ರೈತರ ಆತ್ಮಹತ್ಯೆ, ಬ್ಯಾಂಕ್ ನಲ್ಲಿ ಸುಸ್ತಿದಾರರಲಿಲ್ಲದ ಕರ್ನಾಟಕದ ಏಕೈಕ ಗ್ರಾಮ !

ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ಇಲ್ಲವೇ ಬೆಳೆ ನಷ್ಟ, ಅಥವಾ ಸಾಲಬಾಧೆ, ಸಾಲಮನ್ನಾ ವಿಷಯದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಯಚೇನಹಳ್ಳಿ(ಮೈಸೂರು): ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ಇಲ್ಲವೇ ಬೆಳೆ ನಷ್ಟ, ಅಥವಾ ಸಾಲಬಾಧೆ, ಸಾಲಮನ್ನಾ ವಿಷಯದಲ್ಲಿ ರಾಜಕೀಯ ಮೇಲಾಟಗಳಿಗೆ ಸಿಲುಕಿ ದೇಶದ ಹಲವು ಭಾಗಗಳಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲದೇ ರೈತರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಮೈಸೂರಿನಿಂದ 30 ಕಿಮೀ ದೂರದಲ್ಲಿರುವ ಟಿ. ನರಸಿಪುರ ತಾಲೂಕಿನ ಯಚೇನಹಳ್ಳಿ ಗ್ರಾಮದಲ್ಲಿ  ಕಳೆದ 8 ವರ್ಷಗಳಲ್ಲಿ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅಥವಾ ಸಾಲಬಾದೆಯಿಂದ ಸಾವಿಗೆ ಶರಣಾಗಿಲ್ಲ, 
ಕೃಷಿಕ ಗ್ರಾಮವಾಗಿರುವ ಯಚೇನಹಳ್ಳಿಯಲ್ಲಿ ಕಳೆದ 3 ವರ್ಷದಿಂದ  ಯಾವುದೇ ಸಮಸ್ಯೆಯಿಲ್ಲದೇ 5 ಸಾವಿರ ಮಂದಿ ಬೇಸಾಯದಲ್ಲಿ ತೊಡಗಿದ್ದಾರೆ. 450 ಕುಟುಂಬದಲ್ಲಿ ಶೇ.90 ಕ್ಕೂ ಹೆಚ್ಚಿನ ರೈತರು ಬಹು-ಬೆಳೆಗಾರಿಕೆ ಪದ್ಧತಿ ಅನುಸರಿಸುತ್ತಿದ್ದಾರೆ. ಹೀಗಾಗಿ ಈ ರೈತರು ಸಮಸ್ಯೆಗಳಿಂದ ದೂರವೇ ಉಳಿದಿದ್ದಾರೆ.
ಗ್ರಾಮದಲ್ಲಿರುವ  1.500 ಹೇಕ್ಟೇರ್ ಜಮೀನಿನನಲ್ಲಿ ಶೇ.50 ರಷ್ಟು ನೀರಾವರಿಯಿಂದ ಕೂಡಿದೆ. ಶೇ. 40ರಷ್ಟು ಪಂಪ್ ಸೆಟ್, ಶೇ. 10 ರಷ್ಟು ಮಾತ್ರ ಒಣ ಭೂಮಿಯಾಗಿದೆ. ಈ ಗ್ರಾಮದ ರೈತರು ಭತ್ತ, ಕಬ್ಬು, ರಾಗಿ, ಜೋಳ, ಹಾಗೂ ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಬಹುತೇಕ ರೈತರು ಕಡಿಮೆ ಅವಧಿಯತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಸರಿಯಾದ ಸಮಯದಲ್ಲಿ ಬಾಕಿ ಪಾವತಿಸದ ಕಾರಣ, ಈ ಗ್ರಾಮದಲ್ಲಿ ಬೆಳೆಯುವ ಕಬ್ಬನ್ನು ರೈತರು ಪಕ್ಕದಲ್ಲೇ ಇರುವ ದಾಸೇಗೌಡನ ಕೊಪ್ಪಲು ಮತ್ತು ಕೆಂಪೇಗೌಡನ ಕೊಪ್ಪಲದ ಬೆಲ್ಲದ ತಯಾರಿಕಾ ಘಟಕಕ್ಕೆ ಕಬ್ಬನ್ನು ಮಾರುತ್ತಾರೆ.
ಹಲವು ವರ್ಷಗಳಿಂದ ನಾವು ಯಾವುದೇ ಸಮಸ್ಯೆಗೆ ಸಿಲುಕಿಲ್ಲ, ನಾವು ಯಾವುದೇ ರೀತಿಯ ಬೆಳೆಸಾಲ ತೆಗೆದುಕೊಳ್ಳುವುದಿಲ್ಲ, ಕಠಿಣ ಶ್ರಮ ಮತ್ತು ಉತ್ತಮ ತಂತ್ರಜ್ಞಾನ ಅಳವಡಿಕೆಯಿಂದಾಗಿ ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ರೈತ ಯತಿರಾಜ್ ಎಂಬುವರ ಅಭಿಪ್ರಾಯವಾಗಿದೆ.
2009 ರಲ್ಲಿ ಯಾಚೇನಹಳ್ಳಿ ಪ್ರಾಥಮಿಕ ಕೃಷಿ-ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆರಂಭವಾಯಿತು. ಈ ಬ್ಯಾಂಕ್ ನ ವಾರ್ಷಿಕ ವಹಿವಾಟು ಸುಮಾರು 13 ಕೋಟಿ ರು ಇದೆ. ಸುಮಾರು 4 ಕೋಟಿಗೂ ಅಧಿಕ ಕೃಷಿ ಸಾಲ ನೀಡಿದೆ. ಆದರೆ ಇದುವರೆಗೂ ಒಬ್ಬನೇ ಒಬ್ಬ ಸುಸ್ತಿದಾರ ಈ ಬ್ಯಾಂಕ್ ಗಿಲ್ಲ, 
ಮೈಸೂರಿನಲ್ಲಿ 250 ಪ್ರಾಥಮಿಕ ಕೃಷಿ ಕೋ-ಆಪರೇಟಿವ್  ಸೊಸೈಟಿ ಗಳಿವೆ. ಅದರಲ್ಲಿ 4 ರಿಂದ 5 ಬ್ಯಾಂಕ್ ಗಳು ಮಾತ್ರ ಎ ದರ್ಜೆ ಪಡೆದಿವೆ. ಅದರಲ್ಲಿ ಯಾಚೇನಹಳ್ಳಿ ಬ್ಯಾಂಕ್ ಕೂಡ ಒಂದಾಗಿದೆ.
ಬ್ಯಾಂಕ್ ಸಾಲ ನೀಡುತ್ತಿದೆ, ಪಂಚಾಯಿತಿ ಉತ್ತಮ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಹಾಯ ಹಾಗೂ ಬೆಂಬಲ ನೀಡುತ್ತಿದೆ . ಹೀಗಾಗಿ ಈ ಗ್ರಾಮದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ರೈತರೊಬ್ಬರು ತಿಳಿಸಿದ್ದಾರೆ.  ಸಾವಯವ ಕೃಷಿ ಉತ್ಪನ್ನಗಳ ಮೇಲೆ ದೃಷ್ಟಿ ಹರಿಸಿರುವ ಈ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಆ ಪದ್ಧತಿ ಅನುಸರಿಸಲು ಯೋಜಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com