ರಾಜ್ಯ

ಕೊರೋನಾ ವೈರಸ್ ಲಾಕ್ ಡೌನ್: ಏಪ್ರಿಲ್ ನಲ್ಲಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಶೇ.50ರಷ್ಟು ಇಳಿಕೆ

Srinivasamurthy VN

ಬೆಂಗಳೂರು: ಮಾರಕ ಕೊರೋನಾ ವೈರಸ್ ನಿಂದಾಗಿ ದೇಶಾದ್ಯಂತ ಜಾರಿ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳ ವಾಯುಮಾಲಿನ್ಯ ಶೇ.50ರಷ್ಟು ಕುಸಿತವಾಗಿದೆ.

ಹೌದು.. ಈ ಬಗ್ಗೆ ಎನ್ ಜಿಒ ಗ್ರೀನ್ ಪೀಸ್ ವರದಿ ನೀಡಿದ್ದು, ಬೆಂಗಳೂರಿನಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ಏಪ್ರಿಲ್ ತಿಂಗಳ ವಾಯುಮಾಲಿನ್ಯ ಸರಾಸರಿಯಲ್ಲಿ ಬರೊಬ್ಬರಿ ಶೇ.50ರಷ್ಟು ಕುಸಿತ ಕಂಡುಬಂದಿದೆ. ಎನ್ ಜಿಒ ಗ್ರೀನ್ ಪೀಸ್ ದಕ್ಷಿಣ ಭಾರತದ ಪ್ರಮುಖ ನಗರಗಳಾದ  ಬೆಂಗಳೂರು. ಚೆನ್ನೈ, ಹೈದರಾಬಾದ್ ನ ವಾಯುಮಾಲಿನ್ಯದ ಕುರಿತು ಕೇಂದ್ರೀಯ ಮಾಲೀನ್ಯ ನಿಯಂತ್ರಣ ಇಲಾಖೆಯ ದತ್ತಾಂಶಗಳನ್ನು ಆಧರಿಸಿ 2019 ಮತ್ತು 2020 ಏಪ್ರಿಲ್ ತಿಂಗಳ ವರದಿ ತಯಾರಿಸಿದೆ. ವರದಿಯಲ್ಲಿ ಏಪ್ರಿಲ್ ತಿಂಗಳ ವಾಯುಮಾಲಿನ್ಯ ಪ್ರಮಾಣ ಶೇ.50ರಷ್ಚು  ಕಡಿತವಾಗಿದೆ. 

ಇಂಧನ ಉರಿಸಿದಾಗ ಬಿಡುಗಡೆಯಾಗುವ ನೈಟ್ರೋಜನ್ ಡೈಯಾಕ್ಸೈಡ್ (NO2) ಮತ್ತು ಪಿಎಂ2.5 ಪ್ರಮಾಣದಲ್ಲಿ ಶೇ.50ರಷ್ಟು ಕುಸಿತ ಕಂಡುಬಂದಿದೆ. ಈ ಪೈಕಿ ಪಿಎಂ 2.5 ಮಾನವನ ಉಸಿರಾಟದ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.  2019ರ ಏಪ್ರಿಲ್ ನಲ್ಲಿ NO2 ಪ್ರಮಾಣ 33.36mcg/m3ರಷ್ಟಿತ್ತು. 12.00mcg/m3ಯಷ್ಟಿದೆ. ಪಿಎಂ 2.5 ಪ್ರಮಾಣ 2019ರ ಏಪ್ರಿಲ್ ನಲ್ಲಿ 51.05mcg/m3ರಷ್ಟಿತ್ತು. 2020ರ ಏಪ್ರಿಲ್ ನಲ್ಲಿ 24.72mcg/m3ರಷ್ಟಿದೆ ಎಂದು ಹೇಳಲಾಗಿದೆ.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ದೇಶದ ಪ್ರಮುಖ ನಗರಗಳಲ್ಲಿನ ಕೈಗಾರಿಕಗಳು ಸ್ಥಬ್ಧವಾಗಿದ್ದು, ವಾಹನಗಳ ಸಂಖ್ಯೆ ಕೂಡ ಗಣನೀಯವಾಗಿ ಇಳಿಕೆಯಾಗಿದೆ. ಇದಲ್ಲದೆ ವಿಮಾನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಇದರಿಂದ ನೈಟ್ರೋಜನ್ ಡೈಯಾಕ್ಸೈಡ್ (NO2)  ಮತ್ತು ಪಿಎಂ2.5 ಪ್ರಮಾಣ ತಗ್ಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT