ಈ ಮಂತ್ರ ಪಠಿಸಿದರೆ ಶಾಂತಿ, ಆರೋಗ್ಯ ಸಿದ್ಧಿಸುವುದು ಶತಸಿದ್ಧ!

ಭಾರತೀಯ ಪರಂಪರೆಯಲ್ಲಿ ಮಂತ್ರಗಳಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ.
ಈ ಮಂತ್ರ ಪಠಿಸಿದರೆ ಶಾಂತಿ, ಆರೋಗ್ಯ ಸಿದ್ಧಿಸುವುದು ಶತಸಿದ್ಧ!
ಭಾರತೀಯ ಪರಂಪರೆಯಲ್ಲಿ ಮಂತ್ರಗಳಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ. 
ಮನನಾತ್ ತ್ರಾಯತೇ ಇತಿ ಮಂತ್ರಃ  ಅಂದರೆ ಯಾವುದರ ಮನನವು ರಕ್ಷಿಸುತ್ತದೋ ಅದೇ ಮಂತ್ರವಾಗಿದೆ. ಅಷ್ಟೇ ಅಲ್ಲದೇ ಯಾವುದರ ಬಗ್ಗೆ ಏಕಾಗ್ರತೆಯಿಂದ ಅಂತರಂಗದಲ್ಲಿ ಜಪಿಸುತ್ತೇವೆಯೋ ಅದು ಈಡೇರುತ್ತದೆ, ಇದಕ್ಕೆ ಮಂತ್ರಗಳು ಪೂರಕವಾಗಿರಲಿದೆ ಎಂಬ ನಂಬಿಕೆ ಇದೆ. ಪ್ರತಿ ಮನುಷ್ಯನ ಜೀವನದಲ್ಲಿಯೂ ಆರೋಗ್ಯ ಮತ್ತು ಶಾಂತಿ ಅತ್ಯಗತ್ಯವಾದದ್ದು, ಆ ನಂತರವಷ್ಟೇ ಉಳಿದ ವಿಷಯಗಳಿಗೆ ಹೆಚ್ಚಿನ ಮಹತ್ವ. ಈ ಹಿನ್ನೆಲೆಯಲ್ಲಿ ಮನಸ್ಸಿನ ಶಾಂತಿ ಮತ್ತು ಆರೋಗ್ಯ ವೃದ್ಧಿಸುವುದಕ್ಕಾಗಿಯೇ ಕೆಲವು ಮಂತ್ರಗಳನ್ನು ನೀಡಲಾಗಿದೆ. ಕೆಲವೊಮ್ಮೆ ಪ್ರಾರ್ಥನೆ, ಮಂತ್ರ ಪಠಣಗಳೂ ಪವಾಡ ಸದೃಷ ರೀತಿಯಲ್ಲಿ ಅದ್ಭುತಗಳನ್ನು ಮಾಡಿರುವ ಉದಾಹರಣೆಗಳಿದ್ದು, ಪ್ರಾರ್ಥನೆ ಮತ್ತು ಮಂತ್ರ ಪಠಣ, ಮಾನಸಿಕ ಆರೋಗ್ಯಕ್ಕೆ ಉತ್ತಮವಾಗಿದೆ. ಆರೋಗ್ಯ, ಮನಸ್ಸಿನ ಶಾಂತಿಯನ್ನು ವೃದ್ಧಿಸಲು ಇರುವ ಮಂತ್ರ ಹೀಗಿದೆ. 
ಸರ್ವೇ ಭವಂತು ಸುಖಿನ:|ಸರ್ವೇ ಸಂತು ನಿರಾಮಯ:||
ಸರ್ವೇ ಭದ್ರಾಣಿ ಪಶ್ಯಂತು|ಮಾಕಶ್ಚಿದ್ದು:ಖಭಾಗ್ಭವೇತ್||
ಎಲ್ಲರೂ ಸುಖಿಗಳಾಗಲಿ,ಎಲ್ಲರೂ ರೋಗರಹಿತರಾಗಿ ಇರಲಿ.ಎಲ್ಲರೂ ಒಳ್ಳೆಯದನ್ನು ನೋಡಲಿ,ಯಾರೂ ದು:ಖಿಯಾಗುವುದು ಬೇಡ ಎಂಬುದು ಇದರ ಅರ್ಥವಾಗಿದೆ. ಈ ಮಂತ್ರ ಮನಸ್ಸಿನ ಶಾಂತಿ ಹಾಗೂ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ ಎಂಬ ನಂಬಿಕೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com