ದೋಷ ಧೂಳಿಪಟ

ಕಾಲಗಣನಾ ಚಕ್ರದಲ್ಲಿ ಗ್ರಹದೋಷ ಮತ್ತು ಅನಿಷ್ಟಗಳು ಮಾನವ ಜೀವನಕ್ಕೆ ಬೆಸೆದುಕೊಳ್ಳುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಗಳನ್ನು ಗ್ರಹದೋಷಗಳು ಎನ್ನುವರು. ಇವಕ್ಕೆ ಪರಿಹಾರಗಳನ್ನು ರತ್ನಶಾಸ್ತ್ರದಲ್ಲಿ ತಿಳಿಸಲಾಗಿದೆ....
ರತ್ನ ಚಿಕಿತ್ಸೆ
ರತ್ನ ಚಿಕಿತ್ಸೆ
Updated on

ಕಾಲಗಣನಾ ಚಕ್ರದಲ್ಲಿ ಗ್ರಹದೋಷ ಮತ್ತು ಅನಿಷ್ಟಗಳು ಮಾನವ ಜೀವನಕ್ಕೆ ಬೆಸೆದುಕೊಳ್ಳುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಗಳನ್ನು ಗ್ರಹದೋಷಗಳು ಎನ್ನುವರು. ಇವಕ್ಕೆ ಪರಿಹಾರಗಳನ್ನು ರತ್ನಶಾಸ್ತ್ರದಲ್ಲಿ ತಿಳಿಸಲಾಗಿದೆ.

ಶನಿದೋಷ
ಎಲ್ಲ ದೋಷಗಳಿಗಿಂತ ಶನಿದೋಷ (ಸಾಡೆಸಾತ್) ಮಾನವ ಜೀವನವನ್ನೇ ಬದಲಿಸುತ್ತದೆ. ಶನಿದೋಷ 3, 7, 11, 13 ವರ್ಷಗಳು ಇರುವುದು. ಯಾವ ಕೆಲಸ ಕೈಗೊಂಡರೂ ನಿಷ್ಕ್ರಿಯತೆ, ಆರೋಗ್ಯದಲ್ಲಿ ಏರುಪೇರು, ಚಂಚಲ ಸ್ವಭಾವ, ಬಂಡವಾಳ ಹೂಡಿಕೆಯಲ್ಲಿ ಸದಾ ನಷ್ಟ, ಅಶಾಂತಿ, ಜಗಳ, ಭತ್ರುಭಯ, ಸಾಲ ಸಂಕೋಲೆ, ವ್ಯಾಪಾರ ಮತ್ತು ವ್ಯವಹಾರದಲ್ಲಿ ನಷ್ಟ ಸಂಭವಿಸುತ್ತದೆ.

ಶನಿದೋಷದ ಸೂಚನೆ ಎಂದು ತಿಳಿದು ಬಂದರೆ ಅಷ್ಟಧಾತು ಇಂದ್ರನೀಲ, ಗೋಮೇಧ ಮತ್ತು ಪುಷ್ಪರಾಗ ರತ್ನಗಳನ್ನು ಒಟ್ಟಿಗೆ ಧರಿಸಬೇಕು. ಶನಿವಾರ ಸಂಜೆ ಸಮಯದಲ್ಲಿ ನವಗ್ರಹಗಳಿಗೆ ಪೂಜೆ ಸಲ್ಲಿಸಿ ಧರಿಸಬೇಕು. ನವರತ್ನಹಾರ ಇಲ್ಲವೇ ನವರತ್ನ ಉಂಗುರ ಧರಿಸಬಹುದು. ನೀಲಿವಜ್ರವನ್ನು ಬಂಗಾರದೊಂದಿಗೆ ಪೌರ್ಣಮಿಯ ಸಂಜೆ ಸಮಯದಲ್ಲಿ ಧರಿಸಿದರೆ ಶನಿದೋಷ ಅತಿ ಜಾಗ್ರತೆಯಾಗಿ ದೂರವಾಗುತ್ತದೆ. ಕುಜದೋಷ ಜನ್ಮ ದಿನಾಂಕದಿಂದ 11-22-28 ವರ್ಷಗಳಲ್ಲಿ ಬರುವ ಕುಜದೋಷ ಕೇವಲ 100 ರಿಂದ 150 ದಿನಗಳು ಮಾತ್ರ ಇರುತ್ತದೆ. ಕಂಕಣ ಭಾಗ್ಯ ಮತ್ತು ಸಂತಾನ ಯೋಗದಲ್ಲಿ ವಿಳಂಬ, ಮನೋವಿಕಲ್ಪನಾ ವಿಚಾರಗಳಿಂದ ಸದಾ ಚಿಂತೆ, ಸರಿಯಾಗಿ ನಿದ್ದೆ ಬಾರದಿರುವಿಕೆ, ವ್ಯಾಪಾರ, ವ್ಯವಹಾರ ಮತ್ತು ಬಂಡವಾಳ ಹೂಡಿಕೆಯಲ್ಲಿ ಸದಾ ನಷ್ಟ,

