ಅದೃಷ್ಟ, ಹಣ, ಯಶಸ್ಸು ಮತ್ತು ಪ್ರೀತಿ ತರಬಲ್ಲ ಗಿಡಗಳು..!

ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು...
ಅದೃಷ್ಟ ನೀಡುವ ಗಿಡಗಳು
ಅದೃಷ್ಟ ನೀಡುವ ಗಿಡಗಳು

ವಿಜ್ಞಾನ-ತಂತ್ರಜ್ಞಾನ ಎಂದು ನಗರ ಉತ್ತುಂಗಕ್ಕೇರುತ್ತಿದ್ದರುಜನರಲ್ಲಿ ಮಾತ್ರ ನಂಬಿಕೆಗಳು ಕಡಿಮೆಯಾಗುತ್ತಿಲ್ಲ.ಇಲ್ಲಿ ವಾಸಿಸುವ ಸಾಕಷ್ಟು ಮಂದಿಜ್ಯೋತಿಷ್ಯ, ವಾಸ್ತು, ಭವಿಷ್ಯ, ಹಸ್ತಮುದ್ರಿಕೆ ಇತ್ಯಾದಿಗಳ ಬೆನ್ನು ಬೀಳುತ್ತಲೇ ಇರುತ್ತಾರೆ.

ಏನೇ ಆದರು ಇವೆಲ್ಲ ಅವರವರನಂಬಿಕೆಗೆ ತಕ್ಕಂತೆ ಮುಂದುವರೆಯುತ್ತಲೇ ಇರುತ್ತದೆ.ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂಅದೃಷ್ಟ ತರಬಲ್ಲದು. ರೀತಿಯ ನಂಬಿಕೆಹಿನ್ನೆಲೆಯಲ್ಲಿ ಜನರು ಇತ್ತೀಚಿನ ದಿನಗಳಲ್ಲಿಶೋ ಹಾಗೂ ವಾಸ್ತು, ಅದೃಷ್ಟನೀಡುವ ಗಿಡಗಳನ್ನು ಮನೆಯಲ್ಲಿ ತಂದು ಪೋಷಣೆ ಮಾಡುತ್ತಿರುವುದುಹೊಸ ಟ್ರೆಂಡ್ ಆಗಿಬಿಟ್ಟಿದೆ.

ಮನೆಯಲ್ಲಿಉತ್ತಮವಾದ ವಾತಾವರಣ, ಆರೋಗ್ಯ ಹಾಗೂ ನೆಮ್ಮದಿನೀಡಬೇಕಾದರೆ, ಅಲಂಕೃತವಾಗಿ ಕಾಣಬೇಕಾದರೆ ರೀತಿಯ ಗಿಡಗಳನ್ನುತಂದು ನೆಡಬಹುದು.

ಗುಡಲಕ್ಪ್ಲಾಂಟ್ (good luck plant)

ವಾಸ್ತುಸಸ್ಯದ ಹೆಸರು ಡ್ರಕೇನಾ ಸ್ಯಾಂಡೆರಿನಾಎಂದು. ಸಸ್ಯ ಮನೆಯಒಳಾಂಗಣದಲ್ಲಿ ಬೆಳೆಸುವಂತಹ ಗಿಡವಾಗಿದ್ದು. ಇದಕ್ಕೆ ಹೆಚ್ಚು ನಿರ್ವಹಣೆಅಗತ್ಯವಿಲ್ಲ. ಸಸ್ಯ ಯಾವುದೇಪರಿಸರಕ್ಕಾದರೂ ಹೊಂದಿಕೊಂಡು ಬೆಳೆಯುವ ಗುಣ ಉಳ್ಳದ್ದು. ಸಸಿಯನ್ನು ಅಲಂಕಾರಿಸಸಿಯಾಗಿ ಕಾರ್ಪೋರೇಟ್ ಸಂಸ್ಥೆ, ಸರ್ಕಾರಿ ಕಚೇರಿಹಾಗೂ ಶಾಲಾ ಕಾಲೇಜುಗಳ ಒಳಾಂಗಣಗಳಲ್ಲಿಕಾಣಬಹುದು.

