ಅಮೆರಿಕಾದಲ್ಲಿ ೨೦೦ಕ್ಕೂ ಹೆಚ್ಚು ಕರಡಿಗಳ ಬೇಟೆ

ಅಮೆರಿಕಾದ ಫ್ಲೋರಿಡಾದಲ್ಲಿ ೨೧ ವರ್ಷಗಳಿಂದ ಇದ್ದ ಬೇಟೆ ನಿಷೇಧವನ್ನು ಕೆಲವು ದಿನಗಳ ಕಾಲ ತೆರವುಗೊಳಿಸಿದ್ದರಿಂದ ಅಧಿಕೃತ ಪರವಾನಗಿ ಪಡೆದವರು ಸುಮಾರು ೨೦೦ಕ್ಕೂ
ಕರಡಿ
ಕರಡಿ

ಮಯಾಮಿ: ಅಮೆರಿಕಾದ ಫ್ಲೋರಿಡಾದಲ್ಲಿ ೨೧ ವರ್ಷಗಳಿಂದ ಇದ್ದ ಬೇಟೆ ನಿಷೇಧವನ್ನು ಕೆಲವು ದಿನಗಳ ಕಾಲ ತೆರವುಗೊಳಿಸಿದ್ದರಿಂದ ಅಧಿಕೃತ ಪರವಾನಗಿ ಪಡೆದವರು ಸುಮಾರು ೨೦೦ಕ್ಕೂ ಹೆಚ್ಚು ಕಪ್ಪು ಕರಡಿಗಳನ್ನು ಬೇಟೆಯಾಡಿ ಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಳು ದಿನಗಳ ಬೇಟೆ ಕಾಲಕ್ಕೆ ರಾಜ್ಯ ಅವಕಾಶ ನೀಡಿದ್ದು ಮೊದಲ ದಿನವಾದ ಶನಿವಾರವೇ ೨೦೭ ಕರಡಿಗಳನ್ನು ಕೊಲ್ಲಲಾಗಿದೆ ಎಂದು ಫ್ಲೋರಿಡಾ ಮೀನು ಮತ್ತು ವನ್ಯಮೃಗ ಸಂರಕ್ಷಣಾ ಆಯೋಗ ತಿಳಿಸಿದೆ.

ಮೊದಲ ದಿನದ ಮಿತಿ ಕೇವಲ ಎರಡುವರೆ ಘಂಟೆಗಳಲ್ಲಿ ಮೀರಿದ್ದರಿಂದ ನಂತರ ಯಾರಿಗೂ ಬೇಟೆಯಾಡುವ ಅವಕಾಶ ನೀಡಿಲ್ಲ.

ಈ ನಡೆಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕರಡಿಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದ್ದು, ಜನರನ್ನು ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಈ ಬೇಟೆಗೆ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಫ್ಲೋರಿಡಾದಲ್ಲಿ ಸುಮಾರು ೩೧೦೦ ಕರಡಿಗಳಿವೆ ಎಂದು ಅಂದಾಜಿಸಲಾಗಿದೆ. ಬೇಟೆಯಾಡಲು ಸುಮಾರು ೧೯೦೦ ಜನ ಪರವಾನಗಿ ಪಡೆದಿರುವುದು ಪರಿಸರವಾದಿಗಳಿಗೆ ಆತಂಕ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com