ಪ್ರತಿಭಟನೆ ನಡೆಸಿದರು.

published on : 2nd December 2020
1 2 3 4 5 6 >