ನಿತ್ಯ ನೂತನ 'ನವನವೀನ'

ಪ್ರತಿ ದಿನವೂ ಹೊಸ ದಿನವೇ ಹಾಗೂ ಪ್ರತಿ ಕ್ಷಣವೂ ಹೊಸತನವೇ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ದೀರ್ಘ ಆಯಸ್ಸು 120 ವರ್ಷ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ದೀರ್ಘ ಆಯಸ್ಸು 120 ವರ್ಷ

ಪ್ರತಿ ವರ್ಷವೂ ಹೊಸ ವರ್ಷ ಬರುವುದು. ಜನ ಅದನ್ನು ಸಂತೋಷದಿಂದ ಬರಮಾಡಿಕೊಳ್ಳುವರು. ಪ್ರತಿ ಜನವರಿ ಒಂದರಂದು ಮಾತ್ರವಲ್ಲದೇ ಪ್ರತಿ ದಿನವೂ ಹೊಸ ದಿನವೇ ಹಾಗೂ ಪ್ರತಿ ಕ್ಷಣವೂ ಹೊಸತನವೇ.

ನಾವು ಕಳೆದ ದಿನ, ಆ ದಿನದ ದಿನಾಂಕ, ವಾರ, ನಕ್ಷತ್ರ, ತಿಥಿ, ಯೋಗ, ಕರಣ, ಆ ದಿನದಲ್ಲಿ ನಡೆದ ಕಾರ್ಯಕ್ರಮ. ಕಳೆದ ಮುಖ್ಯವಾದ ಸಮಯ ಮತ್ತೆ ಬರುವುದಿಲ್ಲ. ಒಂದು ದಿನದ ಮಹತ್ವ ಎಷ್ಟು ಎಂಬುದು ನಾವು ರಾಮಕೃಷ್ಣ ಪರಮಹಂಸರ ಜೀವನದಲ್ಲಿ ನೋಡಬಹುದು.

ಅವರು ಸಾಧನೆಯ ಸಮಯದಲ್ಲಿ ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲವೆಂದು ದೇವಿಯ ಹತ್ತಿರ ಕಣ್ಣೀರು ಹಾಕುತ್ತಾ, ದೇವಿ ದಿನಗಳು ಕಳೆದು ಹೋಗುತ್ತಿದೆ. ಆದರೆ ನಿನ್ನ ದರ್ಶನ ಮಾತ್ರ ಆಗುತ್ತಿಲ್ಲ ಎಂದು ಬೇಡಿಕೊಳ್ಳುತ್ತಿದ್ದರು. ಅಂದರೆ ಇಡೀ ಬದುಕನ್ನು ಸಾಧಿಸಿ ಎಂದು ಸ್ವೀಕರಿಸಿದಾಗ, ಗುರಿ ಸ್ಪಷ್ಟವಿರುವವರಿಗೆ ಒಂದೊಂದು ದಿನವೂ ಎಷ್ಟು ಮಹತ್ವವಾಗಿದೆ ಎಂದು ತಿಳಿಯುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ದೀರ್ಘ ಆಯಸ್ಸು 120 ವರ್ಷ. ಗ್ರಹಗಳ ಒಟ್ಟು ದೆಸೆ 120 ವರ್ಷ. ರವಿದೆಸೆ 6 ವರ್ಷ, ಚಂದ್ರ ದೆಸೆ 10 ವರ್ಷ, ಕುಜದೆಸೆ 7 ವರ್ಷ, ರಾಹು ದೆಸೆ 18 ವರ್ಷ, ಗುರು ದೆಸೆ 16 ವರ್ಷ, ಶುಕ್ರ ದೆಸೆ 20 ವರ್ಷ, ಶನಿ ದೆಸೆ 17 ವರ್ಷ, ಬುಧ ದೆಸೆ 17 ವರ್ಷ, ಕೇತು ದೆಸೆ 7 ವರ್ಷ ಒಟ್ಟು 120 ವರ್ಷಗಳು. 60 ವರ್ಷ ತುಂಬಿದ ಸಮಯದಲ್ಲಿ ಷಷ್ಠ್ಯಬ್ಧಿ ಶಾಂತಿಯನ್ನು ಮಾಡುವರು.

