ಮಕ್ಕಳಿಲ್ಲದ ಜೋಡಿಗಳಿಂದ ಮಂತ್ರಿಸಿದ ನಿಂಬೆಹಣ್ಣಿಗೆ ೬೧ ಸಾವಿರ ವಸೂಲಿ

ನಿಮ್ಮ ತರಕಾರಿ ಮಾರುಕಟ್ಟೆಯಲ್ಲಿ ನಿಂಬೆಹಣ್ನಿಗೆ ೧೦ ರೂಪಾಯಿಗಿಂದ ಹೆಚ್ಚು ಹೇಳಿದರೆ ನೀವು ಕೊಟ್ಟೀರೇ? ಆದರೆ ಒಂದು ನಿಂಬೆಹನ್ಣಿಗೆ ಬರ್ರೋಬರಿ
ನಿಂಬೆ ಹರಾಜು ಹಾಕಿದ ಮುರುಗನ್ ದೇವಾಲಯದ ಅರ್ಚಕ
ನಿಂಬೆ ಹರಾಜು ಹಾಕಿದ ಮುರುಗನ್ ದೇವಾಲಯದ ಅರ್ಚಕ

ವಿಲ್ಲುಪುರಂ: ನಿಮ್ಮ ತರಕಾರಿ ಮಾರುಕಟ್ಟೆಯಲ್ಲಿ ನಿಂಬೆಹಣ್ನಿಗೆ ೧೦ ರೂಪಾಯಿಗಿಂದ ಹೆಚ್ಚು ಹೇಳಿದರೆ ನೀವು ಕೊಟ್ಟೀರೇ? ಆದರೆ ಒಂದು ನಿಂಬೆಹನ್ಣಿಗೆ ಬರ್ರೋಬರಿ ೨೩೦೦೦ ರೂ ನೀಡಿದವರು ಇಲ್ಲಿದ್ದಾರೆ.

ಇದು ಅಂತಿಂತ ನಿಂಬೆ ಅಲ್ಲ. ಮಂತ್ರಿಸಿದ್ದು. ಮಕ್ಕಳಾಗದವರಿಗೆ ಮಕ್ಕಳನ್ನು ದಯಪಾಲಿಸುವ ನಿಂಬೆ. ಒಟ್ಟಾಣಂಧಲ್ ಗ್ರಾಮದ ಮುರುಗನ್ ದೇವಾಲಯ ಬೆಟ್ಟದ ಮೇಲೆ ಜನರು ಹೀಗೆ ನಂಬುತ್ತಾರೆ.

೯ ಮಂತ್ರಿಸಿದ ನಿಂಬೆಹಣ್ಣುಗಳನ್ನು ಹರಾಜು ಮಾಡಿ ದೇವಾಲಯ ೬೧೦೦೦ ರೂ ದುಡ್ಡನ್ನು ಸಂಗ್ರಹಿಸಿದೆ. ಒಂಬತ್ತು ಜೋಡಿಗಳು ಈ ನಿಂಬೆಹಣ್ಣುಗಳ ಪಲಾನುಭವಿಗಳು.

ಮೂಲಗಳ ಪ್ರಕಾರ ಈ ಪ್ರಾಚೀನ ದೇವಾಲಾಯ ೧೦೦ ವರ್ಷಕ್ಕೂ ಹಳೆಯದು. ಇದನ್ನು ಎರಡು ಬೆಟ್ಟಗಳ ಮುರುಗನ್ ದೇವಾಲಯ ಎಂದೇ ಕರೆಯುತ್ತಾರೆ. ಪಂಗುನಿಯ ತಮಿಳು ತಿಂಗಳಿನಲ್ಲಿ ಇಲ್ಲಿ ೧೧ ದಿನದ ಹಬ್ಬ ಆಚರಿಸಲಾಗುತ್ತದೆ.

ಹಬ್ಬದ ಮೊದಲ ಒಂಭತ್ತು ದಿನಗಳು ಮಂತ್ರಿಸಿ ಇಡಲಾದ ಈ ನಿಂಬೆಹಣ್ಣನ್ನು ಕೊನೆಯ ದಿನ ಶನಿವಾರ ಹರಾಜು ಮಾಡಲಾಗಿ ಒಟ್ಟು ಮೊತ್ತ ೬೦,೯೦೯ ರೂ ಗಳನ್ನು ದೇವಾಲಯ ಸಂಗ್ರಹಿಸಿದೆ. ಈ ಫಲ ನಿಜವಾಗಿಯೂ ಫಲ ನೀಡುವುದೇ? ಅಥವಾ ಬರೀ ನಂಬಿಕೆಯ ಫಲವೇ ಬಲ್ಲವರ್ಯಾರು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com