ಗೋಪುರ
ಗೋಪುರ

ದೇವಾಲಯಗಳಲ್ಲಿ ಗೋಪುರ ನಿರ್ಮಾಣದ ಹಿಂದಿರುವ ಕಾರಣಗಳು

ಪ್ರಾಚೀನಾ ಭಾರತದ ದೇವಾಲಗಳಲ್ಲಿ ಕುತೂಹಲಕ್ಕೆ ಕಾರಣವಾಗುವ ಅಂಶಗಳು ಅನೇಕ. ಅಂಥದ್ದೇ ಒಂದು ಅಂಶ ದೆವಾಲಯ ಪ್ರವೇಶಿಸುತ್ತಿದ್ದಂತೆ ಎದುರಾಗುವ ಗೋಪುರಗಳು.
Published on

ಪ್ರಾಚೀನಾ ಭಾರತದ ದೇವಾಲಯಗಳಲ್ಲಿ ಕುತೂಹಲಕ್ಕೆ ಕಾರಣವಾಗುವ ಅಂಶಗಳು ಅನೇಕ. ಅಂಥದ್ದೇ ಒಂದು ಅಂಶ ದೆವಾಲಯ ಪ್ರವೇಶಿಸುತ್ತಿದ್ದಂತೆಎದುರಾಗುವ ಗೋಪುರಗಳು. ತಂತ್ರಜ್ನಾನ ಬೆಳವಣಿಗೆಯಾಗದ ಅಂಥಹ ಕಾಲದಲ್ಲೂ ಉದ್ದುದ್ದದಗೋಪುರಗಳನ್ನು ನಿರ್ಮಿಸುತ್ತಿದ್ದ ಹಿಂದಿರಬಹುದಾದ ಕಾರಣಗಳನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಬಹುದು.

ಗೋಪುರದ ಮೇಲೆ ಕಳಶ ಸ್ಥಾಪನೆ ಮಾಡಲಾಗಿರುತ್ತದೆ. ಗೋಪುರದಲ್ಲಿ ವಿದ್ಯುತ್ ವಾಹಕಗಳಾದ ಬೆಳ್ಳಿ ಚಿನ್ನ,ಹಿತ್ತಾಳೆ ಅಥವಾ ಪಂಚಲೋಹದ ಕಳಸ ಸ್ಥಾಪನೆ ಮಾಡಲಾಗುತ್ತದೆ. ಇದಕ್ಕೂ ಮುನ್ನ ಕಳಶದಲ್ಲಿ ವಿದ್ಯುತ್ ಪ್ರವಾಹವನ್ನು ಅರ್ತಿಂಗ್ ಮಾಡಲು ಸಹಾಯಕಾರಿಯಾಗಿರುವಉಪ್ಪು, ಭತ್ತ, ರಾಗಿ, ಮುಂತಾದ ಧಾನ್ಯಗಳನ್ನು ಕಳಶದಲ್ಲಿ ತುಂಬಲಾಗುತ್ತದೆ. ಹೀಗೆ ಮಾಡುವುದರಿಂದಗುಡುಗು, ಮಿಂಚು ಸಹಿತ ಮೆಳೆ ಬಂದು ಸಿಡಿಲು ಬಡಿದರೂ ಎತ್ತರದ ಗೋಪುರದ ಮೇಲಿರುವಈ ಕಳಶಗಳಿಗೆ ಮೊದಲು ತಾಗಿ, ಊರಿನ ಇತರ ಪ್ರದೇಶಗಳಿಗೆ ಉಂಟಾಗಬಹುದಾದ ಹಾನಿಯನ್ನುತಡೆಗಟ್ಟಬಹುದೆಂಬುದು ಗೋಪುರ ನಿರ್ಮಾಣಕ್ಕೆ ಇರುವ ಮುಖ್ಯ ಕಾರಣಗಳಲ್ಲಿ ಒಂದು ಎಂಬುದು ಹಲವರ ಅಭಿಪ್ರಾಯಆದ್ದರಿಂದಲೇ ಇರಬೇಕು ದೇವಾಲಯಗಳಿಲ್ಲದಪ್ರದೇಶದಲ್ಲಿ ವಾಸ ಮಾಡಬೇಡಿ (Don’t live in the place where there is notemple) ಎಂಬ ನಾಣ್ಣುಡಿ ಹುಟ್ಟಿಕೊಂಡಿರುವುದುಈ ಅಭಿಪ್ರಾಯಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ, ಗೋಪುರಕ್ಕೆ ಪ್ರತಿ 12 ವರ್ಷಗಳಿಗೊಮ್ಮೆಕುಂಭಾಭಿಷೇಕ ಮಾಡಲಾಗುತ್ತದೆ. 12 ವರ್ಷದ ನಂತರ ಕಳಶದಲ್ಲಿರುವ ಧಾನ್ಯಗಳುಅರ್ತಿಂಗ್ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತವೆ ಆದ್ದರಿಂದ  ಮತ್ತೊಮ್ಮೆ ಕಳಶಗಳಲ್ಲಿ ಹೊಸ ಧಾನ್ಯಗಳನ್ನುತುಂಬಲು ಕುಂಭಾಭಿಷೇಕ ಮಾಡಲಾಗುತ್ತದೆ ಎಂಬ ನಂಬಿಕೆಯೂ ಇದೆಇನ್ನೂ ಕೆಲವರ ಪ್ರಕಾರ ಪ್ರಾಚೀನ ಕಾಲದಲ್ಲಿ ಆಧುನಿಕ ತಂತ್ರಜ್ನಾನ ಇಲ್ಲದಿದ್ದರಕಾರಣ, ದೂರದ ಪ್ರದೇಶಗಳನ್ನು ಗುರುತಿಸಲುಉದ್ದುದ್ದ ಇರುತ್ತಿದ್ದ ಗೋಪುರಗಳು ಉಪಯುಕ್ತವಾಗುತ್ತಿತ್ತು, ಅರ್ಥಾತ್ ಕಿಲೋಮೀಟರ್ಗಟ್ಟಲೆ ದೂರವಿರುತ್ತಿದ್ದ ಪ್ರದೇಶವನ್ನು ಗುರುತಿಸಲು ಇಂದಿನ ಲೇಸರ್ ದೀಪಗಳಂತೆ ಬಳಕೆಯಾಗುತ್ತಿದ್ದವಂತೆ.ಅಷ್ಟೇ ಅಲ್ಲದೇ ವಾಚ್ ಟವರ್ (ಕಾವಲುಗೋಪುರ)ಗಳಾಗಿಯೂ ದೇವಾಲಯದ ಗೋಪುರಗಳನ್ನು ನಿರ್ಮಿಸಲಾಗುತ್ತಿತ್ತು ಎಂಬ ಅಭಿಪ್ರಾಯವಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com