ವಾಸ್ತುಸಸಿ ಕೇವಲ ಅಲಂಕಾರಿಕ ಸಸಿಯಲ್ಲ. ಗಿಡದ ಹಿಂದೆವೈವೀ ಶಕ್ತಿ ಅಡಗಿದೆ. ಇದರಕಾಂಡ ಹಾಗೂ ಚಿಗುರೆಲೆಗಳು ಅಪಾರಶಕ್ತಿ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

ವಾಸ್ತುಗಿಡವನ್ನು ಗುಡಲಕ್ ಪ್ಲಾಂಟ್ ಎಂದುಕರೆಯಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಯಾವುದೇ ಕಚೇರಿಗೆ ಹೋದರು ಗಿಡವನ್ನು ನಾವುಕಾಣಬಹುದು. ಗಿಡದ ಮಹತ್ವಎಂದರೆ, ಗಿಡವನ್ನು ನಾವುವಾಸಿಸುವ ಸ್ಥಳದಲ್ಲಿಟ್ಟರೆ ಶಾಂತಿ ನೆಮ್ಮದಿ, ಒತ್ತಡಮುಕ್ತಜೀವನ, ಐಶ್ವರ್ಯ, ಶಾಂತಿ, ಆರೋಗ್ಯ ವರ್ಧನಕ್ಕೆಸಹಕಾರಿಯಾಗುತ್ತದೆ  ಎಂದುಜನರು ನಂಬಿದ್ದಾರೆ. ಇಂಥ ಸಸಿಗಳನ್ನು ನಾವುಕೊಂಡು ಬೆಳೆಸುವುದಕ್ಕಿಂತ ಯಾರಾದರೂ ನಮಗೆ ಕೊಟ್ಟರೆಅದೃಷ್ಟ ಲಕ್ಷ್ಮೀ ನಮ್ಮೊಂದಿಗೆ ಬರುತ್ತಾಳೆಎಂಬ ನಂಬಿಕೆಯೂ ಜನರಲ್ಲಿ ಇದೆ.

ವೈಜ್ಞಾನಿಕವಾಗಿಹೇಳುವುದಾದರೆ ವಾಸ್ತು ಗಿಡಗಳು ಸಾಕಷ್ಟುಮಹತ್ವ ಹೊಂದಿದ್ದು, ಗಿಡ ಮನೆಯಲ್ಲಿನಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ ಎಂದು ಹೇಳಲಾಗುತ್ತಿದೆ.

ಲೋಳೆಸರದಗಿಡ  (Aloevera plant)

ಇದೇ ರೀತಿಯಲ್ಲಿ ಲೋಳೆಸರದ ಗಿಡವನ್ನು ಅದೃಷ್ಟದಗಿಡವಾಗಿ ಕಾಣಲಾಗುತ್ತಿದ್ದು, ಮನೆಯ ಮುಂದಿಟ್ಟಿರೆ ಯಾವುದೇದುಷ್ಟ ಶಕ್ತಿಗಳು ಒಳಗೆ ಬರುವುದಿಲ್ಲ ಎಂದುಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾವು ಆತ್ಮೀಯರ ಮನೆಗಳಿಗೆಹೋದಾಗ ಗಿಡವನ್ನು ಬಾಗಿಲಿಗೆನೇತು ಹಾಕಿರುವುದನ್ನು ನೋಡಿರಬಹುದು. ವೈಜ್ಞಾನಿಕವಾಗಿ ಲೋಳೆಸರದ ಗಿಡ ಗಾಳಿ,ಮನೆಯನ್ನು ಶುದ್ಧವಾಗಿಡುವುದಲ್ಲದೆ,  ತುರಿಕೆ,ಹೊಟ್ಟೆನೋವು. ಹೆಣ್ಣು ಮಕ್ಕಳ ಮುಟ್ಟಿನತೊಂದರೆಗಳು ಕಂಡು ಬಂದಾಗ ಉತ್ತಮಮನೆಮದ್ದಾಗಿಯೂ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಹೈಡ್, ಬೆಂಜೀನ್  ಕ್ರಿಮೀನಾಶಕವಿಷಕಾರಿ ಅಂಶಗಳನ್ನು ಹೋಗಲಾಡಿಸುತ್ತದೆ. ಇದರಿಂದ ಆರೋಗ್ಯ ವೃದ್ಧಿಯೊಂದಿಗೆ ಶಾಂತಿ,ನೆಮ್ಮದಿ ಸಿಗುತ್ತದೆ.

