ನೇಪಾಳ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಎತ್ತರ ಕುಸಿತ?

2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎತ್ತರ ಕುಸಿದಿರುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ವಿಜ್ಞಾನಿಗಳ ತಂಡವೊಂದು ಮೌಂಟ್ ಎವರೆಸ್ಟ್ ನ ನಿಖರ ಎತ್ತರವನ್ನು ಅಳತೆ ಮಾಡುವುದಾಗಿ ಹೇಳಿದೆ.
ಮೌಂಟ್ ಎವರೆಸ್ಟ್ (ಸಂಗ್ರಹ ಚಿತ್ರ)
ಮೌಂಟ್ ಎವರೆಸ್ಟ್ (ಸಂಗ್ರಹ ಚಿತ್ರ)
Updated on

ನವದೆಹಲಿ: 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎತ್ತರ ಕುಸಿದಿರುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ವಿಜ್ಞಾನಿಗಳ  ತಂಡವೊಂದು ಮೌಂಟ್ ಎವರೆಸ್ಟ್ ನ ನಿಖರ ಎತ್ತರವನ್ನು ಅಳತೆ ಮಾಡುವುದಾಗಿ ಹೇಳಿದೆ.

ಮೂಲಗಳ ಪ್ರಕಾರ 2015ರಲ್ಲಿ ಸಂಬಂಸಿದ ಬರೊಬ್ಬರಿ 7.8 ತೀವ್ರತೆಯ ಪ್ರಬಲ ಭೂಕಂಪನದಿಂದಾಗಿ ಮೌಂಟ್ ಎವರೆಸ್ಟ್ ನ ಎತ್ತರ ಕುಸಿತವಾಗಿರುವ ಕುರಿತು ಶಂಕೆ ಮೂಡುತ್ತಿದ್ದು, ಇದೇ ಕಾರಣಕ್ಕೆ ಭಾರತದ ವಿಜ್ಞಾನಿಗಳ  ತಂಡವೊಂದು ಈ ವಿಶ್ವದ ಅತೀ ಎತ್ತರದ ಶಿಖರದ ಎತ್ತರವನ್ನು ಅಳೆತೆ ಮಾಡುವುದಾಗಿ ಹೇಳಿಕೊಂಡಿದೆ. ನೇಪಾಳ ಭೂಕಂಪನದಿಂದಾಗಿ ಹಿಮಾಲಯ ತಪ್ಪಲಿನ ಶಿಖರಗಳ ಮೇಲೂ ಪರಿಣಾಮವಾಗಿರುವ ಸಾಧ್ಯತೆಗಳಿದ್ದು,  ಪ್ರಮುಖವಾಗಿ ಮೌಂಟ್ ಎವರೆಸ್ಟ್ ನ ಎತ್ತರೆ ಕೆಲ ಇಂಚಿಗಳ ವರೆಗೆ ಕುಸಿತವಾಗಿರುವ ಸಾಧ್ಯತೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಭೂಕಂಪನದ ಬಳಿಕದ ಕೆಲ ಸ್ಯಾಟಲೈಟ್ ಚಿತ್ರಗಳಲ್ಲಿಯೂ ಕೂಡ ಮೌಂಟ್ ಎವರೆಸ್ಟ್ ನ ಎತ್ತರ ಕುಸಿತವಾಗಿರುವ ಕುರಿತು ಶಂಕೆ ಮೂಡಿತ್ತು. ಪ್ರಸ್ತುತ ಮೌಂಟ್ ಎವರೆಸ್ಟ್ ನ ಎತ್ತರ ಸಮುದ್ರ ಮಟ್ಟದಿಂದ 8,848 ಮೀಟರ್  (29,029 ಅಡಿಗಳು) ಗಳಾಗಿದ್ದು, ಭೂಕಂಪನದಿಂದಾಗಿ ಈ ಎತ್ತರದಲ್ಲಿ ಕೆಲ ಇಂಚುಗಳು ಕಡಿತವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕೆಲ ನುರಿತ ವಿಜ್ಞಾನಿಗಳ ತಂಡ ಮೌಂಟ್ ಎವರೆಸ್ಟ್ ನ ಎತ್ತರವನ್ನು  ಲೆಕ್ಕಾಚಾರ ಮಾಡಲು ತೊಡಗಿದ್ದಾರೆ ಎಂದು ಭಾರತದ ಖ್ಯಾತ ಸಮೀಕ್ಷಕರಾದ ಸ್ವರ್ಣ ಸುಬ್ಬಾರಾವ್ ಅವರು ತಿಳಿಸಿದ್ದಾರೆ.

"ನೇಪಾಳ ಭೂಕಂಪನ ಸಂಭವಿಸಿ 2 ವರ್ಷಗಳು ಗತಿಸಿದ್ದು, ಈಗ ಮೌಂಟ್ ಎವರೆಸ್ಟ್ ಎತ್ತರವನ್ನು ನಾವು ಅಳೆಯಲಿದ್ದೇವೆ. ಈ ಪ್ರಕ್ರಿಯೆಗೆ ಸುಮಾರು 1.5 ತಿಂಗಳು ಕಾಲಾವಕಾಶ ಬೇಕಿದ್ದು, 30 ದಿನಗಳ ಕಾಲ ಶಿಖರದ ಅವಲೋಕನ  ಹಾಗೂ ಇನ್ನೊಂದು 15 ದಿನಗಳ ದತ್ತಾಂಶ ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಕಾರ್ಯಕ್ಕಾಗಿ ಐದು ಮಂದಿ ನುರಿತ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಚಳಿಗಾಲದ ಅಂತ್ಯದ ವೇಳೆಯಲ್ಲಿ ಈ ತಂಡ ಶಿಖರಕ್ಕೆ  ಪಯಣ ಬೆಳೆಸಲಿದ್ದು, ಅತ್ಯಾಧುನಿಕ ಉಪಕರಣಗಳ ಮೂಲಕ ಶಿಖರವನ್ನು ಅಳೆಯಲಿದ್ದಾರೆ ಎಂದು ರಾವ್ ತಿಳಿಸಿದರು.

2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ಸಾವಿರಾರು ಮಂದಿ ಮೃತಪಟ್ಟು, ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ನಷ್ಚವಾಗಿತ್ತು, ನೇಪಾಳದ ಸುಮಾರು 80 ವರ್ಷ ಇತಿಹಾಸದಲ್ಲಿ ಇಷ್ಟು ಭಾರಿ ಪ್ರಮಾಣದ  ಭೂಕಂಪನ ಸಂಭವಿಸಿರಲಿಲ್ಲ. ಹೀಗಾಗಿ ಭೂಕಂಪನ ಮೌಂಟ್ ಎವರೆಸ್ಟ್ ಶಿಖರದ ಎತ್ತರದ ಮೇಲಿ ಪರಿಣಾಮ ಬೀರಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ, ಅಂತೆಯೇ ನೇಪಾಳ ರಾಜಧಾನ ಕಂಠ್ಮಂಡು ಕೂಡ ದಕ್ಷಿಣದತ್ತ  ಸರಿದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com