ಸಿನಿಮಾ ಸುದ್ದಿ

ಗೃಹಿಣಿಯರಿಗೆ ಗುಡ್ ನ್ಯೂಸ್: ಇಂದಿನಿಂದ ಧಾರಾವಾಹಿ ಶೂಟಿಂಗ್ ಪ್ರಾರಂಭ!

Raghavendra Adiga

ಬೆಂಗಳೂರು: ಕೊರೋನಾವೈರಸ್ ಹಾವಳಿಯ ತಡೆಗೆ ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಟಿವಿ ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪುನಾರಂಭವಾಗುತ್ತಿದೆ. 

ಮಾರ್ಚ್ 19 ರಿಂದ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಿದ್ದು ಸುಮಾರು ಎರಡು ತಿಂಗಳ ನಂತರ ಮತ್ತೆ ಶೂಟಿಂಗ್ ಪುನಾರಂಬಗೊಳ್ಳುತ್ತಿದೆ. ಜೂನ್ 1 ರಿಂದ ವಿವಿಧ ಧಾರಾವಾಹಿಗಳ ಹೊಸ ಎಪಿಸೋಡುಗಳು ವಿವಿಧ ಟಿವಿ ಚಾನಲ್ ಗಳಲ್ಲಿ ಪ್ರಸಾರ ಕಾಣಲಿದೆ.

ಈ ನಡುವೆ ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿಗಳ ಅನುಸಾರ ಚಿತ್ರೀಕರಣದ ಸ್ಥಳದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಪಾಲನೆ ಮಾಡಬೇಕಿದೆ. ಚಿತ್ರೀಕರಣವಾಗುವ ಸ್ಥಳದಲ್ಲಿ  20ಕ್ಕಿಂತ ಅಧಿಕ ತಂತ್ರಜ್ಞರು, ಕಲಾವಿದರು ಒಂದೆಡೆ ಸೇರಬಾರದು. ಮಾಸ್ಕ್, ಸ್ಯಾನಿಟೈಸರ್  ಬಳಕೆ ಕಡ್ಡಾಯವಾಗಿದ್ದು ಪ್ರತಿ ಎರಡು ತಾಸಿಗೊಮ್ಮೆ ಟೆಂಪರೇಚರ್  ವರದಿಯನ್ನು ಆಯಾ ಚಾನಲ್ ಗಳಿಗೆ ರವಾನಿಸಬೇಕು. 

ಇನ್ನು ಮೇಕಪ್ ಗೆ ಅಗತ್ಯವಾಗಿರುವ ವಸ್ತುಗಳನ್ನು ಕಲಾವಿದರೇ ತರಬೇಕಿದೆ.  ಚಿತ್ರೀಕರಣದಲ್ಲಿ ಭಾಗವಹಿಸ ಎಲ್ಲರಿಗೆ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದ್ದು ಕಲಾವಿದರು, ಸಿಬ್ಬಂದಿಗಳ ವೇತನದಲ್ಲಿ ಈ ಮೊತ್ತ ಕಡಿತ ಮಾಡಲಾಗುತ್ತದೆ. 

SCROLL FOR NEXT