ಸ್ಪೈಡರ್ಪ್ಲಾಂಟ್ (spider palnt)

ಗಾಳಿಯಲ್ಲಿರುವವಿಷಕಾರಿ ಅಂಶವನ್ನು ಹೋಗಲಾಡಿಸಿ, ಮನೆಯೊಳಗೆ ಶುದ್ಧವಾದ ಗಾಳಿಯನ್ನು ಬಿಡುತ್ತದೆ. ಅದರಲ್ಲೂ ಗಿಡವನ್ನುಅಡುಗೆ ಮನೆಯ ಸಮೀಪದಲ್ಲಿ ಇಟ್ಟರೆಕಾರ್ಬನ್ ಮಾನೋಕ್ಲೈಡ್ ಹೀರಿಕೊಂಡು ಶುದ್ಧುವಾದ ಗಾಳಿಯನ್ನು ನೀಡುತ್ತದೆ.

ಫೆರ್ನ್ಸ್ (ferns)

ಗಿಡ ಕೂಡ ಮನೆಯೊಳಗೆಇದ್ದರೆ ಶುದ್ಧ ಗಾಳಿಯನ್ನು ನೀಡುವುದಲ್ಲದೆ,ಉಸಿರಾಟ ಸಮಸ್ಯೆಗೆ ಉತ್ತಮ ಚಿಕಿತ್ಸೆಯಾಗಿದೆ.

ಬೇಸಿಲ್(Basil)

ಗಿಡ ಪ್ರೀತಿ, ಆರೋಗ್ಯ,ಆಸ್ತಿ, ಸೌಂದರ್ಯ ಹಾಗೂ ಉತ್ಸಾಹವನ್ನುಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ವೈಜ್ಞಾನಿಕವಾಗಿಬೇಸಿಲ್ ಗಿಡದ ಎಲೆಗಳನ್ನು ಸೇವಿಸುವುದರಿಂದರಕ್ತ ಪರಿಚಲನೆ ಉತ್ತಮರೀತಿಯಲ್ಲಿ ಆಗುವುದಲ್ಲದೆ,ಯಾವುದೇ ಕೆಲಸವನ್ನು ಮಾಡಬೇಕಾದರೂ ಉತ್ಸಾಹವನ್ನು ಹೆಚ್ಚುಸುತ್ತದೆ. ನಂಜುನಿರೋಧಕ ಮತ್ತು ಸೂಕ್ಷ್ಮಕ್ರಿಮಿಗಳ ಶಮನಕಾರಿಮಾಡುತ್ತದೆ.

ಐವಿ (Ivy)

ಇದರ ಎಲೆ ವಿಷ ಪೂರಕವಾಗಿದ್ದರೂ ಎಲೆ ಗಾಳಿಯಿಂದಉಂಟಾಗುವ ಅಲರ್ಜಿಯನ್ನು ತಡೆಯುತ್ತದೆ. ಅಸ್ತಮಾ, ಅಲರ್ಜಿ ಸಮಸ್ಯೆಇರುವವರು ಗಿಡವನ್ನು ಮನೆಯಎದುರುಗಡೆ ನೆಟ್ಟು ಪೋಷಿಸುವುದು ಒಳ್ಳೆಯದು.

