ರಾಜ್ಯ

ಶಿಸ್ತು ಸಮಿತಿಯಿಂದ ಯಾವುದೇ ನೋಟಿಸ್ ಬಂದಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್

Manjula VN

ವಿಜಯಪುರ: ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನನಗೆಗೆ ಯಾವುದೇ ನೊಟೀಸ್ ಬಂದಿಲ್ಲ ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. 

ನೆರೆ ಪರಿಹಾರ ವಿಳಂಬ ನೀತಿ ಕುರಿತಂತೆ ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದ ಹಿನ್ನಲೆಯಲ್ಲಿ ಯತ್ನಾಳ್ ಅವರಿಗೆ ಬಿಜೆಪಿ ಶೋಕಾಸ್  ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿತ್ತು. 

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ಅವರು, ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನನಗೆಗೆ ಯಾವುದೇ ನೊಟೀಸ್ ಬಂದಿಲ್ಲ. ಒಂದು ವೇಳೆ ನೋಟೀಸ್ ಬಂದರೆ ಅದಕ್ಕೇನು ಉತ್ತರ ಕೊಡಬೇಕು ಎಂಬುದನ್ನು ಚರ್ಚಿಸಿ ಉತ್ತರ ಕೊಡುತ್ತೇನೆ. ತಮ್ಮ ಬಗ್ಗೆ ಹೈಕಮಾಂಡ್ ತಪ್ಪು ಕಲ್ಪನೆಯಿಂದ ಈ ರೀತಿ ಹೇಳಿರುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ತಿಳಿಸಿದ್ದಾರೆ.

ತಪ್ಪು ಕಲ್ಪನೆಯಿಂದ ತಮಗೆ ಬಿಜೆಪಿ ಸಂಸದೀಯ ಸಮಿತಿಯಿಂದ ತಮಗೆ ನೊಟೀಸ್ ನೀಡಿರಬೇಕು. ಹಾಗಾಗಿ ನೊಟೀಸ್ ಬಂದಿರಬೇಕು.ನೆರೆ ಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲ, ಮಾಧ್ಯಮ ಗಳು ನಿರಂತರ ವರದಿ ಬಿತ್ತರಿಸಿವೆ. ಸಂತ್ರಸ್ಥರ ಸ್ಥಿತಿ ಕಂಡು ನಾನು ಸೇರಿದಂತೆ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸ್ಪಂದಿಸದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದ್ರೋಹ ಮಾಡಿದಂತಾಗುತ್ತದೆ. ಸಂತ್ರಸ್ಥರಿಗೆ ಪರಿಹಾರ ಕೊಡಿಸದಿದ್ದರೆ ಸಂಸದ, ಶಾಸಕ, ಸಚಿವರಾಗಿದ್ದರೆ ಏನು ಪ್ರಯೋಜನ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

SCROLL FOR NEXT