ಸಾವಯವ ಕೃಷಿಯಲ್ಲಿ ಸಿಕ್ಕಿಂಗೆ ನಾಯಕತ್ವ

ದೇಶದ ಮೊದಲ `ಸಾವಯವ ರಾಜ್ಯ'ವಾಗಿ ಹೊರಹೊಮ್ಮಿದ ಸಿಕ್ಕಿಂನ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ಇದೀಗ ಸಿಕ್ಕಿಂ ಸಾವಯವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ದೇಶದ ಮೊದಲ `ಸಾವಯವ ರಾಜ್ಯ'ವಾಗಿ ಹೊರಹೊಮ್ಮಿದ ಸಿಕ್ಕಿಂನ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ಇದೀಗ ಸಿಕ್ಕಿಂ ಸಾವಯವ ಕೃಷಿಯಲ್ಲಿ ನಾಯಕನ ಪಾತ್ರ ನಿರ್ವಹಿಸಲಿದ್ದು, ದೇಶದ ಇತರೆ ರಾಜ್ಯಗಳು ಅದನ್ನು ಅನುಸರಿಸಲಿವೆ.
ರೈತರ, ಕೃಷಿ ತಜ್ಞರ, ಅಧಿಕಾರಿಗಳ ಹಾಗೂ ರಾಜಕಾರಣಿಗಳ ಶ್ರಮದಿಂದಾಗಿ ಸಿಕ್ಕಿಂ ಇಂದು ಸಾವಯವ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದೆ.
ಪವನ್ ಚಾಮ್ಲಿಂಗ್ ನೇತೃತ್ವದ ಸರ್ಕಾರ 2003ರಲ್ಲಿ ಸಿಕ್ಕಿಂ ಅನ್ನು ಸಂಪೂರ್ಣ ಸಾವಯವ ಕೃಷಿ ರಾಜ್ಯವಾಗಿ ಮಾಡುವ ಸಂಕಲ್ಪ ತೊಟ್ಟಿತ್ತು. ಹೀಗಾಗಿ, ರಾಸಾಯನಿಕಗಳನ್ನು ನಿಷೇಧಿಸಲಾಯಿತು. ಸಾವಯವ ಪರಿಕರಗಳ ಬಳಕೆ ಹೆಚ್ಚಿತು. ಪರಿಣಾಮ, ಸಿಕ್ಕಿಂ ಸಾವಯವ ಕೃಷಿ ರಾಜ್ಯವಾಗಿ ರೂಪಾಂತರಗೊಂಡಿದೆ. 
``ಈ ಮಾದರಿ ವ್ಯವಸಾಯವನ್ನು ಆದಾಯದ ಮೂಲವಾಗಿಸಿದೆ. ಜೈವಿಕ ವೈವಿಧ್ಯತೆ, ಮಣ್ಣಿನ ಫಲವತ್ತತೆ, ಮತ್ತು ಪರಿಸರ ರಕ್ಷಣೆ ಸಾಧ್ಯವಾಗಿದೆ. ಸಾವಯವ ಕೃಷಿಯಿಂದ ಉತ್ಪಾದನೆಯೂ ಹೆಚ್ಚಿದೆ.
ಜೈವಿಕ ಗೊಬ್ಬರ ಮತ್ತು ಕೀಟನಾಶಕಗಳ ಬಗ್ಗೆ ರೈತರಿಗೆ ಸರ್ಕಾರ ಜಾಗೃತಿ ನೀಡಿದೆ. ಜತೆಗೆ  ಮಜಿತರ್ ನಲ್ಲಿ ಜೈವಿಕ ಗೊಬ್ಬರ ಕಾರ್ಖಾನೆ ಆರಂಭಿಸಿ ಗೊಬ್ಬರ, ಕೀಟನಾಶಕ ಪೂರೈಸಲಾಗುತ್ತದೆ ಎಂದು ಕೃಷಿ ಇಲಾಖೆ ನಿರ್ದೇಶಕ ಕರೋಲಾ ಬುಟಿಯಾ ತಿಳಿಸಿದ್ದಾರೆ. ಪ್ರಸ್ತುತ, ಸುಸ್ಥಿರ ಕೃಷಿ ಮೂಲಕ ಸಿಕ್ಕಿಂ 1.24 ದಶಲಕ್ಷ ಟನ್ ಸಾವಯವ ಕೃಷಿ ಉತ್ಪನ್ನವನ್ನು ಉತ್ಪಾದಿಸುತ್ತಿದೆ.
ಪ್ರವಾಸೋದ್ಯಮ ಅಭಿವೃದ್ಧಿ: ಹೇಳಿ ಕೇಳಿ ಸಿಕ್ಕಿಂ ಹಿಮಾಲಯದ ತಪ್ಪಲನಾಡು. ಇಲ್ಲಿಗೆ ಪ್ರವಾಸಿಗರು ಹೆಚ್ಚು. ರೆಸಾರ್ಟ್, ಹೊಟೆಲ್ ಗಳಲ್ಲಿ `ಸಾವಯವ ಕೃಷಿ ಆಹಾರ ಲಭ್ಯ' ಎಂಬ ಬೋರ್ಡ್ಗಳು ನೇತು ಬಿದ್ದಿವೆ. ಹೀಗಾಗಿ ವ್ಯಾಪಾರವೂ ಜೋರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com