ಹನಿಸಕ್ಕಲ್(Honeysuckle)

ಹನಿಸಕ್ಕಲ್
ಗಿಡವು
ಮನೆ
ಆಸ್ತಿಯನ್ನು
ವೃದ್ಧಿಸುವುದಲ್ಲದೆ
ಮನೆಯಲ್ಲಿ
ಉಂಟಾಗುವ
ಕೆಟ್ಟ
ವಾತಾವರಣದಿಂದ
ರಕ್ಷಿಸುತ್ತದೆ
ಎಂದು
ಜನರು
ಹೇಳುತ್ತಾರೆ
ವೈಜ್ಞಾನಿಕವಾಗಿ
ಗಿಡದ
ಎಲೆಗಳನ್ನು
ಸೇವಿಸುವುದರಿಂದ
ರಕ್ತ
ಶುದ್ಧೀಕರಣವಾಗುವುದರೊಂದಿಗೆ
ದೇಹದಲ್ಲಿ
ರಕ್ತದ
ಪರಿಚಲನೆ
ಉತ್ತಮರೀತಿಯಲ್ಲಿ
ಆಗುತ್ತದೆ

ಅರೆಕಾ ಪಾಮ್ (areca palm)

ಇದು ತುಂಬಾ ಸೂಕ್ಷ್ಮವಾದ ಗಿಡವಾಗಿದ್ದು,ಮನೆಯಲ್ಲಿ ಶುದ್ಧ ಗಾಳಿ ತುಂಬುವಲ್ಲಿಮಹತ್ವದ ಪಾತ್ರವಹಿಸುತ್ತದೆ. ಇದನ್ನು ಮನೆಯಲ್ಲಿ ಎಲ್ಲಿಬೇಕಾದರೂ ಇಡಬಹುದು. ಇದನ್ನು ಹೊರಾಂಗಣದಲ್ಲಿ, ಕಾರಿಜಾರ್ಪಕ್ಕದಲ್ಲಿ ಇಟ್ಟರೆ ಗಾಳಿಯಲ್ಲಿರುವ ಬೇಡದರಾಸಾಯನಿಕಗಳನ್ನು ಹೋಗಲಾಡಿಸಿ ಶುದ್ಧವಾದ ಗಾಳಿಯನ್ನು ತುಂಬುತ್ತದೆ.

ಪಾರಿಜಾತಗಿಡ (Jasmine)

ಪಾರಿಜಾತಗಿಡವು ಮನೆಯಲ್ಲಿ ಆಸ್ತಿ ಹಾಗೂ ಪ್ರೀತಿಯನ್ನುವೃದ್ಧಿಸುತ್ತದೆ ಎಂದು ಹೇಳುತ್ತಾರೆ. ಜಾಸ್ಮೀನ್ಎಣ್ಣೆಯು ಕಾಮೋತ್ತೇಜಕಕ್ಕೆ ಬಳಸಲಾಗುತ್ತಿದ್ದು, ಗಿಡದ ಹೂವಿನಪರಿಮಳ ಮನಸ್ಸಿಗೆ ಮುದ ನೀಡುವುದರೊಂದಿಗೆ ಶಾಂತಿಯುತವಾತಾವರಣವನ್ನು ನಿರ್ಮಿಸುತ್ತದೆ.

ಗೋಲ್ಡನ್ಪಾಥೋಸ್ (golden pothos)

ಇದನ್ನುದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಗಿಡವೆಂದುಮನೆಯೊಳಗೆ ಇಡುತ್ತಾರೆ. ಹೌದು ಗಾಳಿಯಲ್ಲಿರುವ ದುಷ್ಟಶಕ್ತಿಗಳಾದಫಾರ್ಮಲ್ ಡೀಹೈಡ್, ಬೆಂಬೀನ್, ಕ್ಲೈಲಿನ್ಇವುಗಳ ವಿರುದ್ಧ ಹೋರಾಡಿ ನಿಮ್ಮಆರೋಗ್ಯವನ್ನು ರಕ್ಷಿಸುತ್ತದೆ.

(ಮತ್ತಷ್ಟು ಸಂಪತ್ತು, ಅದೃಷ್ಟ ತರುವ ಗಿಡಗಳ ಬಗೆಗಿನ ಮಾಹಿತಿ ಮುಂದಿನ ವಾರ ಮುಂದುವರಿಯಲಿದೆ)

- ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com