ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆ 60 ರು. ಏರಿಕೆ: ಕೇಂದ್ರ

ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಬುಧವಾರ ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು 60ರು.ಗೆ ಏರಿಕೆ ಮಾಡಿದ್ದು, ಪ್ರತೀ ಕ್ವಿಂಟಾಲ್ ಭತ್ತದ ಬೆಲೆಯನ್ನು ಇದೀಗ 1, 470ಕ್ಕೇರಿಕೆ ಮಾಡಲಾಗಿದೆ.
ಭತ್ತದ ಬೆಂಬಲ ಬೆಲೆ ಏರಿಕೆ
ಭತ್ತದ ಬೆಂಬಲ ಬೆಲೆ ಏರಿಕೆ

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಬುಧವಾರ ಭತ್ತದ ಮೇಲಿನ ಕನಿಷ್ಛ ಬೆಂಬಲ ಬೆಲೆಯನ್ನು 60ರುಗೆ ಏರಿಕೆ ಮಾಡಿದ್ದು, ಪ್ರತೀ ಕ್ವಿಂಟಾಲ್ ಭತ್ತದ ಬೆಲೆಯನ್ನು  ಇದೀಗ 1, 470ಕ್ಕೇರಿಕೆ ಮಾಡಲಾಗಿದೆ.

2016-17ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಪರಿಷ್ಕರಿಸಿದ್ದು, ಆರ್ಥಿಕ ವ್ಯವಹಾರಗಳ ಸಮಿತಿ ಸಭೆ ಬಳಿಕ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ  ಎಂದು ತಿಳಿದುಬಂದಿದೆ. ಭತ್ತದ (ಸಾಮಾನ್ಯ) ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 60ರು ಏರಿಕೆ ಮಾಡಲಾಗಿದ್ದು, ಭತ್ತದ ಬೆಲೆಯನ್ನು1,470 ರುಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಸರ್ಕಾರದ  ಮೂಲಗಳು ತಿಳಿಸಿವೆ. ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆಯ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಕೃಷಿ ವೆಚ್ಚ ಹಾಗೂ ದರ ನಿಗದಿ ಆಯೋಗದ (ಸಿಎಸಿಪಿ) ಸಲಹೆಯನ್ನು ಸ್ವೀಕರಿಸಿರುವ ಕೇಂದ್ರ ಸರ್ಕಾರ ವಿವಿಧ ಬೆಳೆ, ಕಾಳು, ಧಾನ್ಯಗಳ ಮೇಲಿನ ಬೆಂಬಲ ಬೆಲೆ ಹೆಚ್ಚಿಸುವ ನಿರ್ಧಾರ  ಕೈಗೊಂಡಿದೆ. 2014-15 ಸಾಲಿನಲ್ಲಿ ಎ ದರ್ಜೆಯ ಬತ್ತದ ಕನಿಷ್ಠ ಬೆಂಬಲ ಬೆಲೆಯನ್ನು ರು.1,410ರಿಂದ ರು. 1,450ಕ್ಕೆ ಏರಿಸಲಾಗಿತ್ತು. ಇದೀಗ ಈ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ಪ್ರತೀ  ಕ್ವಿಂಟಾಲ್ ಭತ್ತದ ದರದಲ್ಲಿ 60 ರು. ಏರಿಕೆ ಮಾಡಲಾಗಿದೆ. 2015-16 ರ ಹಂಗಾಮಿಗೆ ಸಾಧಾರಣ ಬತ್ತಕ್ಕೆ ಕ್ವಿಂಟಾಲಿಗೆ 1,410 ರುಪಾಯಿ, ಉತ್ತಮ ಗುಣಮಟ್ಟದ ಭತ್ತಕ್ಕೆ 1,510 ರುಪಾಯಿಗಳು  ದೊರೆಯಲಿದೆ.

ಇದೇ ವೇಳೆ ದ್ವಿದಳ ಧಾನ್ಯಗಳ ಬೆಂಬಲ ಬೆಲಯನ್ನೂ ಕೂಡ ಕೇಂದ್ರ ಸರ್ಕಾರ ಏರಿಕೆ ಮಾಡಿದ್ದು, ದ್ವಿದಳ ಧಾನ್ಯಗಳ ಬೆಂಬಲ ಬೆಲೆಯನ್ನು 400ರು ಏರಿಕೆ ಮಾಡಿದೆ. ಹತ್ತಿಯ ಮೇಲಿನ ಬೆಂಬಲ ಬೆಲೆಯನ್ನೂ ಸಿಸಿಇಎ 60 ರು.ಗಳಿಗೆ ಏರಿಕೆ ಮಾಡಿದ್ದು, ಮಧ್ಯಮ ದರ್ಜೆಯ ಹತ್ತಿ ಬೆಲೆ 3,860ಕ್ಕೆ ಏರಿಕೆ ಮಾಡಿದೆ. ಧೀರ್ಘ ಪ್ರಧಾನ ದರ್ಜೆಯ ಹತ್ತಿಗೆ 4,160  ರು. ದರ ನಿಗದಿಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com