ಅಂದರೆ ಅವರ ಅರ್ಧ ಆಯಸ್ಸು ಕಳೆಯಿತು ಎಂದು(ಅರ್ಧ ಜೀವನ ಕಳೆಯಿತು ಎಂದು) 60 ವರ್ಷ ಮುಗಿಸಿದ ವೃತ್ತಿ ಸಮಯವನ್ನು ತಾವು ಯಾವ ರೀತಿ ಕಳೆದಿರಿ ಎಂದು ಪ್ರಶ್ನೆ ಮಾಡಿದರೆ ಅವರಿಂದ ಬರುವ ಉತ್ತರ ಶೇ.75 ಭಾಗ ನಿದ್ದೆಯಲ್ಲಿ ಹೋಯಿತು ಎನ್ನುವರು. ಉಳಿದ ಶೇ.25 ಭಾಗದಲ್ಲಿ 1 ಭಾಗವನ್ನೂ ಸಹ ಸತ್ಕಾರ್ಯಕ್ಕೆ ಉಪಯೋಗಿಸಿರುವುದು ಕಂಡು ಬರುವುದಿಲ್ಲ.

ಶಂಕರಚಾರ್ಯರು ತಿಳಿಸಿರುವ ಪ್ರಕಾರ ಮನುಷ್ಯ ಜನ್ಮ, ಮುಕ್ಷುತ್ವ ಮತ್ತು ಸಾಧು ಸಂತರ ಸಹವಾಸ ಈ ಮೂರು ದುರ್ಲಭ. ಈ ಪ್ರಪಂಚದಲ್ಲಿ ಯಾವ ಸುಖವೂ ನಮಗೆ ತೃಪ್ತಿಯನ್ನು ಕೊಡುವುದಿಲ್ಲ.

ವೇದಾಂತದ ಪ್ರಕಾರ ಈ ಜಗತ್ತು ಮಿಥ್ಯ. ಪರಮಾತ್ಮ ಒಬ್ಬನೇ ಸತ್ಯ. ಶಂಕರಾಚಾರ್ಯರು ಹೇಳುವಂತೆ ಜ್ಞಾನಿಯಾದವನು ಸಂಸಾರದಲ್ಲಿದ್ದರೂ, ವೇದಗಳು ಹೇಳಿರುವ ಆತ್ಮನಿಗಿಂತ ಭಿನ್ನವಾದುದರ ಬಗ್ಗೆ ಚಿಂತಿಸುವುದಿಲ್ಲ. ಜ್ಞಾನಿಗೆ ಈ ಜಗತ್ತು ಒಂದು ಯೋಗ ಪ್ರಪಂಚ.

ಬಾಲ್ಯದಲ್ಲಿ ಆಟ, ಪಾಠ, ನಿರತ, ತಾರುಣ್ಯದಲ್ಲಿ ಲಲನೆಯ ಚಿಂತನೆ, ವೃದ್ಧಾಪ್ಯದಲ್ಲಿ ಚಿಂತೆಗಳ ಬಾರ ಒಟ್ಟಿನಲ್ಲಿ ಪರಬ್ರಹ್ಮನಲ್ಲಿ ಆಸಕ್ತಿ ಇಲ್ಲವಲ್ಲ ಎಂದು ಶಂಕರಾಚಾರ್ಯರು ಸೂಚಿಸುವಂತೆ ಮನುಷ್ಯನು ಈ ಜಗತ್ತಿನ ಮಾಯೆಗೆ ಮುಳಗಿ ಮೋಕ್ಷ ಚಿಂತನೆಯನ್ನು ಮುಂದಕ್ಕೆ ಹಾಕುತ್ತಾ ಹೋಗುತ್ತಾನೆ.

ಭಗವಂತನ ಚಿಂತನೆಗೆ ಮತ್ತು ಸತ್ಕಾರ್ಯಕ್ಕೆ ಸಮಯ ಯಾವಾಗ ಉಪಯೋಗಿಸುತ್ತಾನೆ? ಆದ್ದರಿಂದ ಸಿಕ್ಕಿರುವ ಸಮಯವನ್ನು ಉಪಯೋಗಿಸಿ ಸತ್ಕಾರ್ಯಕ್ಕೆ ಮಾಡುವುದು ಒಳ್ಳೆಯದು. ಪ್ರತಿ ವರ್ಷದ ಮೊದಲ ದಿನವೇ ಹೊಸ ದಿನ ಎಂದು ತಿಳಿಯದೆ ಅನುದಿನವೂ ಹೊಸತನ ಹೊಸ ಕ್ಷಣ ಎಂದು ಭಾವಿಸಿ ನಮ್ಮ ಜೀವನವನ್ನು ಉಪಯುಕ್ತವಾಗಿ ಬಳಸಿಕೊಳ್ಳೋಣ ಅಲ್ಲವೇ?

-ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com