ಸಾಲಗಳಿಂದ ಸಂಕೋಲೆ ಯಾವುದೇ ಕೆಲಸ ಅರ್ಧಕ್ಕೆ ನಿಲ್ಲುವುದು, ಗಂಡ ಹೆಂಡತಿಯರಲ್ಲಿ ವಿರಸ, ವಿನಾಕಾರಣಗಳ, ನಿವಾಸದಲ್ಲಿ ಸದಾ ಅಶಾಂತಿ ಇದೇ ಕುಜದೋಷದ ಲಕ್ಷಣಗಳು. ಪರಿಶುದ್ಧ ಕೆಂಪು ವರ್ಣದ ಮಾಣಿಕ್ಯವನ್ನು ಯಾವುದಾದರೊಂದು ಮರಕತ, ನೀಲ, ಪುಷ್ಪರಾಗ ಇಲ್ಲವೇ ಗೋಮೇಧ ರತ್ನದೊಂದಿಗೆ ಮಂಗಳವಾರ ಸೂರ್ಯೋದಯ ಸಮಯದಲ್ಲಿ ಶಕ್ತಿದೇವತೆಯರನ್ನು ಪೂಜಿಸಿ ಆಭರಣ ರೂಪದಲ್ಲಿ ಧರಿಸಬೇಕು. ನವರತ್ನಹಾರ ಇಲ್ಲವೇ ನವರತ್ನ ಉಂಗುರವನ್ನು ಪೌರ್ಣಮಿಯ ಸಂಧ್ಯಾ ಸಮಯದಲ್ಲಿ ಧರಿಸಿದರೆ ದೂರದಲ್ಲಿರುವ ದಂಪತಿ ಒಂದಾಗುವರು. ಕಾಳ ಸರ್ಪದೋಷ ಜನನ ಕಾಲದಲ್ಲಿ ನಕ್ಷತ್ರ  ಮತ್ತು ಲಗ್ನ ವ್ಯತ್ಯಾಸ ಇದ್ದರೂ (ನಷ್ಟ ಜಾತಕ) ಇಲ್ಲವೇ, ನಿಶ್ಚಿತಾರ್ಥ ಸಮಯದಲ್ಲಿ ನಕ್ಷತ್ರ, ಲಗ್ನ ವ್ಯತ್ಯಾಸಗಳಿದ್ದರೂ ಕಾಳಸರ್ಪದೋಷ ಬರಲಿದೆ.

ಪೂರ್ವಜನ್ಮದ ಆಚಾರ, ವಿಚಾರಗಳಲ್ಲಿ ವಿರುದ್ಧಗೊಂಡಿದ್ದರೂ, ದೋಷ ಸಹಜ. ಕಾಳಸರ್ಪ ದೋಷ ಇದೆ ಎಂದು ತಿಳಿದವರು, ಮೊದಲು 108 ಮಣಿಗಳಲ್ಲಿ ಸ್ಫಟಿಕ ಹಾರ ಧರಿಸಿ, 21 ದಿನ ಪ್ರಾತಃಕಾಲ ಸೂರ್ಯೋದಯ ಸಮಯದಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಬೇಕು. ಆರ್ಥಿಕ ಬಲ ಉಳ್ಳವರು ನೀಲಿ ವಜ್ರವನ್ನು ಇಲ್ಲವೆ ವೈಢೂರ್ಯವನ್ನು ಮಾಣಿಕ್ಯ ರತ್ನಗಳೊಂದಿಗೆಬಂಗಾರದ ಅಭರಣ ಮತ್ತು ಉಂಗುರ ರೂಪದಲ್ಲಿ ಅಮಾವಾಸ್ಯೆ ರಾತ್ರಿಯಲ್ಲಿ ಧರಿಸಬೇಕು.

ಬಾಲಗ್ರಹ ದೋಷ
ಇದರ ಬಗ್ಗೆ ಯಾವುದೇ ಪುರಾವೆಗಳು ಇಲ್ಲದಿದ್ದರೂ ಜನರಲ್ಲಿ ನಂಬಿಕೆ ಬೇರೂರಿದೆ. ಬೇವಿನ ಸೊಪ್ಪು ಸೇರಿಸಿ ನೀರನ್ನು ಕಾಯಿಸಿ ಚೆನ್ನಾಗಿ ಕಾಯಿಸಿದ ನಂತರ ಸೂರ್ಯನ ಕಿರಣ ಬೀಳುವಂತೆ ವರಾಂಡದಲ್ಲಿ ಇಟ್ಟು ತಣ್ಣಗೆ ಮಾಡಬೇಕು. ನಂತರ ಅದೇ ನೀರನ್ನು ಬೇವಿನಸೊಪ್ಪಿನಿಂದ ನಿವಾಸದ ಹೊರಗೂ, ಒಳಗೂ ಪ್ರೋಕ್ಷಣೆ ಮಾಡಿ ನಂತರ ಅದೇ ನೀರನ್ನು ಕಾಯಿಸಿ ಮಗುವಿಗೆ ಸ್ನಾನ ಮಾಡಿಸಿದರೆ ಬಾಲಗ್ರಹದೋಷ ನಿವಾರಣೆ ಆಗುವುದು.

ಮಾಹಿತಿಗೆ 9945605618 ಸಂಪರ್ಕಿಸಿ.


-ವಿ. ನಾರಾಯಣ ಶೆಟ್ಟಿ ಪದ್ಮಸಾಲಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com